ಹಿಂದೂಗಳು ಸುಮ್ಮನಿದ್ದಾರೆ ಎಂದರೆ ಅದು ಅವರ ದೌರ್ಬಲ್ಯವಲ್ಲ-ಬಿವೈವಿ, ಈಶ್ವರಪ್ಪನವರ ಮೈಯಲ್ಲಿ ಹರಿಯುತ್ತಿರುವುದು ರಾಯಣ್ಣನ ರಕ್ತ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಹಿಂದೂಗಳ ಮನೆಯ ಮೇಲೆಕಲ್ಲು ತೂರಿದರೂ ಹಿಂದೂ ಸಮಾಜ ಶಾಂತರೀತಿಯಲ್ಲಿದೆ ಎಂದರೆ ಅದು ಹಿಂದೂಗಳ ದೌರ್ಬಲ್ಯವೆಂದು ಬಿಜೆಪಿ ಶಾಸಕ ಬಿ.ವೈವಿಜೇಂದ್ರ ಗುಡುಗಿದ್ದಾರೆ.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ವಿರುದ್ಧ ಬೃಹತ್ ಪ್ತತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಗಿಗುಡ್ಡದ ಘಟನೆ ಬಗ್ಗೆ ಗೃಹ ಸಚಿವರು ಸಣ್ಣಪುಟ್ಟ ಘಟನೆ ನಡೆದಿದೆ ಎಂದರು. ಮತ್ತೊಬ್ಬ ಸಚಿವ ನಾವುಗಳು ತ್ರಿಶೂಲ ಹಿಡಿದಂತೆ ಅವರು ತಲವಾರು ಹಿಡಿದ್ದಾರೆ ಎಂದು ಹೇಳಿದರು.
ಇದು ಅಪಹಾಸ್ಯವಲ್ಲದೆ ಮತ್ತಿನ್ನೇನು? ರೌಡಿಗಳನ್ನ ಗಡಿಪಾರು ಮಾಡಿದರೆ ಸಾಕಾಗದು ಕಾಂಗ್ರೆಸ್ ನಾಯಕರನ್ನೇ ಗಡಿಪಾರು ಮಾಡಬೇಕು. ಕಾಂಗ್ರೆಸ್ ನಡವಳಿಕೆ ನಿನ್ನೆ ಮೊನ್ನೆಯದಲ್ಲ. ಕಾಂಗ್ರೆಸ್ ದಲಿತ ಶಾಸಕರ ಮನೆಯ ಮೇಲೆ ಗಲಭೆ ಮಾಡಿದಾಗ ನಡೆದುಕೊಂಡ ರೀತಿ ಇವೆಲ್ಲದಕ್ಕೂ ಪುಷ್ಠಿ ನೀಡುತ್ತದೆ. ಅಖಂಡ ಶ್ರೀನಿವಾಸ್ ಗೆ ಟಿಕೇಟ್ ನೀಡಲಿಲ್ಲ. ಅಲ್ಪಸಂಖ್ಯಾತರ ತುಷ್ಠಿಕರಣದಿಂದ ಆತನಿಗೆ ಟಿಕೇಟ್ ನಿರಾಕರಿಸಲಾಯಿತು ಎಂದರು.
ರಾಗಿಗುಡ್ಡದ ಗಲಭೆಯಲ್ಲಿ ದೌರ್ಜನ್ಯ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಿ ಎಂದರೆ ಅಮಾಯಕರ ಮೇಲೆ ದೂರು ದಾಖಲಿಸಲಾಗಿದೆ. ಹೋಗಲಿ ಹುಬ್ಬಳ್ಳಿ ಡಿಜೆ ಹಳ್ಳಿ ಕೆಜೆ ಹಳ್ಳಿಯ ಗಲಭೆಕೋರರ ಪ್ರಕರಣ ಹಿಂಪಡೆಯಲು ಮುಂದಾಗಿದೆ. ಕಾಂಗ್ರೆಸ್ ತನ್ನ ನಿಲುವು ಬದಲಾಯಿಸಿಕೊಳ್ಳದಿದ್ದರೆ ಹಿಂದೂಗಳು ರಸ್ತೆಯ ಮೇಲೆ ಬಡಿಗೆ ಹಿಡಿದು ಮುಂದಾಗಲಿದ್ದಾರೆ. ಹಿಂದೂ ಸಮಾಜದ ತಾಳ್ಮೆ ಪರೀಕ್ಷಿಸಬೇಡಿ. ನಾವು ರಾಜಕಾರಣ ಮಾಡಲು ಬಂದಿಲ್ಲ ಎಂದರು.
ಹಿಂದೂ ಪರವಿದ್ದೇವೆ ಎಂದರೆ ಅಲ್ಪಸಂಖ್ಯಾತರ ವಿರುದ್ಧವಲ್ಲ. ಆದರೆ ಹಿಂದೂ ಗಳ ಮೇಲೆ ನಡೆಯುವ ದೌರ್ಜನ್ಯವನ್ನ ನೋಡಿ ಸುಮ್ಮನೆಕುಳಿತುಕೊಳ್ಳಲ್ಲವೆಂದರು.
