ರಾಜಕೀಯ ಸುದ್ದಿಗಳು

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೋವು ಹಿಡಿದುಕೊಂಡು ಬಂದು ಬಿಜೆಪಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ನಂದಿನಿ  ಹಾಲಿನ  ದರದಲ್ಲಿ  ಕಾಂಗ್ರೆಸ್ ಸರ್ಕಾರದಿಂದ  ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ  ಮತ್ತು ರೈತ ವಿರೋಧಿ  ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಗೋವುಗಳನ್ನು ತಂದು ಪ್ರತಿಭಟನೆ ನಡೆಸಲಾಗಿದೆ. ಹಾಲಿನ ಪ್ರೋತ್ಸಾಹ ಧನ ನೀಡದ ಹಿನ್ನೆಲೆ ಪ್ರತಿಭಟನೆ ನಡೆಸಲಾಗಿದೆ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ, ರೈತರಿಗೆ ಕೊಡುವ 750 ಕೋಟಿ ಸಹಾಯ ಧನ ಕೊಟ್ಟಿಲ್ಲ. ಇದರಿಂದ 28 ಲಕ್ಷ ರೈತರಿಗೆ ಅನ್ಯಾಯ ಆಗಿದೆ. ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡುತ್ತಿದೆ. ರೈತ, ಗೋವುಗಳ ಶಾಪದಿಂದ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್  ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಸರ್ಕಾರವು ದಿವಾಳಿ ಆಗಿದೆ. ಸರ್ಕಾರದ ದುಡ್ಡಿನಿಂದ ದೆಹಲಿಗೆ ಹೋಗುತ್ತಿದ್ದಾರೆ. ಮತ್ತೆ ಡಿಕೆ ಶಿವಕುಮಾರ್ ಯಾವಾಗ ಜೈಲಿಗೆ ಹೋಗ್ತಾರೆ ಗೊತ್ತಿಲ್ಲ. ಮಹಾತ್ಮ ಗಾಂಧಿಯವರ ಪೋಟೋ ದುರುಪಯೋಗ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಯವರ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಹಾಲಿನ‌ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿಕೆಶಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಈಶ್ವರಪ್ಪ, ರಾಜ್ಯದಿಂದ ಸಂಗ್ರಹ ವಾಗುವ ಹಣವನ್ನ ಕೇಂದ್ರ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿರುವ ಅವರು ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ.

ಇತ್ತೀಚೆಗೆ ಡಿಸಿಎಂ ಡಿಕೆಶಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನ ಭೇಟಿ ಮಾಡಿ ಸರಿಯಾದ ಪ್ರಮಾಣದಲ್ಲಿ ಹಣ ಹಂಚಿಕೆಯಾಗುತ್ತಿರುವ ಬಗ್ಗೆ ವಿವರ ಪಡೆದುಕೊಂಡು ಹೋಗಿದ್ದಾರೆ ಎಂದು ನಿನ್ನೆ ಹಣಕಾಸು ಸಚಿವೆ ಸಂಸತ್ ನಲ್ಲಿ ಹೇಳಿದ್ದಾರೆ. ಇದನ್ನ ಸಚಿವೆ ನಿರ್ಮಾಲ ಸೀತಾರಾಮ್ ಬಹಿರಂಗ ಪಡಿಸದಿದ್ದಾರೆ ನಮಗೆ ಗೊತ್ತಾಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು‌.

ಸ್ಪಷ್ಟನೆ ತೆಗೆದುಕೊಂಡು ಹೋದ ಮೇಲೂ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಲ್ಲಿ ಗಾಂಧಿ ಫೋಟೊ ಮತ್ತು ತಮ್ಮ ಪೋಟೊ ಹಾಕಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹೋಗಿದ್ದಾರೆ. ಏನು ಪಿಕ್ ನಿಕ್ ಗೆ ಹೊರಟಿದ್ದಾರಾ‌ ಅಥವಾ ಯುದ್ಧಕ್ಕೆ ಹೊರಟಿದ್ದಾರಾ ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರು ಶ್ವೇತ ಪತ್ರ ಹೊರಡಿಸುವುದಾಗಿ ಆಗಾಗ್ಗೆ ಹೇಳುತ್ತಿರುತ್ತಾರೆ. ಮೊದಲು ಶ್ವೇತಾ ಪತ್ರ ಹೊರಡಿಸಬೇಕು. ಆಗ ನಿಮ್ಮ ಬಂಡವಾಳ ಹೊರಗೆ ಬರುತ್ತದೆ.  ದೆಹಲಿಯಿಂದ ವಾಪಾಸ್ ಬಂದ ತಕ್ಷಣ ಸಿದ್ದರಾಮಯ್ಯ 750 ಕೋಟಿ ರೂ. ರೈತರ ಬಾಕಿ ಹಣದ ಬಗ್ಗೆ ಸ್ಪಷ್ಟಪಡಿಸುವಂತೆ ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಚೆನ್ನಬಸಪ್ಪ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8523

Related Articles

Leave a Reply

Your email address will not be published. Required fields are marked *

Back to top button