ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸರ್ಕಾರಿ ಆದೇಶ ಪಾಲಿಸಲಿ-ಹೆಚ್ ಎಸ್ ಸುಂದರೇಶ್

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸರ್ಕಾರಿ ನಿಯೋಜನೆ ಅಂತೆ ವರ್ಗಾವಣೆ ಆದರೂ ಶಿವಮೊಗ್ಗದಲ್ಲಿರುವುದು ಖಂಡನೀಯ. ಒಂದು ವೇಳೆ ಸರ್ಕಾರದ ಆದೇಶವನ್ನ ಉಲ್ಲಂಘಿಸಿದರೆ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಎಚ್ಚರಿಸಿದರು. .
ಅವರುಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಎಲ್ಲಿ ವರ್ಗಾವಣೆ ಆಗಿದೆಯೋ ಅಲ್ಲಿಗೆ ಹೋಗಿ ಕೆಲಸಮಾಡಿ ಎಂದು ತಾಕೀತು ಮಾಡಿದರು.
ಅವರು ಜಿಲ್ಲಾಉಸ್ತುಚಾರಿ ಸಚಿವರ ವಿರುದ್ಧ ಮಾತನಾಡಿರುವುದು ಗೊತ್ತಾಗಿದೆ. ಅವರ ವಿರುದ್ಧ ಅನೇಕ ಆರೋಪ ಬಂದಿದೆ ಅದನ್ನ ಕೆಣಕೋದು ಬೇಡ. ಸರ್ಕಾರದ ನಿರ್ಧಾರದಂತೆ ವರ್ಗಾವಣೆ ಆಗಿ ಎಂದು ತಾಕೀತು ಮಾಡಿದರು.
ರಾಜ್ಯ ಸರ್ಕಾರ 34 ಸಾವಿರ ಕೋಟಿ ಬೆಳೆ ಹಾನಿ ಎಂದಿದೆ ಇದು ಹೆಚ್ಚಿಗೆ ಆಗುವನಿರೀಕ್ಷೆ ಇದೆ. ಕೇಂದ್ರ ಬಳಿ 17 ಸಾವಿರ ಕೋಟಿ ರೂ ಹಣ ಕೇಳಿದೆ.50-50, ಅನುಪಾತದಲ್ಲಿ ಕೆಲಸ ಆಗಬೇಕಿದೆ. ಆದರೆ ಕೇಂದ್ರ ಇದುವರೆಗೂ ಒಂದು ರೂ. ನೀಡಿಲ್ಲ. ರಾಜ್ಯದ ಎಂಪಿ ಅವರು ಕೇಂದ್ರದ ಬಳಿ ಮಾತನಾಡುವಂತೆ ಆಗ್ರಹಿಸಿದರು.
ಜೆಜೆಎಂ ತನಿಖೆಗೆ
ಸಿಎಂ ಡೆಪ್ಯೂಟಿ ಸಿಎಂಮತ್ತು ಕಂದಾಯ ಸಚಿವರು ಕಶೆಂದ್ರದಬಳಿ ಹೋಗಿ ಪ್ರಸ್ತಾವನೆ ಸಲ್ಲಿಸಿ ಬಂದಿದ್ದಾರೆ ಒಂದು ತಿಂಗಳು ಕಳೆದಿದೆ. ಆದರೆ ಒಂದು ರೂ. ಬಂದಿಲ್ಲ. ಜಲಜೀವನ್ ಮಿಷನ್ ಯೋಜನೆಗೆ ರಾಜ್ಯಕ್ಕೆ 15 ಸಾವಿರ ಕೋಟಿ ವ್ಯಯಮಾಡಿದೆ. ಆದರೆ ಒಂದು ಮನೆಯಲ್ಲೂ ನೀರು ಬರುತ್ತಿಲ್ಲ. ಪೈಪ್ ಲೈನ್ ಹಾಕಲಾಗಿದೆ. ಆದರೆ ಒಂದು ಹನಿ ನೀರು ಬರುತ್ತಿಲ್ಲ. ಇದನ್ನೂ ತನಿಖೆಗೆ ಹಾಕಲಾಗಿದೆ ಎಂದರು.
