ಕ್ರೈಂ ನ್ಯೂಸ್

18 ಕ್ಕೆ ಏರಿದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆದ ಕಳವು ಪ್ರಕರಣ

ಸುದ್ದಿಲೈವ್/ಶಿವಮೊಗ್ಗ

ಕೆಎಸ್ ಆರ್ ಟಿಸಿಯಲ್ಲಿ ನಡೆಯುವ ಕಳ್ಳತನ ಪ್ರಕರಣ 18 ಕ್ಕೆ ಏರಿದೆ. ಪ್ರತಿ ವರ್ಷ 10-15 ರ ವರೆಗೆ ನಡೆಯುತ್ತಿದ್ದ ಕಳವು ಪ್ರಕರಣಗಳು ಈ ವರ್ಷ ತನ್ನ ಟಾರ್ಗೆಟ್ ಮುಗಿಸಿ ಕೊಂಚ ಹೆಚ್ಚಿಗೆ ಆಗಿವೆ. ಬೆರಳೆಣಿಕೆ ಪ್ರಕರಣಗಳು ಅದರಲ್ಲೂ ಪೊಲೀಸರ ಪ್ರಯತ್ನದಿಂದ ಪತ್ತೆಯಾಗಿವೆ. ಆದರೆ  ಸಿಸಿ ಟಿವಿ ಕ್ಯಾಮೆರಾಗಳ ಕೊರತೆಯೊಂದು ಈ ಪ್ರಕರಣದ ಆರೋಪಿಗಳ ಪತ್ತೆಗೆ ಸಹಕಾರಿಯಾಗುತ್ತಿಲ್ಲ.

ಆದರೂ ಇಲಾಖೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಮನಸ್ಸು ಮಾಡುತ್ತಿಲ್ಲ. ಯಾವ ಪಕ್ಷದವರು ಸಂಘಟನೆಗಳು ಸಹ ಸಿಸಿ ಟಿವಿ ಕ್ಯಾಮೆರಾ ಮತ್ತು ಪ್ರಯಾಣಿಕರ ಸುರಕ್ಷತೆ ಬಗ್ಗೆ ಮಾತನಾಡದೆ ಇರುವುದು ದುರಂತವೇ ಸರಿ. ಪೊಲೀಸ್ ಇಲಾಖೆಯೂ ಸಹ ಶಿವಮೊಗ್ಗ ksrtc ವಿಭಾಗೀಯ ನಿಯಂತ್ರಣ ಕಚೇರಿಗೆ ನೋಟೀಸ್ ಜಾರಿ ಮಾಡಿದೆ. ಬಹುಶಃ ಎಲ್ಲಾ ನೋಟೀಸ್ ಗಳು ಡಸ್ಟ್ ಬಿನ್ ಸೇರಿದೆ ವಿನಃ ಪ್ರಯಾಣಿಕರ ಸಂರಕ್ಷಣೆ ಮರಿಚಿಕೆಯಾಗಿದೆ.

33 ಲಕ್ಷ ರೂ. ಹಣ ಕಳವಾಗಿದ್ದ ಪ್ರಕರಣ, ಮೊಮ್ಮಗಳ ಬರ್ತಡೇಗಾಗಿ ಚಿನ್ನದ ಸರ ತಂದಿದ್ದ ಅಜ್ಜಿಯ ಪರ್ಸ್ ನಿಂದ ನಾಪತ್ತೆ ಪ್ರಕರಣ ಹೀಗೆ ದೊಡ್ಡ ದೊಡ್ಡ ಪ್ರಕರಣಗಳು ಬಸ್ ನಿಲ್ದಾಣದಲ್ಲಿ ನಡೆದಿದ್ದರೂ ಸಿಸಿ ಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ಪತ್ತೆಯಾಗಿಲ್ಲ. ಎರಡರಲ್ಲಿ  ಮತ್ತೊಂದು ಮೂರನೇ ಪ್ರಕರಣಗಳು ನಡೆದಿದೆ. ಇಲಾಖೆಯ ನಿರ್ಲಕ್ಷ್ಯತೆ ಯಾವ ಕಾರಣಕ್ಕೆ ಗೊತ್ತಿಲ್ಲ. ನಾಲ್ಕೈದು ತಿಂಗಳಿಂದ ವೆಬ್ ಪೋರ್ಟಲ್ ಎಚ್ಚರಿಕೆ ನೀಡುತ್ತಲೇ ಬಂದಿದೆ. ಆದರೂ ಎಮ್ಮೆ ಚರ್ಮದ ಅಧಿಕಾರಿಗಳಿಗೆ ಅಳವಡಿಸಬೇಕೆಂಬ ಮನಸ್ಸು ಬಾರದೆ ಇರುವುದು ದುರಂತ.