ಈಶ್ವರಪ್ಪನವರ ಮೈಯಲ್ಲಿ ಹರಿಯುತ್ತಿರುವುದು ರಾಯಣ್ಣನ ರಕ್ತ-ಬಿವೈಆರ್
ಸಂಸದ ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ತುಷ್ಠಿಕರಣ ರಾಜಕಾರಣಬಿಡಬೇಕು. ಒಂದೇ ಧರ್ಮದಿಂದ ಮಾತ್ರ ಸರ್ಕಾರ ಬಂದಿರುವುದು ಎಂದು ಮದದಿಂದ ವರ್ತಿಸಿದರೆ ನಾಳೆ ನಡೆಯುವ ಲೋಕ ಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಪಡೆಯಲಿದ್ದೀರ. ರಾಗಿಗುಡ್ಡದ ಶಾಲೆಯ ಶಿಕ್ಷಕಿಯ ಮನೆಗೆ ಕಲ್ಲು ಹೊಡೆದಿದ್ದಾರೆ. ಆಕೆಯ ಕಣ್ಣೀರು ಸುಮ್ಮನೆ ಬಿಡೊಲ್ಲ. ಧರ್ಮದ ಹೆಸರಿನಲ್ಲಿ ಮಹಿಳೆಯ ಮೈ ಮುಟ್ಟಲಾಗಿದೆ. ಉಸ್ತುವರಿ ಸಚಿವರು ಶಾಸ್ತ್ರಕ್ಕೆ ಅರ್ಧಗಂಟೆ ಬಂದು ಮೊಸಳೆ ಕಣ್ಣೀರು ವರೆಸುವ ಕೆಲಸ ಮಾಡಲಾಗಿದೆ. ಗೃಹಸಚಿವರು ಘಟನೆ ಸಣ್ಣದೆಂದು ಹೇಳ್ತಾರೆ ಎಂದ ಟೀಕಿಸಿದರು
ಘಟನೆ ಸಣ್ಣದಿರಬಹುದು ದೂರಾಲೋಚನೆ ಬಲು ದೊಡ್ಡದಾಗಿದೆ. ಸರ್ವಜನಾಂಗೀಯ ಶಾಂತಿಯ ತೋಟವಾಗಿರುವ ಕುವೆಂಪು ನಾಡನ್ನ ಕುಲಗೆಡಸಲಾಗುತ್ತಿದೆ. ನಾವು ಮುಸ್ಲೀಂ ವಿರೋಧಿಯಲ್ಲ. ಆದರೆ ಮುಸ್ಲೀಂ ಮಹಿಳೆಯರಿಗೆ ರಕ್ಷಣೆ ನೀಡಲು ತ್ರಿಬ್ಬಲ್ ತಲಾಕ್ ಯೋಜನೆ ತರಲಾಯಿತು. ಇಲ್ಲಿರುವ ಸರ್ಕಾರದ ಎಲ್ಲಾ ಸವಲತ್ತನ್ನ ಪಡೆದು ನಾಡಿನ ವಿರುದ್ಧ ದುಷ್ಕೃತ್ಯ ನಡೆಸುತ್ತೀರಲ್ಲ ಇದನ್ನ ಪ್ರವಾದಿಗರು ಮೆಚ್ಚುತ್ತಾರಾ ಎಂದು ಗುಡುಗಿದರು.
ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಅಭಯ್ ಪ್ರಕಾಶರ ಕೆಲಸವನ್ನ ತೆಗೆಯಲಾಗಿದೆ. 8-10 ಜನರ ಪೊಲೀಸ್ ಅಧಿಕಾರಿಗಳನ್ನ ತೆಗೆಯಲು ಸರ್ಕಾರಕ್ಕೆ ಪಟ್ಟಿ ನೀಡಲಾಗಿದೆ. ಹರ್ಷನ ಕೊಲೆ, ಕುಟ್ಟಪ್ಪ, ರುದ್ರೇಶ್ ಪ್ರವೀಣ್ ನೆಟ್ಟಾರು ಅವರ ಕೊಲೆ ನಡೆದಿದೆ. ಈಶ್ವರಪ್ಪನವರಿಗೆ ಈ ಎಲ್ಲಾ ಪ್ರಕರಣಗಳಲ್ಲಿ ಬೆದರಿಕೆ ಕರೆಗಳು ಬಂದಿದೆ. ಈಶ್ವರಪ್ಪನವರ ಮೈಯಲಿ ಹರಿಯುತ್ತಿರುವುದು ರಾಯಣ್ಣನ ರಕ್ತವಾಗಿದೆ. ದಾಖಲಾದ ಹಿಂದೂಗಳನ್ನ ಯಾವ ಪ್ರಕರಣವನ್ನದಾಖಲಿಸದೆ ಬಿಡುಗಡೆಯಾಗಬೇಕು ಎಂದರು.
ಇದನ್ನೂ ಓದಿ-https://suddilive.in/archives/1115
