ಎಸ್ಪಿಯನ್ನ ಭೇಟಿ ಮಾಡಿದ ಬಿಜೆಪಿಗರು-ನಾಲ್ಕು ಅಂಶವನ್ನ ಪ್ರಸ್ತಾಪಿಸಿದ ಸಂಸದರು

ಸುದ್ದಿಲೈವ್/ಶಿವಮೊಗ್ಗ

ಈದ್ ಮೆರವಣಿಗೆಯ ಅಲಂಕಾರದ ವಿಚಾರದಲ್ಲಿ ಒಂದು ದಿನದ ನಂತರ ಬಿಜೆಪಿ ಎಚ್ಚೆತ್ತುಕೊಂಡಿದೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿ, ಡಿ.ಎಸ್ ಅರುಣ್, ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಹಿರಿಯರಾದ ಗಿರೀಶ್ ಪಟೇಲ್, ಸೇರಿದಂತೆ ಅನೇಕರು ಇಂದು ಎಸ್ಪಿ ಮಿಥುನ್ ಕುಮಾರ್ ಅವರನ್ನಭೇಟಿಯಾಗಿ ನಾಲ್ಕು ಅಂಶದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾವು ಮತ್ತು ನಮ್ಮ ಸಂಘಟನೆಯ ಹಿರಿಯರು ರಾಗಿಗುಡ್ಡದ ಗಲಭೆ ಕುರಿತು ಚರ್ಚಿಸಿದ್ದೇವೆ. ರಸ್ತೆಗೆ ತಲ್ವಾರ್ ಕಟ್ಟಿ ಹಬ್ಬಕ್ಕೆ ಸ್ವಾಗತ ಕೋರಿರುವುದು ಗಲಾಟೆಗೆ ಕಾರಣವಾಯಿತಾ? ಧರ್ಮದಲ್ಲಿಯೇ ಶಾಂತಿಯನ್ನ ಹರಡಲು ಹೇಳಿದ್ದರೂ ಇತರೆ ಧರ್ಮೀಯರಿಗೆ ನೋವುಂಟಾಗಿರುವ ಫ್ಲೆಕ್ಸ್ ಹಾಕಿರುವುದು ಯಾಕೆ ಇಂತಹ ಫ್ಲೆಕ್ಸ್ ಹಾಕಲು ಅವಕಾಶ ಮಾಡಿಕೊಟ್ಟಿರುವುದು ತಪ್ಪು. ಇದನ್ನ ತಡೆಯುವಂತಹ ಕೆಲಸ ಆಗಬೇಕಿತ್ತು ಎಂದರು.
ಭೇಟಿಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಕೆಲ ಮನೆಗಳ ಮೇಲೆ ಕಲ್ಲು ತೂರಲಾಗಿದೆ. ಕೆಲ ಕಾರ್ಯಕರ್ತರು ಉಳಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಉಳಿಸಿಕೊಳ್ಳು ಯತ್ನಿಸಿದ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಲು ಯತ್ನಿಸಿರುವುದೇಕೆ? ತಲೆಗೆ ಹೊಡೆತ ಬಿದ್ದು ಆಸ್ಪತ್ರೆಗೆ ದಾಖಲಾದವರ ಮೇಲೂ ದೂರು ದಾಖಲಾಗಿರುವುದು ಖಂಡನೀಯ ಎಂದರು.
ಒಂದು ನಿರ್ದಿಷ್ಟ ಜಾಗದಲ್ಲಿ ಇದ್ದ ಗಲಾಟೆಯ ಸೆಕ್ಷನ್ ನ್ನ ನಗರಕ್ಕೆ ವಿಸ್ತರಿಸುವುದು ಎಷ್ಟು ಸರಿ? ಅಲ್ಲದೆ ವ್ಯಾಪಾರ ವಹಿವಾಟುವಿಗೆ ಅವಕಾಶಕಲ್ಪಿಸಬೇಕು. ಪ್ರವಾದಿಗಳ ಹುಟ್ಟುಹಬ್ಬವನ್ನ ಈದ್ ಮಿಲಾದ್ ಎಂದು ಆಚರಿಸಲಾಗುತ್ತಿದೆ. ಟ್ರ್ಯಾಕ್ಟರ್ ಮತ್ತು ಜೆಸಿಬಿಯಲ್ಲಿ ನಿಂತು ತಲವಾರ್ ತೋರಲಾಗಿದೆ. ಮಹಿಳೆಯರನ್ನ ಮುಂದೆ ತೋರಿಸಿ ಗಲಾಟೆ ನಡೆಸಲಾಗಿದೆ. ಇದನ್ನ ಯುವಕರ ಹಿರಿಯರು, ಪೋಷಕರು ತಿದ್ದಬೇಕಿದೆ ಎಂದು ತಿಳಿಸಿದರು.
ಇದರಲ್ಲಿ ಪ್ರಚೋದನಾಕಾರ್ಯಕ್ಕೆ ನಡೆದಿದೆ. ಮೂಲಕಾರಣ ಯಾರು? ಏರಿಯಾದಲ್ಲಿ ಆದ ಘಟನೆಯನ್ನ ವೈಭವೀಕರಣ ಮಾಡಲಾಗಿದೆ. ಸೆಕ್ಷನ್ ನ್ನ ಇಡೀ ನಗರಕ್ಕೆ ವಿಸ್ತರಿಸುವುದು ಸರಿಯಲ್ಲ ಎಂದರು.
ಇದನ್ನೂ ಓದಿ-https://suddilive.in/2023/10/02/4-ಗಂಟೆಯಿಂದ-ವಾಣಿಜ್ಯ-ವಹಿವಾಟ/
