ಸ್ಥಳೀಯ ಸುದ್ದಿಗಳು

ಸೋತು ಸುಣ್ಣವಾದ ಬಿಜೆಪಿಗೆ ಬಿ.ವೈ.ವಿ ಆಸರೆಯಾಗುವರಾ?

ಸುದ್ದಿಲೈವ್/ಶಿವಮೊಗ್ಗ

ಸೋತು ಸುಣ್ಣವಾಗಿರುವ ಬಿಜೆಪಿಗೆ ಬಿ.ವೈ ವಿಜೇಂದ್ರರವ ಭೇಟಿ ಶಿವಮೊಗ್ಗ ನಗರದ ಕಾರ್ಯಕರ್ತರಿಗೆ ಸಂಚಲನ ಮೂಡಿಸಿದೆ. ಬಿವೈ ವಿಜೇಂದ್ರರ ಬೈಕ್ ರ್ಯಾಲಿ ಸಹ ಸ್ಪೂರ್ತಿ ತಂದಿದೆ.

ಪೆಸಿಟ್ ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ವೈ.ವಿಜೇಂದ್ರ, ಹಿರಿಯರ ಆಶೀರ್ವಾದ, ಕಾರ್ಯಕರತರ ಪ್ರೀತಿ ಮತ್ತು ಶಿಕಾರಿಪುರದ ಜನರ ಆಶೀರ್ವಾದಿಂದ ರಾಜಾಧ್ಯಕ್ಷರಾಗಿರುವುದಾಗಿ ತಿಳಿಸಿದರು.

ಸಂಜೆ 6 ಗಂಟೆಗೆ ಪಕ್ಷದ ಹಿರಿಯನಾಯಕರು ಕರೆ ಮಾಡಿ ಪಕ್ಷದ ಹಿರಿಯ ಜವಬ್ದಾರಿ ನೀಡುತ್ತಿರುವುದಾಗಿ ತಿಳಿಸಿದಾಗ ನನಗೆ ಅಶ್ಚರ್ಯವಾಯುತು. ತಂದೆಯವರಿಗೆ ಸಿಹಿ ನೀಡಿದೆ. ಸಿಹಿ ನೀಡಿದಾಗ ತಂದೆ ಯಾಕೆ ಎಂದು ಕೇಳಿದರು ನಾನು ರಾಜಾಧ್ಯಕ್ಷರಾಗಿದ್ದೇನೆ ಎಂದಾಗ‌ ಭಾವುಕರಾದರು ಎಂದರು.

ತಂದೆಯವರು ಕಿವಿಮಾತು ಹೇಳಿದ್ದರು. ಒಂದು ಕ್ಷಣವೂ ವಿಶ್ರಮಿಸಿದರೆ ರಾಜ್ಯದಲ್ಲಿ 28‌ಕ್ಕೆ 28 ಸ್ಥಾನ ಗೆಲ್ಲಬೇಕು. ಮೋದಿಯನ್ನ‌ ಮತ್ತೊಮ್ಮೆ  ಪ್ರಧಾನಿ ಮಾಡಬೇಕು ಎಂದಿದ್ದಾರೆ. ಮರುದಿನವೇ ಬೆಂಗಳೂರಿನ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಲಾಯಿತು. ಬಿಜೆಪಿಯಲ್ಲಿ ಮಾತ್ರ ಈ ಚಿತ್ರಣ ನೋಡಲು ಸಾಧ್ಯ ಎಂದರು.

