ಸ್ಥಳೀಯ ಸುದ್ದಿಗಳು

ಕ್ಯಾಟ್ ಶೋನಲ್ಲಿ ಸುಲ್ತಾನ್ ನ ಹವ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸೆಕ್ರೆಡ್ ಹಾರ್ಟ್ ನಲ್ಲಿರುವ ಸ್ನೇಹ ಭವನದಲ್ಲಿ ಕ್ಯಾಟ್ ಶೋ ನಡೆದಿದೆ. ಕ್ಯಾಟ್ ಶೋನಲ್ಲೂ ಸುಲ್ತಾನ್, ಶಫೇರ್, ಲೈಲಾ ಎಂಬ ಬೆಂಗಾಲಿ ಬೆಕ್ಕು ಗಳು ಹವ ಇಟ್ಟಿವೆ.

ಕ್ಯಾಟ್ ಶೋನಲ್ಲಿ 120 ಕ್ಕೂ ಹೆಚ್ಚು ಬೆಕ್ಕುಗಳು ನೋಂದಣಿಯಾಗಿದೆ.  199 ರೂ. ಬೆಕ್ಕಗಳ ನೋದಣಿಗೆ ಶುಲ್ಕ ನಿಗದಿಪಡಿಸಲಾಗಿದೆ. 7 ರೀತಿ ಬ್ರೀಡ್ ಗಳ ಪ್ರದರ್ಶನವಾಗಿದೆ. ಪರ್ಷಿಯನ್, ಬೆಂಗಾಲ್, ಮೇನ್ ಕೂನ್, ಬ್ರಿಟೀಶ್ ಶಾರ್ಟ್ ಹೇರ, ಕ್ಲಾಸಿಕ್ ಲಾಂಗ್ ಹೇರ್, ಎಕ್ಸೈಟಿಕ್ ಶಾರ್ಟ್ ಹೇರ್ ಮತ್ತು ಇಂಡಿಮೋ‌ ಎಂಬ ಲೋಕಲ್ ಕ್ಯಾಟ್ ಗಳು ಪ್ರದರ್ಶನಗೊಂಡಿದೆ. ಪರ್ಶಿಯನ್ ನಿಂದ ಇಂಡಿಮೋ ವರೆಗೆ ಬೆಕ್ಕುಗಳು ಮೂರು ಲಕ್ಷ ರೂ.ವರೆಗೆ ಮಾರಾಟವಾಗಲಿದೆ.

ಮಾಲೀಕರು ಎತ್ತುಕೊಂಡು ಬರುವುದು, ಸಾಕಿರುವುದು ಬಗ್ಗೆ ಪ್ರಶ್ನಿಸಲಾಯಿತು. ಯಾರು ಉತ್ತಮವಾಗಿ ಸಾಕಿರುತ್ತಾರೆ. ಮತ್ತು‌ಬೆಕ್ಕಿನ ಅಗತ್ಯವನ್ನ ಅರಿತು ಉತ್ತರಿಸುತ್ತಾರೆ ಅವರಿಗೆ ಪ್ರಶಸ್ತಿ ಈ ಕ್ಯಾಶೋನಲ್ಲಿ ನಡೆಯಲಿದೆ. 10 ಟಾಪ್ ಟೆನ್ ತನಕ ಪ್ರಶಸ್ತಿ ಲಭಿಸುತ್ತದೆ. ಪ್ರವೇಶದ್ವಾರದಲ್ಲಿ ಕ್ಯಾಟ್ ವ್ಯಾಕ್ಸಿನೇಷನ್ ಸಹ ರಚಿಸಲಾಗಿದೆ.

ಗೇಟ್ ವೇ ಕ್ಯಾಟ್ ಕ್ಲಬ್ ವತಿಯಿಂದ ಈ ಕ್ಯಾಟ್ ಶೋ ನಡೆದಿದೆ. ಕ್ಲಬ್ ನ ಪ್ರೆಸಿಡೆಂಟ್ ಮಹಮದ್ ಅದ್ನಾನ್ ಎಂ ಉತ್ತಮವಾಗಿ ಅಯೋಜಿಸಿದ್ದಾರೆ.
ಮಹರಾಷ್ಟ್ರ ಹುಬಳಿ, ಕಲ್ಕತ್ತಾ ಮೊದಲಾದವುಗಳಿಗೆ ಬೆಕ್ಕುಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಶಿವಮೊಗ್ಗ ಮೊಹಮದ್ ಲುಕ್ಮಾನ್ ಎಹಮದ್ ಮತ್ತು ಪ್ರಸಾದ್  ಈ ಕ್ಯಾಟ್ ಪ್ರದರ್ಶನದಲ್ಲಿ ಸಾಥ್ ನೀಡಿದ್ದರು.

ಮೈಸೂರಿನ ಹಮೀದ್ ಸುಲ್ತಾನ್ ನನ್ನ ಸಾಕಿದ್ದಕ್ಕೆ ಪ್ರಶಸ್ತಿ ಬಂದಿದೆ. ಈ ಕುರಿತು ಮಾತನಾಡಿದ ಹಮೀದ್ ಸುಲ್ತಾನ್ ಬ್ರೀಡು ಯಾವುದೇ ಆಕ್ರಮಣ ಶಾಲಿ ಬರಕ್ಕಲ್ಲ. ನೋಡಲು ಹುಲಿ ತರ ಕಾಣುತ್ತೆ. ರಷ್ಯದಲ್ಲಿ ಮಹಿಳೆಯ ಒಬ್ಬಳು ಬೆಂಗಾಲ್ ಬ್ರೀಡ್ ಕಂಡಿಹಿಡಿದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/7876

Related Articles

Leave a Reply

Your email address will not be published. Required fields are marked *

Back to top button