ರಾಜಕೀಯ ಸುದ್ದಿಗಳು

ಈ ಬಾರಿ ಚುನಾವಣೆ ಕೂಗುಮಾರಿಗಳು vs ಜೀವಪರತೆ ನಡುವಿನ ಚುನಾವಣೆ-ಸುಧೀರ್ ಮುರುಳಿ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಾರ್ಡ್ ಹಾಗೂ ಬೂತ್ ಮಟ್ಟದ ಅಧ್ಯಕ್ಷರುಗಳ ಕಾರ್ಯಗಾರಕ್ಕೆ ಕೆಪಿಸಿಸಿ ವಕ್ತಾರ ಸುಧೀರ್ ಮುರುಳಿ ಉದ್ಘಾಟಿಸಿದರು.

16 ವಾರ್ಡ್ ಬೂತ್ ಗಳ ಅಧ್ಯಕ್ಷರ ಸಭೆಯಲ್ಲಿ ಕೆಪಿಸಿಸಿ ವಕ್ತಾರ ಸುಧೀರ್ ಮುರುಳಿ ಮಾತನಾಡಿ, ಈ ಬಾರಿ ಯ ಚುನಾವಣೆ ಕೂಗುಮಾರಿಗಳು vs ಜೀವಪರತೆ ನಡುವೆ ನಡೆಯಲಿದೆ. ಕೂಗುಮಾರಿಗಳು ಬಿಜೆಪಿಯಾದರೆ ಜೀವಪರತೆ ಪರ ಕಾಂಗ್ರೆಸ್ ಪಕ್ಷವಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಗ್ಯಾರೆಂಟಿಗಳನ್ನ‌ಜಾರಿ ಮಾಡುವ ಮೂಲಕ ಕಾರ್ಯಕರ್ತರ ತಲೆ ಎತ್ತುವಂತೆ ಮಾಡಿದೆ. ಉಡುಪಿಯ ಕಾರ್ಯಕರ್ತರೊಬ್ಬರು ಭೇಟಿ ಮಾಡಿದಾಗ ಇಷ್ಟು ವರ್ಷ ಬಿಜೆಪಿ ಮನೆಯಲ್ಲಿ ನಾಲ್ಕು ಮತವಿದ್ದರೆ ಎರಡು ಮತನಮಗೆ ಎರಡು ಮತ ನಿಮ್ಮ ಪಕ್ಷಕ್ಕೆ ಹಾಕಿ ಎಂದು ಹೇಳಿ ಬರುತ್ತಿದ್ವಿ. ಈ ಬಾರಿ ಗ್ಯಾರೆಂಟಿ ಹಿನ್ಬಲ್ಲೆಯಲ್ಲಿ ಅಷ್ಟು ಮತ ನಮಗೆ ಕೊಡಿ ಎನ್ನುವೆ ಎಂದು ಉದಾಹರಣೆ ಸಮೇತ ಮತಯಾಚನೆಯ ಬಗ್ಗೆ ವಿವರಿಸಿದರು‌.

ಅಭಿಯಾನ ಯಶಸ್ವಿಗೊಳಿಸೋಣ

ಒಂದು ಮನೆ ಒಂದು ನಿಮಿಷದ ಅಭಿಯಾನ ನಡೆಸೋಣ. ಶಿವಮೊಗ್ಗದ ಬಿಜೆಪಿ ಕೂಗುಮಾರಿಗಳ ಅಬ್ಬರದಲ್ಲಿ ಕಾಂಗ್ರೆಸ್ ತಲೆತಗ್ಗುವಂತೆ ಮಾಡಿದ್ದರು. ಇಂದು ಎದೆ ಉಬ್ಬಿಸಿ ಮತಯಾಚಿಸೋಣ ಎಂದರು.

ಇತ್ತೀಚೆಗೆ ಕೊಟ್ಟ ಅಕ್ಷತೆ ಕಾಳನ್ನ ಹಂಚಲಾಗಿತ್ತು. ಅಕ್ಷತೆ ಕೊಡುವುದು ಪ್ರಸಾದ ಪ್ರತೀಕ. ಅನ್ನಭಾಗ್ಯದ ಅಕ್ಕಿಯಲ್ಲಿ ಈ ಅಕ್ಷತೆ ಬೆರಸಿ ಪ್ರಸಾದ ತಿನ್ನೋಣ ಎಂದು ಕರೆ ನೀಡಿದರು. ಶಿವಮೊಗ್ಗದಲ್ಲಿ ನಡೆದ ರಾಗಿಗುಡ್ಡದ ಘಟನೆಯನ್ನ ಪ್ರಸ್ತಾಪಿಸಿ ಟಿವಿಯಲ್ಲಿ ಮಾತ್ರ ಕೊತಕೊತವಿದೆ. ಹೊರಗಡೆ ಅಣ್ಣತಮ್ಮಂದಿರುವಂತೆ ಆಗಿದೆ.

