ಸ್ಥಳೀಯ ಸುದ್ದಿಗಳು

ಎಪಿಎಂಸಿ ಹಮಾಲರ ಸಮಸ್ಯೆ ಬಗೆಹರಿಸಲಾಗುವುದು-ಸಚಿವ ಶಿವಾನಂದ ಪಾಟೀಲ್

ಸುದ್ದಿಲೈವ್/ಶಿವಮೊಗ್ಗ

ಎಪಿಎಂಸಿ ಬಿಲ್ ಜಾರಿಗೆ ತರುವ ಕುರಿತು ಸರ್ಕಾರಕ್ಕೆ ವರದಿ ನೀಡಲು ಎಲ್ಲಡೆ ಪ್ರವಾಸ ಕೈಗೊಂಡಿದ್ದು ಇಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿರುವುದಾಗಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ ವರದಿ ಸಂಬಂಧ ಎಪಿಎಂಸಿ ಕುಂದುಕೊರತೆಯನ್ನ ಆಲಿಸಲು ಬಂದಿರುವೆ. ಎಪಿಎಂಸಿಯ ಹಮಾಲರಿಗೆ ನೀಡಿರುವ ಸೈಟ್ ಕುರಿತು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಸವದತ್ತಿ ಶಾಸಕ ಹೇಳಿಕೆ ವಿಚಾರನೂ ಮಾತನಾಡಿದ ಸಚಿವರು ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಅಂತಾ ಅವರ ಅಭಿಮಾನಿ ಯಾರೋ ಮಾತನಾಡಿದ್ದಾರೆ. ಒಬ್ಬರು ಇಬ್ಬರು ಯಾರೋ ಮಾತನಾಡಿದ್ದಾರೆ ಅವರು ಮಾತನಾಡಿದ್ರೆ ಏನು ಆಗಲ್ಲ ಎಂದರು.

ಹೊಸದಾಗಿ ಗೆದ್ದಿರುವ ಹುರುಪಿನಲ್ಲಿ ಮಾತನಾಡ್ತಾರೆ. ಹೊಸ ಶಾಸಕರಿಗೆ ಅನುಭವ ಕೊರತೆ ಇರುತ್ತದೆ. ಒಂದೆರಡು ಏಟು ಬಿದ್ದಾಗ ಸರಿ ಹೋಗ್ತಾರೆ ಎಂದು ಹೇಳಿದರು.

ಜಾತಿ ಗಣತಿ ಜಾರಿಗೆ ಸಚಿಚರು, ಶಾಸಕರೇ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಶಿವಾನಂದ ಪಾಟಾಇಲ್ ಜಾತಿ ಗಣತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಆಗ್ತದೆ. ಇದರ ಬಗ್ಗೆ ನಾನು ಏನು ಹೇಳಕ್ಕೆ ಹೋಗಲ್ಲ. ಯವುದೇ ಹೇಳಿಕೆಕೊಟ್ಟರು ಅದು ವೈಯುಕ್ತಿಕವಾಗುತ್ತದೆ ಎಂದರು.

ನಿಗಮ‌ ಮಂಡಳಿ ಅಧ್ಯಕ್ಷರ ನೇಮಕ ಕುರಿತು ಮಾತನಾಡಿದ ಅವರು, ನಿಗಮ ಮಂಡಳಿ ಮಾಡ್ತಾರೆ ಮಾಡಲೇ ಬೇಕು. ಬಹಳಷ್ಟು ಹಿರಿಯ ಶಾಸಕರಿದ್ದಾರೆ. ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಕೊಡುವುದರಲ್ಲಿ ತಪ್ಪೇನು ಇಲ್ಲ. ಕಾರ್ಯಕರ್ತರಿಗು ಕೊಡ್ತಾರೆ ಎಂದರು.

ಎಂಪಿ ಚುನಾವಣೆ ಬರುತ್ತದೆ ಬಂದಾಗ ನೋಡೋಣ ಎಂದಿರುವ ಸಚಿವರು, ಕೆಲವು ಸಚಿವರಿಗೆ ಸ್ಪರ್ಧೆ ಮಾಡಬೇಕು ಅಂತಾ ಹೇಳ್ತಿದ್ದಾರೆ

ನನಗು ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಆಫರ್ ಬಂದಿತ್ತು. ನಾನು ನಾನೇ ಬೇಡ ಅಂತಾ ತಿರಸ್ಕಾರ ಮಾಡಿದ್ದೆ.ಆಸಕ್ತಿ ಇದ್ದವರು ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂದರು.

ಸಚಿವ ಜಮೀರ್ ಅಹಮ್ಮದ್ ಹೇಳಿಕೆ ವಿಚಾರದಲ್ಲಿ ಮಾತನಾಡಲು ಬಯಸದ ಸಚಿವರು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಬಗ್ಗೆ ಅವರನೇ ಕೇಳಿ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/3441

Related Articles

Leave a Reply

Your email address will not be published. Required fields are marked *

Back to top button