ರಾಜಕೀಯ ಸುದ್ದಿಗಳು

ಡಿಕೆಶಿ ರಿಲ್ಯಾಕ್ಸ್ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ

ಸುದ್ದಿಲೈವ್/ಶಿವಮೊಗ್ಗ

ಡಿಕೆಶಿ ಪ್ರಕರಣವನ್ನ ಸಿಬಿಐಗೆ ಹಸ್ತಾಂತರಿಸುವಾಗ ಲೋಪವಾಗಿದೆ ಎಂದು ಆರೋಪಿಸಿ ಸಚಿವ ಸಂಪುಟದಲ್ಲಿ ಡಿಕೆಶಿ ಪ್ರಕರಣವನ್ನ ಸಿಬಿಐನಿಂದ ವಾಪಾಸ್ ಪಡೆಯುವ ನಿರ್ಧಾರದ ಬೆನ್ನಲ್ಲೆ ಇಂದು ನಡೆದ  ಕೋರ್ಟ್ ಡಿಸಿಎಂಗೆ ರಿಲ್ಯಾಕ್ಸ್ ನೀಡಿದ ಬೆನ್ನಲ್ಲೆ ಶಿವಮೊಗ್ಗದಲ್ಲಿ  ಬಿಜೆಪಿಯ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಮೊದಲಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ,  ಇಡಿಯವರು ಪತ್ರ ಬರೆದಾಗ ಸಿಬಿಐ ತನಿಖೆಗೆ ಬಿಎಸ್ ವೈ ಸರಕಾರ ಅನುಮತಿ ಕೊಟ್ಟಿತ್ತು. ಡಿಕೆಶಿ ಕೇಸ್ ವಾಪಸ್ ಪಡೆಯುವ ಸಂಪುಟ ತೀರ್ಮಾನ ‌ಕಾನೂನು ಬಾಹಿರ ಎಂದು ಹೇಳಿದರು.

ಇದಕ್ಕೆ ನ್ಯಾಯಾಲಯದಲ್ಲಿ ಜಯ ಸಿಗಲಿಲ್ಲ. ಏನೇ ಪ್ರಯತ್ನ ಮಾಡಿದ್ರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಅಪರಾಧಿ ಎನ್ನುತ್ತಿಲ್ಲ. ತಪ್ಪು ಮಾಡಿಲ್ಲ ಎಂದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದು ಹೇಳಿದರು.‌

ಬಿಎಸ್ ವೈ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ‌ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಕೋರ್ಟ್ ‌ತೀರ್ಮಾನದ ಬಗ್ಗೆ ನಾನೇನು ಹೇಳಲ್ಲ. ನಾವೇನು ಡಿಕೆಶಿ ವಿರೋಧಿಗಳಲ್ಲ. ಕೋರ್ಟ್ ತೀರ್ಮಾನದ ಬಗ್ಗೆ ನಾವೇನು ಹೇಳೋದಕ್ಕೆ ಆಗಲ್ಲ ಎಂದರು.‌

ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಡಿಕೆಶಿ ಕೋರ್ಟ್ ಕೇಸ್ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಕೆಶಿ ತಮ್ಮ ಮೇಲ್ಮನವಿಯನ್ನು ಕೋರ್ಟ್ ನಲ್ಲಿ ಹಿಂಪಡೆದಿದ್ದಾರೆ. ಕೋರ್ಟ್ ತೀರ್ಮಾನ ಸ್ಪಷ್ಟವಾಗಿ ಇನ್ನು ಗೊತ್ತಿಲ್ಲ.‌ ಮುಖ್ಯವಾದ ವಿಷಯದ ಬಗ್ಗೆ ಚರ್ಚೆ ಕೋರ್ಟ್ ‌ಮುಂದೆ‌ ಇದೆ.‌ಡಿಕೆಶಿ ಕೇಸ್ ಹಿಂಪಡೆಯುವ ಕ್ಯಾಬಿನೆಟ್ ತೀರ್ಮಾನ ನಡುಬೀದಿಯಲ್ಲಿ ಬೆತ್ತಲೆಯಾದಂತಿದೆ ಎಂದರು.