ಸವಾಲು ಕಣ್ಣುಮುಂದೆ ಇದೆ. ಭಾನುಪ್ರಕಾಶ್ ಅವರು ಪೈಲೇಟ್ ವಿಮಾನದ ಉದಾಹರಣೆ ನೀಡಿದ್ದಾರೆ.‌ ವಿಮಾನವನ್ನ ಜವಬ್ದಾರಿಯಿಂದ ಲ್ಯಾಂಡ್ ಮಾಡಬೇಕಿದೆ.  ಸಿಡಿಲು ಗುಡುಗು ಏನೇ ಬಂದರೂ ಹಿರಿಯರ ಆಶೀರ್ವಾದಿಂದ ಎಲ್ಲಾ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯನ್ನ‌ ಸುರಕ್ಚಿತವಾಗಿ ಲ್ಯಾಂಡ್ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದ ಅಧ್ಯಕ್ಷರನಾಗಿ ಎಲ್ಲರಿಗೂ ಭರವಸೆ ನೀಡುವುದಾಗಿ ತಿಳಿಸಿದ ವಿಜೇಂದ್ರ 28 ಕ್ಕೆ 28 ಕ್ಕೆ ಲೋಕಸಭಾ ಕ್ಷೇತ್ರ ಗೆದ್ದು ಪ್ರಧಾನಿ ಮೋದಿಯನ್ನ ಮಗದೊಮ್ನೆ ಪ್ರಧಾನಿ ಮಾಡುವುದಾಗಿ ಶಪಥಗೈದರು. ದಿನಕ್ಕೆ ಎರಡು ಜಿಲ್ಲೆಯ ಸಮಸ್ಯೆಯನ್ನ ಅರಿತು ಪ್ರವಾಸ ಮಾಡುವೆ. ನನ್ನ‌ಹೆಸರು ರಾಜಾಧ್ಯಕ್ಷ ಎನ್ನುತ್ತಿದ್ದಂತೆ  ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದರು.

ಯಾವುದೇ ಕಾರ್ಯಕರ್ತ ತಲೆತಗ್ಗಸದಂತೆ ನಡೆದುಕೊಳ್ಳುವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿವೆ. ಆದರೆ ಅವರ‌ ಜನಪ್ರಿಯತೆ ಹಾಳಾಗಿದೆ. 40% ಆರೋಪ ಮಾಡ್ತಾ ಇದ್ದ ಕಾಂಗ್ರೆಸ್ 80% ಆರೋಪಕ್ಕೆ ಸಿಲುಕಿದೆ ಎಂದು ಆರೋಪಿಸಿದರು‌

ಸಿಎಂ ಸಿದ್ದರಾಮಯ್ಯ ಅವರು ಕಾಂತರಾಜು ವರದಿಯನ್ನ ಜಾರಿಗೊಳಿಸುವುದಾಗಿ ಹೇಳಿದರೆ, .ಡಿಸಿಎಂ  ಡಿಕೆಶಿ ಅವರು ಕಾಂತರಾಜು ವರದಿ ಸ್ವೀಕರಿಸದಂತೆ ಸಹಿಸಂಗ್ರಹ ಮಾಡುತ್ತಿದ್ದಾರೆ. ಬಿಜೆಪಿ ಜಾತಿ ಗಣತಿ ವಿರೋಧಿಸುತ್ತಿಲ್ಲ. ಕಳೆದ ಐದು ವರ್ಷದ ಹಿಂದೆ ತಯಾರಾದ ವರದಿಯನ್ನ ಯಾಕೆ ಸ್ವೀಕರಿಸಿಲಿಲ್ಲ ಎಂದು ಪ್ರಶ್ನಿಸಿದ ವಿಜೇಂದ್ರ ಈ ಜಾತಿಗಣತಿ ಅವೈಜ್ಞಾನಿಕ ವರದಿಯಾಗಿದೆ. ಬಿಜೆಪಿ ವರದಿಯ ವಿರೋಧವಲ್ಲ ಆದರೆ ಎಲ್ಲರ ಮನೆಗೆ ಹೋಗಿ ವರದಿಯಾಗಬೇಕಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಶ್ವಾಸನೆಗೆ ಮಾರಿಹೋಗಿ ಹೆಚ್ಚಿನ ಸಂಖ್ಯಾಬಲ ನೀಡಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನ ಮೋಸ ಹೋಗದಂತೆ ಮೋದಿಯನ್ನ ಮೂರನೇ ಬಾರಿಗೆ ಪ್ರಧಾನಿಯನ್ಬಾಗಿ ಮಾಡಬೇಕಿದೆ ಎಂದರು.

