ಕ್ರೈಂ ನ್ಯೂಸ್

ಅಡಿಕೆ ಕಳ್ಳರ ಬಂಧನ

ಸುದ್ದಿಲೈವ್/ಶಿವಮೊಗ್ಗ

ಅಡಿಕೆ ಕಳ್ಳರನ್ನ ಪತ್ತೆಹಚ್ಚುವಲ್ಲಿ ರಿಪ್ಪನ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ: 16/11/2023 ರಂದು ರಾತ್ರಿ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ಹರತಾಳು ಮಜಿರೆ ಕ್ವಾಡ್ರಿಗೆ ಗ್ರಾಮದ ಬಾಲರಾಜ್ ರವರು ತಮ್ಮ ಮನೆ ಪಕ್ಕದಲ್ಲಿ ಒಣಗಿಸಲು ಹಾಕಿದ್ದ ಸುಮಾರು 1 ಲಕ್ಷ ರೂ ಮೌಲ್ಯದ ಅಡಿಕೆ ಕಳುವಾಗಿತ್ತು.  ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ಪತ್ತೆಗೆ ಗುರಣ್ಣ ಹೆಬ್ಬಾಳ್ ಸಿಪಿಐ ಹೊಸನಗರ ರವರ ಮೇಲ್ವಿಚಾರಣೆಯಲ್ಲಿ, ಪ್ರವೀಣ್ ಪಿ.ಎಸ್.ಐ* ರಿಪ್ಪನ್ ಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳಾದ ಪಿಸಿ ಶಿವಕುಮಾರ್ ನಾಯ್ಕ, ಉಮೇಶ್ ಹಾಗೂ ಸಂತೋಷ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಸದರಿ ತನಿಖಾ ತಂಡವು ದಿನಾಂಕಃ 27-11-2023 ರಂದು ಪ್ರಕರಣದ ಆರೋಪಿತರಾದ 1) ರಾಘವೇಂದ್ರ, 28 ವರ್ಷ ಹರತಾಳ್ ಗ್ರಾಮ, ಹೊಸನಗರ ಮತ್ತು 2) ಶ್ರೀಧರ್ 52 ವರ್ಷ, ನಂಜವಳ್ಳಿ ಗ್ರಾಮ ಹೊಸನಗರ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 85,000/- ರೂ ಗಳ 1 ಕ್ವಿಂಟಾಲ್ 85 ಕೆ.ಜಿ ತೂಕದ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 3,00,000/- ರೂಗಳ ಮಹೀಂದ್ರ ಜೀತೋ ಪ್ಲಸ್ ಲಗೇಜ್ ಆಟೋ ಹಾಗೂ ಗುನ್ನೆ ಸಂಖ್ಯೆ 0085/2023 ಕಲಂ 379 ಐಪಿಸಿ ಪ್ರಕರಣಕ್ಕೆ ಸಂಬಂದಿಸಿದ ಅಂದಾಜು ಮೌಲ್ಯ 25,000/- ರೂಗಳ 300 ರಬ್ಬರ್ ಶೀಟ್ ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು  ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/3880

Related Articles

Leave a Reply

Your email address will not be published. Required fields are marked *

Back to top button