ಉರುಳಾಗಲಿದೆ ಎಲಕ್ಷನ್ ಬಾಂಡ್

ಕೂಗು ಮಾರಿಗಳು ಬಿಜೆಪಿಗಳು, ಜೀವಪರತೆ ಎಂದರೆ ಕಾಂಗ್ರೆಸ್ ಮತ್ತು ಅದರ ಗ್ಯಾರೆಂಟಿಯಾಗಿದೆ. ರಫೇಲ್ ಫೈಲ್, ಪಿಎಂ ಕೇರ್ ಮಾಹಿತಿ ಸಿಗಲಿಲ್ಲ. ಈಗ ಎಲೆಕ್ಷನ್‌ ಬಾಂಡ್ ವಿಷಯದಲ್ಲಿ ಕೂಗುಮಾರಿಗಳು ಸಿಕ್ಕಿಕೊಂಡಿದ್ದಾರೆ. ಎಲೆಕ್ಷನ್ ಬಾಂಡ್ ನ ಮೂಲಕ ಚೌಕಿದಾರ್ ಏನೇನೋ ದಾರರಾಗಿ ಪರಿವರ್ತನೆಯಾಗಿರುವುದು ಕಂಡು ಬರುತ್ತಿದೆ ಎಂದರು.

ವಿದೇಶಿ ಹಣವನ್ನ ಯಾವುದೇ ಪಕ್ಷ ಪಡೆಯದಂತೆ ಕಾನೂನನ್ನ ಕಾಂಗ್ರೆಸ್ ತಂದಿತ್ತು. ತಾವು ಸಾಚಾ ದೇಶಪ್ರೇಮಿಗಳೆಂದು ಹೇಳಿಕೊಳ್ಳುವ ಬಿಜೆಪಿ ಪಾಕಿಸ್ತಾನ್ ನಿಂದಲೇ ಹಣಪಡೆದ ಉದಾಹರಣೆ ಸಮೇತ ವಿವರಿಸಿದರು.

ಸಂಸದರಂತೆ ನಮ್ಮ ಅಭ್ಯರ್ಥಿಗೆ ಚೋಟ ಸಹಿ ಮಾಡಲು ಬರೊಲ್ಲ

ಶಿವಮೊಗ್ಗದ ಸಂಸದರು ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರಿಗೆ ಅನುಭವವಿಲ್ಲ ಎಂದಿದ್ದಾರೆ. ಹೌದು ಅವರಿಗೆ ಚೆಕ್ ನಲ್ಲಿ ಹಣ ಪಡೆದು ಅಕೌಙಟ್ ಗೆ ಹಾಕಿಕೊಳ್ಳುವ ಅನುಭವಿಲ್ಲ. ಚೋಟಾ ಸಹಿ ಮಾಡಿಚೆಕ್ ಪಡೆದ ಅನುಭವ ಇಲ್ಲ ಎಂದು ಟಾಂಗ್ ನೀಡಿದರು.

ಈಶ್ವರಪ್ಪನವರಿಗೂ ನಮ್ಮನ್ನ ಬೆಂಬಲಿಸಲು ತಿಳಿಸಿ

ಈಶ್ವರಪ್ಪನವರಿಗೆ ಹಾಲಿ ಸಂಸಸದರ ಮತ್ತು ತಂದೆಯ ಮೇಲೆ ಸಿಟ್ಟಿದೆ.‌ ಹಾಗಾಗಿ ಅವರಕಡೆ ಏನಾದರೂ ನಮ್ಮವರು ಮತ್ತು ಈಶ್ರಪ್ಪನವರಿಗೆ ನಮ್ಮ ಕಾರ್ಯಕರ್ತರು ಭೇಟಿ ಆದರೆ ನಮ್ಮ ಪಕ್ಷದ ಗೀತಾ ಶಿವರಾಜ್ ಕುಮಾರ್ ಗೆ ಮತಹಾಕಿ ನಿಮ್ಮ ಸಿಟ್ಟನ್ನ ತೀರಿಸಿಕೊಳ್ಳಿ ಎಂದರು.

