ಸ್ಥಳೀಯ ಸುದ್ದಿಗಳು

ಡಿ.06 ರಿಂದ 10 ವರೆಗೆ ಸ್ವದೇಶಿ ಮೇಳ

ಸುದ್ದಿಲೈವ್/ಶಿವಮೊಗ್ಗ

ಸ್ವದೇಶಿ ಮುಂಚ್ ವತಿಯಿಂದ, ಡಿ.06 ರಿಂದ 10 ರವರೆಗೆ ಫ್ರೀಡಂ ಪಾರ್ಕ್ ನಲ್ಲಿ ಸ್ವದೇಶಿ ಮೇಳ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವದೇಶ್ ಮಂಚ್ ನ ಪ್ರೊ.ಕುಮಾರಸ್ವಾಮಿ, 1991 ರಲ್ಲಿ ಡಬ್ಲ್ಯೂಟಿಒ ನಿಂದ ಗುಡಿಕೈಗಾರಿಕೆಗಳು, ಸಣ್ಣ ಮತ್ತು ಸಣ್ಣ ಉದ್ದಿಮೆಗಳು ಮುಚ್ಚಿಕೊಳ್ಳಲು ಆರಂಭವಾಗಿತ್ತು. ಇವುಗಳನ್ನ ಬೆಂಬಲಿಸಿ ನ.22 1991 ರಲ್ಲಿ ಪ್ರಾರಂಭವಾಯಿತು.

ಈ ವರ್ಷದ 2023 ರ ನ.22 ಕ್ಕೆ  32 ವರ್ಷ ಮುಗಿದಿದೆ. ಐದು ದಿನಗಳ ಕಾಲ ದೇಶಿಯ ಉದ್ದಿಮೆಗಳ ಬಗ್ಗೆ ಜನರಲ್ಲಿ ಸ್ವದೇಶಿ ವಸ್ತುಗಳ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ. ಪ್ರತಿದಿನ ಸಾಂಸ್ಕೃತಿ ಮೇಳ, ಆಹಾರ ಮೇಳ, ಹಮ್ಮಿಕೊಳ್ಳಲಾಗಿದೆ.

ಆರ್ಥಿಕ ದೇಶ ಭಕ್ತಿಯನ್ನ‌ ಸ್ವದೇಶಿ ಎಂದು ಕರೆಯಲಿದ್ದಾರೆ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ತಾರ್ಸಿ ತೋಟ, ದೇಶಿಯ ಕ್ರೀಡೆ, ಬ್ಯಾಂಕ್, ರಂಗೋಲಿ ಸ್ಪರ್ಧೆ, ಕ್ರೊನಿಕಲ್ ಡಿಸೀಸ್, ರೈತರೊಂದಿಗೆ ಸಂವಾದ ಕಾರ್ಯಕ್ರಮ, ಭಾರತೀಯ ಉಡುಪ ಧರಿಸಿದ ಮಹಿಳೆಯರಿಂದ ಲಕ್ಕಿಡಿಪ್ ಸಹ ನಡೆಯಲಿದೆ.

ಡಿ.6 ರಂದು ಬೆಳಿಗ್ಗೆ ಉದ್ಘಾಟನೆ ನಡೆದರೆ ಸಂಜೆ ಮೈಸೂರಿನ ರಾಜ ಯದುವೀರ್ ದತ್ತ ಒಡೆಯರ್, ಬಿಎಸ್ ವೈ, ಸಂಸದ ರಾಘವೇಂದ್ರ, ಫ್ಲೆಕ್ಸ್ ಯಾವುದನ್ನೂ ಹಾಕೊಲ್ಲ. ಮಾಧ್ಯಮ ಪ್ರಕಟಣೆ, ಕರಪತ್ರ ಹಂಚಿಕೆ ಮಾತ್ರ ಇರಲಿದೆ. 250 ಮಳಿಗೆಗಳು ಇಲ್ಲಿ ಸ್ಥಾಪಿಸಲಾಗುತ್ತದೆ.

ಸುದ್ದಿಗೋಷ್ಟಿಯಲ್ಲಿ  ಸ್ವದೇಶಿ ಮಂಚ್ ನ ಜಗದೀಶ್ ಕಾರಂತ, ಹರ್ಷ ಕಾಮತ್, ಸಂಚಾಲಕ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ದತ್ತಾತ್ರಿ, ಜಿಲ್ಲಾ ಸಂಯೋಜಕರಾದ ದಿಲೀಪ್ ಮಾಜಿ ಪಾಲಿಕೆ ಸದಸ್ಯೆ ಸುರೇಖಾ ಮುರುಳೀಧರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4028

Related Articles

Leave a Reply

Your email address will not be published. Required fields are marked *

Back to top button