ಸೋನಿಯಾ ಗಂಧಿ ರಾಹುಲ್ ಗಾಂಧಿ ಕುಟುಂಬ ರಾಜಕಾರಣ ಎಂದು ಹೇಳಿಕೊಂಡು ಬೊಗಳೆ ಬಿಡುತ್ತಿದ್ದ ಬಿಜೆಪಿ ಈಗ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ವಿಜೇಂದ್ರರಿಗೆ ಪಟ್ಟಾಭಿಷೇಕ ಮಾಡಿದೆ.
ಮುಖಂಡರು ಶಾದಕಬೇಳೂರು ವಿರುದ್ಧ ಬೆಂಗಳೂರಿಗೆ ಹೋಗಿದ್ದಾರೆ. ಸಣ್ಣಪುಟ್ಟ ಭಿನ್ಬಾಭಿಪ್ರಾಯವಿರುತ್ತೆ. ಬಿಜೆಪಿಯಲ್ಲಿ ಈಶ್ವರಪ್ಪ ಮತ್ತು ಯಡೊಯೂರಪ್ಪನವರ ನಡುವೆಯೂ ಭಿನ್ನಾಭಿಪ್ರಾಯವಿತ್ತು. ಹಾಗೆ ಪಕ್ಷದಲ್ಲಿ ಇರುತ್ತೆ ಸರಿಪಡಿಸಿಕೊಳ್ಳಲಾಗುವುದು ಎಂದರು.
ಆಯನೂರು ಮಾತು
ಆಯನೂರು ಮಾತನಾಡಿ ಷಡಾಕ್ಷರಿಯ ವರಘಾವಣೆ ಸೇಡಿನ ವರ್ಗಾವಣೆ ಎಂದಿದ್ದಾರೆ ಅದು ಸರಿಯಲ್ಲ. ರಾಜ್ಯಾಧ್ಯಕ್ಷರ ವರ್ಗಾವಣೆ ಆಗಿಲ್ಲ. ಕಾನೂನಲ್ಲಿ ರಕ್ಷಣೆ ಇದೆ.ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆಗೆ ಬಂದಿದೆ ತಪ್ಪಾಗಿದೆ ಎಂಬುದು ವರದಿ ಇದೆ. ಅದರಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸ್ವತಃಷಡಾಕ್ಷರಿಯವರೆ ತನಿಖೆಯನ್ನ ಸ್ವಾಗತಿಸಿದ್ದಾರೆ ಎಂದರು.
ಪ್ರನಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಸರ್ಕಾರಿ ನೌಕರರ ಬಗ್ಗೆ ಕಾಳಜಿ ಇದೆ. ಒಪಿಎಸ್ ತರಲು ಹೇಳಿದ ಮೊಟ್ಟ ಮೊದಲ ನಾಯಕ ಮಧು ಬಂಗಾರಪ್ಪನವರು.ಶಿಕ್ಷಕರನ್ನನೇಮಿಸಲಾಗುತ್ತಿದೆ. ಸರ್ಕಾರ ನೌಕರನ ವಿರುದ್ಧ ಆಪಾದನೆ ಬಂದಾಗ ತನಿಖೆಗೆ ಅನುಕೂಲವಾಗಲಿ ಎಂದು ವರ್ಗ ಆಗಿದೆ. ಅವರು ಕೆಎಟಿಗೆ ಹೋಗಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೇಮಕ ವಾಗಿರುವುದು ಕಾಂಗ್ರೆಸ್ ಗೆ ಹೆದರಿ ನೇಮಕವಾಗಿದೆ ವಿಪಕ್ಷ ಸ್ಥಾನ ತುಂಬಬೇಕಿದೆ.ಬಿಎಸ್ ವೈ ನ್ನ ವಯಸ್ಸಾಯ್ತು ಎಂದು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈಗ ತೇಪೆಹಚ್ಚಲು ಬಿವೈ ವಿಜೇಂದ್ಋನ್ನ ನೇಮಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ಎಸ್ ಕೆ ಮರಿಯಪ್ಪ, ಜಿ.ಡಿ.ಮಂಜುನಾಥ್, ಮಾಜಿ ಎಂ ಎಲ್ ಸಿ ಪ್ರಸನ್ನ ಕುಮಾರ್ ವೈ.ಹೆಚ್.ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/2888