ಹೆಚ್ ಸಿ ಯೋಗೀಶ್ ಮಾತು

ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೀಶ್ ಮಾತನಾಡಿ, ಬೂತ್ ಅಧ್ಯಕ್ಷ ಇಲ್ಲದಿದ್ದರೆ ಪಕ್ಷವಿಲ್ಲ. ಸರ್ಕಾರದ ಯೋಜನೆ ಮುಟ್ಟಿಸಲು ಬೂತ್ ಅಧ್ಯಕ್ಷರ ಪಾತ್ರ ನಹತ್ವ ಪಡೆದಿದೆ. 2023 ರ ಚುನಾವಣೆಯಲ್ಲಿ ಗ್ಯಾರೆಂಟಿ ಕೊಡ್ತೀವಿ ಎಂದು ಹೆಜ್ಜೆ ಮಾಡಿಕೊಂಡು ಹೋಗುದ್ವಿ, ಅದನ್ನ ವಿರೋಧಿಗಳು ಹೆಜ್ಜೆಯನ್ನ ಅಳಸಿಕೊಂಡು ಬರುತ್ತಿದ್ದರು.

ಈಗ ಗ್ಯಾರೆಂಟಿ ಕೊಟ್ಟಿದ್ದೇವೆ ಎಂಬ ಹೆಗ್ಗಳಿಕೆಯಲ್ಲಿ ಒಂದು ನಿಮಿಷ ಒಂದು ಮನೆ ಎಂಬ ಅಭಿಯಾನದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೇಳೋಣ. ಒಂದು ಮನೆಯಲ್ಲಿ ಒಂದು ನಿಮಿಷ ಕಳೆದರೆ ನಾಲ್ಕೈದು ಮತ ಪಡೆಯಲು ಯಶಸ್ವಿಯಾಗಲಿದ್ದೇವೆ ಎಂದರು.

ಮನೆಗಳಲ್ಲಿ ಹೋಗಿ ಗೃಹಲಕ್ಷ್ಮಿ ಬಂತ ಎಂಬ ಪ್ರಶ್ನೆಗಳಿಗೆ ನಾಲ್ಕು ಸೆಕೆಂಡು ಬೇಕು. ಜನಗಳಲ್ಲಿ ಗ್ಯಾರೆಂಟಿ ಬಗ್ಗೆ ನಾಲ್ಕು ವರ್ಷ ಬರುತ್ತಾ ಎಂಬ ಆತಂಕವಿದೆ. ಹೀಗೆ ಗ್ಯಾರೆಂಟಿ ಮತ್ತು ಅಭ್ಯರ್ಥಿಯ ಪರ ಮತಯಾಚಿಸಲು ಬಗ್ಗೆ ವಿವರಣೆ ಕೊಡಲು ಒಂದು ನಿಮಿಷ ಹೇಳಲು ಸಮಯಬೇಕಿರುವುದರಿಂದ ಒಂದು ಮನೆ ಒಂದು ನಿಮಿಷ ಅಭಿಯಾನ ನಡೆಸಲಾಗಿವುದು ಎಂದರು.‌

ರಂಜಾನ್, ಬಸವಣ್ಣ ಜಯಂತಿ ಯುಗಾದಿ ಹಬ್ಬದ ವೇಳೆ ಪಗರಚಾರವನ್ನ ಹೇಗೆ ಮಾಡಬೇಕು ಎಂಬುದನ್ನ ಯೋಚಿಸಿ ಮತಯಾಚಿಸೋಣ. 2004 ರಿಂದ ಕಾಂಗ್ರೆಸ್ ಅಭ್ಯರ್ಥಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದಿಲ್ಲ. ಗೆಲ್ಲೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ ಸಿ ಆರ್.ಪ್ರಸನ್ಬ ಕುಮಾರ್, ಕಲಗೋಡು ರತ್ನಾಕರ್, ಮಾಜಿ ಜಿಪಮ ಅಧ್ಯಕ್ಷ ಬಲ್ಕೀಶ್ ಭಾನು, ಉತ್ತರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಶಿವಕುಮಾರ್, ಎನ್ ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಅಲ್ತಾಫ್ ಪರ್ವೇಜ್, ಎನ್ ಎಸ್ ಯುಐ ಮಧು, ಚೇತನ್ ಗೌಡ, ಯುವ ಕಾಂಗ್ರೆಸ್ ನ ಗಿರೀಶ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/11808

Related Articles

Leave a Reply

Your email address will not be published. Required fields are marked *

Back to top button