ಸ್ಥಳೀಯ ಸುದ್ದಿಗಳು

ಸಚಿವ ಮಧು ಬಂಗಾರಪ್ಪರ ಆರೋಪಕ್ಕೆ ಸಂಸದರ ಉತ್ತರವೇನು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಗೆ ದಿನಾಂಕ ನಿಗದಿಯಾಗುವುದು ಮಾತ್ರ ಬಾಕಿ ಮಾತ್ರ ಉಳಿದಿದೆ. ರಾಜಕೀಯದ ಕೆಸರೆರಚಾಟ ಆರಂಭವಾಗಿದೆ. ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಮತ್ತು ಸಂಸದ ರಾಘವೇಂದ್ರ ನಡವಿನ ಆರೊಪ ಮತ್ತು ಪ್ರತ್ಯಾರೋಪ ಮುಂದು ವರೆದಿದೆ.

ಅಂಬುಲೆನ್ಸ್ ನಲ್ಲಿ ಹಣ ಸಾಗಾಟ ಎಂಬ ಮಧುಬಂಗಾರಪ್ಪ ಹೇಳಿಕೆ ವಿರುದ್ಧ ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೆಸ್ ನವರು ಅವರ ಪಕ್ಷದ ಬಗ್ಗೆ ಯೋಚನೆ ಮಾಡಬೇಕು. ಅದನ್ನು ಬಿಟ್ಟು ಎ ಟೀಂ, ಬಿ ಟೀಂ ಅಂತಾ ನಮ್ಮ ಬಗ್ಗೆ ಯೋಚನೆ ಮಾಡೋದು ಬೇಡ ಎಂದಿದ್ದಾರೆ.

ಅವರ ಐಎನ್ ಡಿಐಎ ಟೀಮ್ ಎಲ್ಲಿದೆ ಎಂದು ಹುಡುಕಿಕೊಳ್ಳಲಿ. ಮಧು ಮಧು ಬಂಗಾರಪ್ಪನವರ ಹಣಸಾಗಟ ಹೇಳಿಕೆ ಅಸಹ್ಯ ಅನಿಸುತ್ತದೆ. ಬಂಗಾರಪ್ಪನವರ ಮಗನ ಬಾಯಲ್ಲಿ ಈ ರೀತಿ ಹಗುರ ಮಾತು ಬರಬಾರದು. ಆ ರೀತಿಯ ಚುನಾವಣೆ ಅನುಭವ ಅವರಿಗೆ ಇರಬೇಕು.ದುಡ್ಡಿನಲ್ಲಿ ಚುನಾವಣೆ ನಡೆಸುವ ಅವಶ್ಯಕತೆ ನಮಗಿಲ್ಲ. ನನ್ನ ಬಗ್ಗೆ ಒಂದು ಬೆರಳು ತೋರಿಸಿದರೆ ಅವರ ಬಗ್ಗೆ ನಾಲ್ಕು ಬೆರಳು ತೋರಿಸುತ್ತದೆ ಎಂದರು.

ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ರಾಘವೇಂದ್ರ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಮತದಾರರು ಮೂರು ಭಾರಿ ಉತ್ತರ ಕೊಟ್ಟಿದ್ದಾರೆ ಈ ಬಾರಿಯು ಮಧು ಬಂಗಾರಪ್ಪ ಪ್ರಶ್ನೆಗೆ ಮತದಾರರು ಉತ್ತರ ಕೊಡುತ್ತಾರೆ. ಒಳ್ಳೆಯ ಕೆಲಸ ಮಾಡಿದರೆ ಜನ ಆಶೀರ್ವಾದ ಮಾಡುತ್ತಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು ನಾವು. ತಪ್ಪು ಮಾಡಿದವರನ್ನು ಜನರು ಮೂಲೆಗೆ ಕೂರಿಸುತ್ತಾರೆ ಎಂದು ಗುಡುಗಿದ್ದಾರೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಶಕ್ತಿಯಾಗಿದೆ. ನನಗೂ ಕೂಡ ಮಧು ಬಂಗಾರಪ್ಪನವರ ಭಾಷೆಯಲ್ಲಿ ಮಾತನಾಡಲು ಬರುತ್ತೆ. ಆ ರೀತಿ ಮಾತನಾಡುವ ಅವಶ್ಯಕತೆ ನಮಗಿಲ್ಲ. ಕೂಲ್ ಆಗಿ ಈ ಬಾರಿ ಚುನಾವಣೆ ಎದುರಿಸುತ್ತೇವೆ. ಚುನಾವಣಾ ಫಲಿತಾಂಶದ ಮೂಲಕ ಉತ್ತರ ಕೊಡುತ್ತೇನೆ. ಮೋದಿ ಗ್ಯಾರಂಟಿ ಎಂದರೆ ಬೇಳೆಕಾಳು ಅಲ್ಲ. ಹತ್ತು ವರ್ಷದಲ್ಲಿ ದೇಶದ ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ ಎಂದರು.

ಬಿಜೆಪಿ ಲೋಕಸಭಾ ಟಿಕೆಟ್ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಇವತ್ತು ಅಥವಾ ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ. ಕೇಂದ್ರದ ಹಾಗೂ ರಾಜ್ಯದ ನಾಯಕರು ಒಟ್ಟಾಗಿ ಕೂತು ಚರ್ಚೆ ನಡೆಸುತ್ತಿದ್ದಾರೆ. ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಕಾರಣ ಆಕಾಂಕ್ಷಿಗಳು ಹೆಚ್ಚಾಗಿ ಇರುತ್ತಾರೆ. ಬೇಸರ ವ್ಯಕ್ತಪಡಿಸುತ್ತಿರುವವರನ್ನು ಕರೆದು ಕೂರಿಸಿ ಹಿರಿಯ ನಾಯಕರು ಸಮಾಧಾನ ಪಡಿಸುತ್ತಾರೆ ಎಂದರು.

ಇದನ್ನೂ ಓದಿ-https://suddilive.in/archives/10513

Related Articles

Leave a Reply

Your email address will not be published. Required fields are marked *

Back to top button