ಕಾಂಗ್ರೆಸ್ ಸರಕಾರ ನಡು ಬೀದಿಯಲ್ಲಿ ಬಟ್ಟೆ ಬಿಚ್ಚಿ ನಿರ್ವಾಹಣವಾಗಿ ನಿಂತಂತೆ ಆಗಿದೆ. ಸಿಬಿಐ ತನಿಖೆ 90 ರಷ್ಟು ಮುಗಿದಿದೆ. ತಮಗೆ ಶಿಕ್ಷೆ ಖಚಿತ ಎಂದು ಗೊತ್ತಾಗಿ ಸರಕಾರದ ಮೇಲೆ ಒತ್ತಡ ತಂದು ಡಿಕೆಶಿ ಈ ತೀರ್ಮಾನ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಇದನ್ನು ಅನುಭವಿಸಲೇ ಬೇಕಾಗುತ್ತದೆ ಇದು ನೈತಿಕತೆ ಪ್ರಶ್ನೆ ಎಂದರು.

ಕಾಯ್ದೆಯಲ್ಲಿ ಸ್ಪೀಕರ್ ಅನುಮತಿ ಪಡೆಯಬೇಕು ಎಂದು ಎಲ್ಲು ಇಲ್ಲ. ಸಿಬಿಐಗೆ ವಹಿಸಿದ ಕ್ರಮ ಸರಿಯಾಗಿತ್ತು. ಜನ ಇಂತಹ ಲಜ್ಜೆಗೆಟ್ಟ ತೀರ್ಮಾನ ನೋಡ್ತಿದ್ದಾರೆ. ಕೋರ್ಟ್ ಸಹ‌ ಸರಿಯಾದ ತೀರ್ಪು ಕೊಡ್ತದೆ. ಯತ್ನಾಳ್ ಮಧ್ಯ ಪ್ರವೇಶಕ್ಕಾಗಿ ಅರ್ಜಿ ಹಾಕಿದ್ದಾರೆ. ಕೋರ್ಟ್ ಅದನ್ನು ಮಾನ್ಯ ಮಾಡಿದೆ ಎಂದರು.

ಶಾಸಕ ಬಿ.ಆರ್.ಪಾಟೀಲ್ ಪತ್ರ ಬರೆದಿರುವ ವಿಚಾರ

ಬಿ.ಆರ್.ಪಾಟೀಲರ ಬಗ್ಗೆ ಪ್ರಿಯಾಂಕ ಖರ್ಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಬಿ.ಆರ್.ಪಾಟೀಲರು ಬಹಳ ಸಿಟ್ಟಿಗೆ ಎದ್ದಿದ್ದಾರೆ. ಅವರನ್ನು ಯಾವ ರೀತಿ ಸಮಾಧಾನ ಮಾಡ್ತಾರೋ ಗೊತ್ತಿಲ್ಲ. ಇಂತಹದ್ದು ಅವ್ಯಾಹತವಾಗಿ ಈ ಸರಕಾರದಲ್ಲಿ ನಡೆಯುತ್ತಿದೆ. ಇದರಿಂದ ಸರಕಾರದ ಜನಪ್ರಿಯತೆ ಕುಸಿದು ಹೋಗ್ತಿದೆ ಎಂದು ಆರಗ ಕೆಂಡಕಾರಿದ್ದಾರೆ.

ಟ್ರಾನ್ಸ್ ಫಾರ್ಮರ್ ನಿರ್ವಹಣೆ ಕೇರಳದವರಿಗೆ ಯಾಕೆ?

ಸರಕಾರ ಕೆಡವಲು ಯಾರ ಅವಶ್ಯಕತೆ ಇಲ್ಲ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಆಗದೇ ವಿಲವಿಲ ಒದ್ದಾಡ್ತಿದ್ದಾರೆ. 45 ಸಾವಿರ ಟ್ರಾನ್ಸ್ ಫಾರ್ಮರ್ ನಿರ್ವಹಣೆಗೆ ಕೇರಳ ಮೂಲದ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ.ಇದರ ಹಿನ್ನೆಲೆ ಏನು, ಈ ಬಗ್ಗೆ ತನಿಖೆ ನಡೆಯಬೇಕಿದೆ.

ಕರ್ನಾಟಕ ವಿದ್ಯುತ್ ಕಂಪನಿ ಉತ್ತಮವಾಗಿ ಟಿಸಿಗಳನ್ನು ನಿರ್ವಹಣೆ ಮಾಡ್ತಿದೆ. ಕೇರಳದ ಒಂದು ಕಂಪನಿಗೆ ನಿರ್ವಹಣೆಗಾಗಿ ಕೊಡ್ತಿದ್ದಾರೆ. ಇಂಧನ ಸಚಿವ  ಜಾರ್ಜ್ ಮೂಲತಃ‌ ಕೇರಳದವರು.‌ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡ್ತೇವೆ ಎಂದರು.‌

ಇದನ್ನೂ ಓದಿ-https://suddilive.in/archives/3940

Related Articles

Leave a Reply

Your email address will not be published. Required fields are marked *

Back to top button