ಸ್ಥಳೀಯ ಸುದ್ದಿಗಳು

ಶಿಕ್ಷಕರ ದೂರು ಮತ್ತು ಪ್ರತಿದೂರು ದಾಖಲು

ಸುದ್ದಿಲೈವ್/ಹೊಳೆಹೊನ್ನೂರು

ಇಬ್ಬರು ಖಾಸಗಿ ಶಾಲಾ ಶಿಕ್ಷಕರ ನಡುವೆ ಗಲಾಟೆಯಾಗಿ ದೂರು ಪ್ರತಿದೂರು ದಾಖಲಾಗಿದೆ. ಓರ್ವ ಶಿಕ್ಷಕಿ ಜಾತಿ ನಿಂದನೆ ದೂರು ನೀಡಿದರೆ, ಇನ್ನಬ್ಬರು  ಜೀವ ಭಯದ ದೂರು ಸಲ್ಲಿಸಿದ್ದಾರೆ.

ಹೊಳೆಹೊನ್ನೂರಿನ ಅರೆಬಿಳಚಿ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಿತ್ರಾ ಮತ್ತು ಸಹ ಶಿಕ್ಷಕರಾದ ನವೀನ್ ಕುಮಾರ್ ನಡುವೆ ಗಲಾಟೆಗಳಾಗಿವೆ. ಮಕ್ಕಳ ಆಹಾರದ ವಸ್ತುಗಳನ್ನ ಕದ್ದಿರುವ ವಿಚಾರದಲ್ಲಿ ಗಲಾಟೆಗಳಾಗಿವೆ.

ಶಾಲೆ ಮುಗಿಸಿಕೊಂಡು ಮನೆಗೆ ಹೋಗುವ ಸಮಯದಲ್ಲಿ ಶಿಕ್ಷಕರಾದ ಸುಮಿತ್ರಾರವರು ಸಹಶಿಕ್ಷಕ ನವೀನ್ ಕುಮಾರ್ ಗೆ ಮಕ್ಕಳ ಆಹಾರದ ಸಾಮಾಗ್ರಿಗಳನ್ನ ಕದಿಯಬಾರದು ಎಂದು ಕೇಳಿದ್ದಕ್ಕೆ, ನವೀನ್ ಕುಮಾರ್ ಬೈದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಅಲ್ಲದೆ ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಹಶಿಕ್ಷಕ ನವೀನ್ ಕುಮಾರ್ ಶಾಲೆ ಮುಗಿಸಿ ಶಿವಮೊಗ್ಗದ ಗುರುಪುರದಲ್ಲಿರುವ ಮನೆಗೆ ವಾಪಾಸಾಗಲು ಅರಬಿಳಚಿ ಬಸ್ ನಿಲ್ದಾಣದಿಂದ ಕೈಮರಕ್ಕೆ ಬಂದು ಕೈಮರದಿಂದ ಶಿವಮೊಗ್ಗಕ್ಕೆ ಬಸ್ ಗಾಗಿ ಕಾಯುವಾಗ‌ ಶಿಕ್ಷಕಿ ಸುಮಿತ್ರಾ, ಮಹಾಂತಾ ಪಾಟೀಲ್, ಏಕಾಏಕಿ ಹಲ್ಲೆ
ನಡೆಸಿದ್ದಾರೆ.

ಮಕ್ಕಳ 1 ಕ್ವಿಂಟಲ್ ಗೋದಿ ಅಕ್ಕಿ, ಮಾಟಮಂತ್ರ ಮಾಡಿಸುತ್ತೀಯಾ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ನಂತರ ಹೊಳೆಹೊನ್ನೂರಿನ ಪೊಲೀಸ್ ಠಾಣೆಗೆ ದೂರು ಕೊಡಲು ನಿರ್ಧರಿಸಿದ ನವೀನ್ ಗೆ ಸುಮಿತ್ರಾರವರು ತನ್ನ ಸಹೋದರ ಸಂತೋಷ್ ಎಂಬಾತ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಾನೆ ಎಂದು ಗದರಿಸಿದ್ದಾರೆ.

ಅಲ್ಲದೆ ಶಾಲಾ ಆಡಳಿತ ಮಂಡಳಿಯ ಅನುಮತಿ ಪಡೆದು ದೂರು ನೀಡಲು ನಿರ್ಧರಿಸಿದ ನವೀನ್ ಗೆ ಶಾಲಾ ಕಾರ್ಯದರ್ಶಿಯವರು ಶಾಲೆಯ ಮರ್ಯಾದೆ ಹಾಳಾಗಲಿದೆ ಬೇಡ ಎಂದಿದ್ದಕ್ಕೆ ದೂರು ನೀಡಿರಲಿಲ್ಲ. ಯಾವಾಗ ಸುಮಿತ್ರಾ ಟೀಚರ್ ದೂರು ಕೊಡುತ್ತಾರೋ ನಂತರ ಪ್ರತಿ ದೂರು ನೀಡಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button