ಸ್ಥಳೀಯ ಸುದ್ದಿಗಳು
ನ.14 ರಂದು ಗೋಪಾಳದ ಸುರಬಿ ಸಮುದಾಯ ಭವನಲ್ಲಿ ಸಾಮೂಹಿಕ ಗೋ ಪೂಜೆ

ಸುದ್ದಿಲೈವ್/ಶಿವಮೊಗ್ಗ

ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 14 ರ ಬಲಿಪಾಡ್ಯಮಿ ದಿನದಂದು ಬೆಳಗ್ಗೆ 10 ಗಂಟೆಗೆ ಗೋಪಾಳದ ಚಾಲುಕ್ಯ ನಗರದಲ್ಲಿನ ಸುರಭಿ ಸಮುದಾಯ ಭವನದಲ್ಲಿ ಗೋಪಾಳ ಬ್ರಾಹ್ಮಣ ಸಂಘದ ವತಿಯಿಂದ ಸಾಮೂಹಿಕ ಗೋಪೂಜೆ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯರಾದ ಲಕ್ಷ್ಮಿ ಶಂಕರನಾಯ್ಕ್ ಮತ್ತು ಮಂಜುನಾಥ್, ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಆಗಮಿಸಲಿದ್ದಾರೆ.
ಸ್ವತಃ ಗೋಪೂಜೆ ಮಾಡುವವರು ೨೦೦ ರು. ಶುಲ್ಕ ಪಾವತಿಸಿ ಹೆಸರು ನೊಂದಾಯಿಸಬೇಕಿದೆ. ಸ್ಥಳದಲ್ಲಿಯೂ ಹೆಸರು ನೊಂದಾಯಿಸಬಹುದು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರಾದ ಸುರೇಶ್ ಉಮಾರಾಣಿ ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ ಹಾಗೂ ಗೋಪೂಜೆಗೆ ಹೆಸರು ನೋಂದಾಯಿಸಲು 9448229954 ಗೆ ಸಂಪರ್ಕಿಸಬಹುದು.
ಇದನ್ನೂ ಓದಿ-https://suddilive.in/archives/2869
