ರಾಜಕೀಯ ಸುದ್ದಿಗಳು

ಡಿ.10 ರಂದು ಬೆಂಗಳೂರಿನಲ್ಲಿ ಬೃಹತ್ ಜಾಗೃತ ಸಮಾವೇಶ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಡಿ. 10 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಜಾಗೃತ ಸಮಾವೇಶ ನಡೆಯಲಿದ್ದು,  ಐದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಆರ್ಯ‌ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದರು.

ಶರಾವತಿ ಮುಳುಗಡೆ ರೈತರಿಗೆ ಹಕ್ಕುಪತ್ರ ಸಿಗುವಂತಾಗಬೇಕು, ಸಿಗಂದೂರು ಜಾಗದ ವಿಚಾರ ಬಗೆಹರಿಯಬೇಕಿದೆ. ಬಗರ್ ಹುಕುಂ ಒಕ್ಕಲೆಬ್ಬಿಸುವ‌ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ 50 ಲಕ್ಷ ಜನ ಸಂಖ್ಯೆ ಇದೆ. ಇವರಿಗೆ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಈ ನಾಡುಕಟ್ಟುವಲ್ಲಿ ಸಮುದಾಯದ ಪಾತ್ರ ಹಿರಿಯದಾಗಿದೆ ಎಂದರು.

25 ಉಪಪಂಗಡ ಸಮಾಜ ಬಾಂಧವರು ಬೃಹತ್ ಸಂಖ್ಯೆಯಲ್ಲಿ ಸಮಾವೇಶ ನಡೆಯಲುದ್ದು ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದೇವೆ ಎಂದು ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದ ಅವರು ಮಾಜಿ ಎಂಎಲ್ ಸಿ ಹರಿಪಗರಸಾದ್ ಅವರ ಹೆಸರು ಕರಪತ್ರದಲ್ಲಿ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಮಟ್ಟದ ಪತ್ರದಲ್ಲಿ ಅವರ ಹೆಸರು ಇದೆ ಜಿಲ್ಲಾ ಮಟ್ಟದ ಕರಪತ್ರವಿರುವುದರಿಂದ ಅವರ ಹೆಸರು ಹಾಕಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕಲ್ಗೋಡು ರತ್ನಾಕರ, ಜಿ.ಡಿ.ಮಂಜುನಾಥ್, ಪ್ರವೀಣ್ ಹಿರೇಇಡಗೋಡು, ರಾಜಪ್ಪ ತೇಕ್ಲೆ, ಧರ್ಮರಾಜ್,ಪಿ, ರಾಜಪ್ಪ ಮಸ್ಕಾರ್ ಶೆಟ್ಟಿಕೆರೆ ಮೊದಲಾದವರು ಉಪಸ್ಥಿತಿದ್ದರು.

ಇದನ್ನೂ ಓದಿ-https://suddilive.in/archives/4412

Related Articles

Leave a Reply

Your email address will not be published. Required fields are marked *

Back to top button