ಸ್ಥಳೀಯ ಸುದ್ದಿಗಳು
ಎರಡು ದಿನಗಳ ಕಾಲ ನೆಹರು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಪುರುಷರ ಆಹ್ವಾನ ಫುಟ್ ಬಾಲ್ ಪಂದ್ಯಾವಳಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಯುನೈಟೆಡ್ ಫುಟ್ ಬಾಲ್ ಕ್ಲಬ್ ಆಶ್ರಯದಲ್ಲಿ ಅ.20 ರಿಂದ 22 ರ ವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಇಂಡಿಪೆಂಡೆನ್ಸ್ ಕ್ಲಬ್ ರಾಜ್ಯಮಟ್ಟದ ಪುರುಷರ ಆಹ್ವಾನ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿದೆ.
ಈ ಪಂದ್ಯಾವಳಿಯಲ್ಲಿ ಬೆಂಗಳೂರು ಮೈಸೂರು ಚಿಕ್ಕಮಗಳೂರು ದಾವಣಗೆರೆ ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಂಗಳೂರು ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಗಳಿಂದ ತಂಡಗಳು ಭಾಗವಹಿಸುತ್ತಿವೆ.
ಸುಮಾರು 23 ವರ್ಷಗಳ ನಂತರ 11 ಆಟಗಾರರ ತಂಡದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವುದು ಶಿವಮೊಗ್ಗದ ಎಲ್ಲಾ ಫುಟ್ಬಾಲ್ ಕ್ರೀಡಾ ಪ್ರೇಮಿಗಳಿಗೆ ಸಂತಸ ತಂದಿದೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಈ ಫುಟ್ಬಾಲ್ ರಸದೌತಾಣವನ್ನು ಸವಿಯ ಬೇಕಾಗಿ ಶಿವಮೊಗ್ಗ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ಕಾರ್ಯದರ್ಶಿ ಸುಸೈನಾದನ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/1507
