ಸ್ಥಳೀಯ ಸುದ್ದಿಗಳು

ರಾಗಿಗುಡ್ಡದಲ್ಲಿ ಸಾರ್ವಜನಿಕರ ಸಭೆ-ಏನೆಲ್ಲಾ ಭರವಸೆಗಳು ಈಡೇರುತ್ತಿವೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಎಸ್ಪಿ ಮಿಥುನ್ ಕುಮಾರ್, ಅಡಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಧೀರಾಜ್ ಹೊನ್ಬವಿಲೆ ಅವರ‌ ನೇತೃತ್ವದಲ್ಲಿ ಸಾರ್ವಜನಿಕ ಸಭೆ ನಡೆದಿದೆ. ಸಭೆಯಲ್ಲಿ ಸಾರ್ವಜನಿಕರಿಗೆ ಬಹುತೇಕ ಪಾಸಿಟಿವ್ ಭರವಸೆಗಳನ್ನ ನೀಡಲಾಗಿದೆ.

ಈದ್ ಮಿಲಾದ್ ಮೆರವಣಿಗೆ ಸಮಯದಲ್ಲಿ ನಡೆದ ಗಲಭೆ ಪ್ರಕರಣ ಇಡೀ ಶಿವಮೊಗ್ಗ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಗಲಭೆಯ ಹಿನ್ನಲೆಯಲ್ಲಿ ರಾಗಿಗುಡ್ಡದಲ್ಲಿ  ಸೆಕ್ಷನ್144 ಜಾರಿಗೊಳಿಸಿ ತಿಂಗಳಾನು ಗಟ್ಟಲೆ ಮುಂದು ವರೆಸಲಾಗಿತ್ತು. ಗಲಭೆಯಲ್ಲಿನ ಆರೋಪಿಗಳು ಕೆಲವರು ಬಂಧಿತರಾದರೆ ಇನ್ನೂ ಕೆಲವರು ಇನ್ನೂ ಪತ್ತೆನೇ ಆಗಿಲ್ಲ.

ಸಧ್ಯಕ್ಕೆ ರಾಗಿಗುಡ್ಡ ಶಾಂತಿಯಾಗಿದೆ. ಗಲಭೆ ಪ್ರಕರಣ ನಡೆದು ಇಂದಿಗೆ ಎರಡು ತಿಂಗಳು 17 ದಿನ ಕಳೆದಿದೆ. ಜಿಲ್ಲಾಡಳಿತ ಇಂದು ಸಾರ್ವಜನಿಕರ ಶಾಂತಿ ಸಭೆ ನಡೆಸಿದ್ದಾರೆ. ಶಾಂತಿ ಸಭೆಯಲ್ಲಿ , ಸರ್ಕಾರಿ ಬಸ್, ಯುಜಿಡಿ, ಕುಡಿಯುವ ನೀರು, ಪಿಹೆಚ್ ಸಿ, ನಮ್ಮೂರ ಕ್ಲೀನಿಕ್ ಎಂಬ ಮೂಲಭೂತ ಸೌಕರ್ಯದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಈ ಎಲ್ಲಾ ಬೇಡಿಕೆಗಳನ್ನ ಈಡೇರಿಸಲು ಸಿದ್ದರಿರುವುದಾಗಿ ತಿಳಿಸಿದ್ದಾರೆ. ಅತಿ ಶೀಘ್ರದಲ್ಲಿಯೇ ನಮ್ಮೂರ ಕ್ಲೀನಿಕ್ ನ್ನ ರಾಗಿಗುಡ್ಡದಲ್ಲಿ ನೀಡಲು ಸಿದ್ದರಿರುವುದಾಗಿ‌ ಘೋಷಿಸಿದ್ದಾರೆ. ಶಿವಮೊಗ್ಗಕ್ಕೆ 9 ನಮ್ಮೂರ ಕ್ಲೀನಿಕ್ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಅದರಲ್ಲಿ ಒಂದನ್ನ ರಾಗಿಗುಡ್ಡಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಮಾತನಾಡಿ ಶಾಂತಿ ಪಡೆ ರಚನೆಯ ಬಗ್ಗೆ ಮಾತನಾಡಿದ್ದಾರೆ. ರಾತ್ರಿಯ ಹೊತ್ತು ಪೊಲೀಸರಂತೆ ಶಾಂತಿ ಪಡೆಯಲ್ಲಿ ಸಾರ್ವಜನಿಕರನ್ನ‌ ಪಾಲ್ಗೊಳ್ಳುವಂತೆ ಮಾಡಿ ಅವರಿಂದಲೇ ಕೆಲಸ ತೆಗೆದುಕೊಳ್ಳುವ ಚತುರತೆ ಇದರಲ್ಲಿ ಅಡಗಿದೆ. ದುಷ್ಟಶಕ್ತಿಯ ವಿರುದ್ಧ ಸಾರ್ವಜನಿಕರು ಬಾಯಿಮುಚ್ಚಿಕೊಳ್ಳುವುದಲ್ಲ ಧ್ವನಿ ಎತ್ತಬೇಕೆಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಒಂದು ಕೆಟ್ಟ ಘಟನೆಯಿಂದ ಆರಂಭಗೊಂಡ ಕೆಲಸ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಹೇಗೆ ನಡೆಯಲಿದೆ ಕಾದುನೋಡಬೇಕಿದೆ.

ಇದನ್ನೂ ಓದಿ-https://suddilive.in/archives/4988

Related Articles

Leave a Reply

Your email address will not be published. Required fields are marked *

Back to top button