ಅಣ್ಣನನ್ನ‌ಹಾಡಿ ಹೊಗಳಿದ ಬಿ.ವೈ.ವಿ

ಪ್ರಧಾನಿ ನಂತರ ಅಭಿವೃದ್ಧಿ ಮಾಡಿದ ಸಂಸದ ಎಂದರೆ ಬಿ.ವೈ.ರಾಘವೇಂದ್ರ ಆಗಿದ್ದಾರೆ.  ತಂದೆಯವರಿಗಿಂತ 10 ಹೆಜ್ಜೆ ಮುಂದು ಹೋಗಿ ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನೇ ಮತ್ತೆ ಗೆಲ್ಲಿಸಿ ಪ್ರಧಾನಿ ಕೈ ಬಲಪಡಿಸೋಣ ಎಂದರು.

ಈಶ್ವರಪ್ಪನವರ ಮಾತು

ವಿಜೇಂದ್ರರಿಗೆ ಶಕ್ತಿ ಇದೆ.ಹಳೆಯ ಮಾತು ಮರೆಯಿರಿ ಪ್ರಧಾನಿ ಮೋದಿಯನ್ನ ಮಗದೊಮ್ಮೆ ಪ್ರಧಾನಿ ಮಾಡೋಣ. ಈ ಬಾರಿ ಒಬ್ಬ ಕಾಂಗ್ರೆಸ್ ಗೆಲ್ಲದಿರುವಂತೆ ಫುಲ್ ಸ್ವೀಪ್  ಮಾಡೋಣ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕರೆ ನೀಡಿದರು.

ರಾಜಾಧ್ಯಕ್ಷರಾದ ತಕ್ಷಣ ಎಲ್ಲರೂ ದೆಹಲಿಗೆ ಹೋಗ್ತಾರೆ ಆದರೆ‌ ನೀವು ಬೂತ್ ಅಧ್ಯಕ್ಷರ ಮನೆಗೆ ಹೋದ್ರಿ. ರಾಜಾಧ್ಯಕ್ಷ ಆದ ತಕ್ಷಣ ನನಗೆ ಕರೆ ಮಾಡಿದ್ದರು.ಮಾರ್ಗದರ್ಶನ ಮಾಡಿ ಎಂದು ಕೋರಿದರು. ಎಂಥ ಮಾತು ಎಂದು ಉದ್ಘರಿಸಿದರು.

ಬಿಎಸ್ ವೈ ಮಾತು

ಮಾಜಿ ಸಿಎಂ ಬಿಎಸ್ ವೈ ಮಾತನಾಡಿ, ರಾಜ್ಯ ಸರ್ಕಾರದ ವಿರುದ ಜನ‌ಬೇಸತ್ತಿದ್ದಾರೆ.ಭ್ರಷ್ಠಾಚಾರ ತಂಡವಢುತ್ತೊದೆ. ಬೆಳಗಾವಿ ಅಧಿವೇಶನದಲ್ಲಿ ರಾಜಾಧ್ಯಕ್ಷರು ಮತ್ತಿ ವಿಪಕ್ಷ ನಾಯಕರು ರಾಜೀನಾಮೆ ನೀಡಿ ಎನ್ನಲಿದ್ದಾರೆ ಎಂದರು.

ಈ ಕ್ಷಣದಲ್ಲಿ ಚುನಾವಣೆ ನಡೆದರೆ ಬಿಜೆಪಿ 130-135 ಬರಲಿದೆ. ಅಂದು ರಾಷ್ಟ್ರೀಯ ಅಧ್ಯಕ್ಷ ನೆಡ್ಡಾ ದೂರವಾಣಿಯಲ್ಲಿ ವಿಜೇಂದ್ರ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಎಂದರುನಂಬಲಾಗಲಲ್ಲ. ವಿಜೇಂದ್ರನೇ ಬಂದು ಹೇಳಿದಾಗ ನಂಬಿದ್ದು ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ಲಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/3934

Related Articles

Leave a Reply

Your email address will not be published. Required fields are marked *

Back to top button