ರಾಜಕೀಯ ಸುದ್ದಿಗಳುಸ್ಥಳೀಯ ಸುದ್ದಿಗಳು

ಭಿಕ್ಷಕ ಸರ್ಕಾರ-ಚೆನ್ನಬಸಪ್ಪ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ಮತ್ತು ಮಕ್ಕಳಿಗೆ ವಿಶೇಷ ಯೋಜನೆಯನ್ನ ಬಿಜೆಪಿ ಸರ್ಕಾರ ಜಾರಿಗೊಳಿಸಿತ್ತು. ಈ ಯೋಜನೆಗಳಲ್ಲಿ ಒಂದು ಯೋಜನೆಯನ್ನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಇದು ಭಿಕ್ಷುಕ ಸರ್ಕಾರ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದರು.

137 ಶಿಶುಪಾಲನ ಕೇಂದ್ರವನ್ನ‌ಏಕಾಏಕಿ ಸರ್ಕಾರ ನಿಲ್ಲಿಸುವುದುದರಿಂದ ಸಾವಿರಾರು‌ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಂತಾಗಿದೆ. ಇದರಿಂದ ಕಾರ್ಮಿಕ ಕಲ್ಯಾಣ ಇಲಾಖೆಯ ಕಲ್ಯಾಣ ಕಾರ್ಯಕ್ರಮ ಸ್ಥಗಿತಗೊಂಡಿದೆ. ಇಲ್ಲಿನ ಪೀಠೋಪಕರಣಗಳನ್ನ‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಸೂಚಿಸಿದೆ ಎಂದರು.

ಕಾರ್ಮಿಕ ಸಚಿವ ಸಙತೋಷ್ ಲಾಡ್ 137 ಶಿಶುಪಾಲನಾ ಕೇಂದ್ರ ಬಂದ್ ನಾಡಿರುವುದನ್ನ ಸಮರ್ಥಿಸಿಕೊಂಡಿದ್ದಾರೆ. ನ.30 ರಂದು ಸಂಪೂರ್ಣ ಬಂದ್ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಮಧ್ಯಾಹ್ನದ ಊಟ ಬಂದ್ ಆಗಿದೆ. ಮಕ್ಕಳನ್ನ ನಡುನೀರಿನಲ್ಲಿ ಕೈ ಬಿಟ್ಟಂಗೆ ಆಗಿದೆ. ಈಗ ಮಕ್ಕಳು ಶೈಕ್ಷಣಿಕ ವರ್ಷ ಮುಗಿದುಹೋದಂತೆ ಆಗಿದೆ.

ಬೋಗಸ್ ಕಾರ್ಡ್ ಇರುವುದರಿಂದ ಬಂದ್ ಮಾಡುವುದಾಗಿ ಸಚಿವರು ಹೇಳುತ್ತಾರೆ. ಬೋಗಸ್ ಕಾರ್ಡ್ ಇದ್ದರೆ ಯಾರಿಗೆ ಶಿಕ್ಷೆಕೊಡಬೇಕು? ಎಂದು ಪ್ರಶ್ನಿಸಿದ ಶಾಸಕರು, ಹಣ ವ್ಯಯವಾಗುತ್ತದೆ ಎಂಬ ಕಾರಣ ನೀಡಲಾಗಿದೆ. ಪೋಷಕರ ಕಥೆ ಏನು? ಎಂದು ಕೇಳಿದರು.

ಪರ್ಯಾಯ ವ್ಯವಸ್ಥೆ ಇಲ್ಲದೆ ಮಯಚ್ಚಿರುವುದು ಅಕ್ಷಮ್ಯ ಅಪರಾಧವಾಗಿದೆ ಬೋಗಸ್ ಕಾರ್ಡ್ ಹಂಚಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿತ್ತು.ಅದನ್ನ‌ಬಡ ಕಾರ್ಮಿಕರ ಗತಿ ಏನು? ಹಳೇ ಸರ್ಕಾರದಲ್ಲಿದ್ದ ಅಧಿಕಾರಿಗಳೇ ಈಗಲೂ ಇರೋದು ಬೇಜವಬ್ದಾರಿಯ ಕಟ್ಟತುದಿಗೆ ತಲುಪಿದ್ದಾರೆ. ಮತ್ತೆ ಶಿಶುಪಾಲನಾ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದರು.

ಪ್ರತಿ ಗ್ರಾಪಂ ಗಳಲ್ಲಿ ಗ್ರಾಮೀಣ ಮಕ್ಕಳ ಪಾಲನೆಗಾಗಿ ಗ್ರಾಮೀಣ ಭಾಗದಲ್ಲಿ ಶಿಶುಪಾಲನ ಕೇಂದ್ರ ಆರಂಭಿಸುವುದಾಗಿ ತಿಳಿಸಿದರು. 4000 ಗ್ರಾಪಂ ನಲ್ಲಿ ಈ ಕೇಂದ್ರ ಆರಂಭಿಸುವುದಾಗಿ ಹೇಳಿರುವುದು ಮತ್ತು 137 ಕೇಂದ್ರ ಮುಚ್ಚುವ ನಿರ್ಧಾರ ತೊಗಲಕ್ ಆಡಳಿತದ ಮಾದರಿಯಾಗಿದೆ ಎಂದರು.

ಸೇಡಿನ ರಾಜಕಾರಣವೂ ಶಿಶುಪಾಲನಾ ಕೇಂದ್ರ ಮುಚ್ಚುವ ಹಿನ್ಬಾರ ಅಡಗಿದೆ.‌ಶಿವಮೊಗ್ಗದಲ್ಲಿ ಎರಡು ಕೇಂದ್ರಗಳಿಂದ 70 ಜನಮಕ್ಕಳಿಗೆ ಅನಗಯಾಯವಾಗಿದೆ. ತಕ್ಷಣದಿಂದ ಬಂದ್ ಮಾಡಿರುವ 137 ಕೇಂದ್ರ ಆರಂಭಿಸಬೇಕು. ಸರಿಯಾದ ಆಲೋಚನೆ ಇಲ್ಲದೆ ಹಿಂದಿನ ಸರ್ಕಾರದ‌ಯೋಜನೆ ಎಂಬ ಕಾರಣಕ್ಕೆ ಶಿಶು ಪಾಲನಾ ಕೇಂದ್ರವನ್ಬ ಕಿತ್ತುಹಾಕಲಾಗುತ್ತಿದೆ ಎಂದು ಆಗ್ರಹಿಸಿದರು.

1 ರಿಂದ 5 ನೇ ತರಗತಿ ಮಕ್ಕಳಿಗೆ ಬಿಜೆಪಿ ಸರ್ಕಾರ 5000 ನೀಡುತ್ತಿತ್ತು. ಈಗಿನ ಕಾಂಗ್ರೆಸ್ 1100 ರೂ. ನೀಡಲು ಯೋಜಿಸಿದೆ. 8 ಮತ್ತು 9 ನೇ ತರಗತಿ ಮಕ್ಕಳಿಗೆ 8 ಸಾವಿರ ರೂ ನೀಡಲಾಗುತ್ತಿತ್ತು. ಈಗಿನ ಸರ್ಕಾರ 1150 ರೂ. ನೀಡಲು ನಿಶ್ವಿಯಿಸಿದೆ. ಹೀಗೆ ವಿವಿಧ ಹಂತದ ತರಗತಿ ಮಕ್ಕಳಿಗೆ ಹಣ ಕಡಿತಗೊಳಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಿಜೆಪಿಯ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4035

Related Articles

Leave a Reply

Your email address will not be published. Required fields are marked *

Back to top button