ರಾಷ್ಟ್ರೀಯ ಸುದ್ದಿಗಳು

ಆಮಂತ್ರಣದ ಮಂತ್ರಾಕ್ಷತೆಯ ಕಳಶ ಶಿವಮೊಗ್ಗಕ್ಕೆ ಆಗಮನ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ರಾಮಮಂದಿರ ಉದ್ಘಾಟನೆಗೆ ಸಾರ್ವಜನಿಕರಿಗೆ ಆಮಂತ್ರಿಸಲು ಅಯೋದ್ಯಯಿಂದ ಆಮಂತ್ರಣ ಮಂತ್ರಾಕ್ಷತೆಯನ್ನ ತರಲಾಗಿದೆ.

ಕಳಶದಲ್ಲಿ ಮಂತ್ರಾಕ್ಷತೆಯನ್ನ ಸಂಗ್ರಹಿಸಿ ಬೆಂಗಳೂರಿಗೆ ಬೆಳಿಗ್ಗೆ ಬಂದಿದ್ದು ಪೂಜೆ ಸಲ್ಲಿಸಿ ನಂತರ ಜನಶತಾಬ್ದಿ ರೈಲಿನಲ್ಲಿ  ಮಂತ್ರಾಕ್ಷತೆಯನ್ನ ಶಿವಮೊಗ್ಗಕ್ಕೆ ತರಲಾಗಿದೆ.  ರೈಲಿನಲ್ಲಿ ಹಿಂದೂ ಸಂಘಟನೆಯ ಮುಖಂಡರಾದ ರಾಘವೇಂದ್ರ ವಡೀವೇಲು, ನಾರಯಣ್ ವರ್ಣೇಕರ್, ಸಚಿನ್ ರಾಯ್ಕರ್,ಧರಣೇಶ್ ಈ ಮಂತ್ರಾಕ್ಷತೆಯನ್ನ ಬೆಕ್ಕಿನ ಕಲ್ಮಠಕ್ಕೆ ಕರೆತರಲಾಗಿದೆ.

ನಂತರ ಬೆಕ್ಕಿನ ಕಲ್ಮಠದಿಂದ ಕಳಶವನ್ನ ಹೂವಿನ ಪುಷ್ಪಾರ್ಚನೆ ಮಾಡಿ  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗೆ ತೆರದ ಜೀಪಿನಲ್ಲಿ ಅಕ್ಷತೆಯನ್ನ ಮೆರವಣಿಗೆಯ ಮೂಲಕ ತರಲಾಯಿತು. ಈ ವೇಳೆ ಹಿಂದೂ ಸಂಘಟಿಜರ ಘೋಷಣೆ ಮತ್ತು ಭಜನೆಗಳನ್ನ ಹಾಡಿದ್ದಾರೆ. ಮೆರವಣಿಗೆಯ ವೇಳೆ ಮನೆಯ ಮುಂದೆ ಸಾರ್ವಜನಿಕರು ನೀರು ಹಾಕಿ ಸ್ವಾಗತ ಮಾಡಿಕೊಂಡ ದೃಶ್ಯ ಲಭ್ಯವಾಗಿದೆ.

ಹಿಂದೂ ಸಂಘಟಕರಾದ ವಾಸುದೇವ್, ರಾಜೇಶ್ ಗೌಡ, ಕಳಶತ ಸಚಿನ್ ರಾಯ್ಕರ್, ವರ್ಣೇಕರ್, ರಾಘವೇಂದ್ರ ವಡಿವೇಲು ರಾಜು, ಮುರಳೀಧರ್  ಮೊದಲಾದವರು ಭಾಗಿಯಾಗಿದ್ದರು.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನ ಹಿಂದೂ ಸಂಘಟಿಕರು ತಲೆ ಮೇಲೆ ಹೊತ್ತು ಪ್ರದಕ್ಷಣೆ ಹಾಕಿ ಸೀತಾರಾಮ ಮತ್ತು ಆಂಜನೇಯ ದೇವರ ಮುಂದೆ ಇಟ್ಟು ಪೂಜೆ ನಡೆಸಲಾಯಿತು. ನಂತರ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು‌  ಜ.1 ರಿಂದ ಜ.15 ರ ವರೆಗೆ ಶಿವಮೊಗ್ಗ ನಗರ, ತಾಲೂಕು, ಭದ್ರಾವತಿ ಮತ್ತು ತೀರ್ಥಹಳ್ಳಿತಾಲೂಕಿನಲ್ಲಿ ಹಂಚಲಾಗುವುದು.

ಇದನ್ನೂ ಓದಿ-https://suddilive.in/archives/3680

Related Articles

Leave a Reply

Your email address will not be published. Required fields are marked *

Back to top button