ಅತ್ಲಾಗೆ‌ ಪೊಲೀಸರೆ ಎ1 ಆರೋಪಿ ಕೆಎಸ್ ಆರ್‌ಟಿ ಸಿ ಎಂದು ಎಫ್ಐಆರ್ ಮಾಡಿಕೊಂಡು  ದಾಖಲಿಸಿಕೊಂಡರೆ ಒಳ್ಳೆಯದು ಅಂತ ಅನಿಸುತ್ತೆ. ಆ ಕೆಲಸವಾದರೂ ಆದರೆ ಎಲ್ಲಾ ಪ್ರಕರಣಗಳಿಗೆ ನ್ಯಾಯದೊರಕಬಹುದು.

57 ವರ್ಷದ ಮಹಿಳೆ ಶಿವಮೊಗ್ಗ ಸೀಗೆಹಟ್ಟಿಯಲ್ಲಿರುವ  ಚಿಕ್ಕಪ್ಪನ ಮಗ ಸಂತೋಷ ರವರ ಮನೆಯ ಗ್ರಹಪ್ರವೇಶ ಇದ್ದುದರಿಂದ ದಿನಾಂಕ: 20-11-2023 ರಂದು  ಸಾಗರದಿಂದ ಶಿವಮೊಗ್ಗಕ್ಕೆ ಮದ್ಯಾಹ್ನ 01-00 ಗಂಟೆಗೆ  ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಗ್ರಹಪ್ರವೇಶ ಕಾರ್ಯ ಮುಗಿಸಿ ವಾಪಾಸ್ ಸಾಗರಕ್ಕೆ ಹೋಗಲು ಶಿವಮೊಗ್ಗ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಪುನಃ ಸಂಜೆ 05-00 ಗಂಟೆಗೆ ಬಂದು ಸಾಗರ ಪ್ಲಾಟ್ ಫಾರಂನಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ ಬಸ್ ಪ್ಲಾಟ್ ಫಾರಂಗೆ ಬಂದಿದೆ. ಜನ ಜಾಸ್ತಿ ಇದ್ದು, ತುಂಬಾ ರಶ್‌ ಆಗಿದ್ದರಿಂದ ಮಹಿಳೆ ಬಸ್ ಹತ್ತಿ ಕುಳಿತುಕೊಂಡಿದ್ದಾರೆ,

ನಂತರ ಬಸ್ ನಲ್ಲಿ ಕಂಡೆಕ್ಟರ್ ಆಧಾರ್ ಕಾರ್ಡ್ ತೋರಿಸಲು ಹೇಳಿದಾಗ ಬ್ಯಾಗಿನ ಜಿಪ್ ಓಪನ್ ಮುಂದಾಗ ಮಹಿಳೆಗೆ ಶಾಕ್ ಆಗಿದೆ. ಬ್ಯಾಗ್ ಒಪನ್ ಆಗಿದ್ದು ತಕ್ಷಣ  ಚೆಕ್ ಮಾಡಿದಾಗ ಬ್ಯಾಗ್ ನಲ್ಲಿಟ್ಟಿದ್ದ ಕಪ್ಪು ಪರ್ಸ್ ಕಾಣೆಯಾಗಿತ್ತು. ಈ ಕಪ್ಪು ಪರ್ಸ್ ನಲ್ಲಿ ಪಿರ್ಯಾದುದಾರರ ಮದುವೆಗೆ ಅವರ ತಂದೆಯವರು ಉಡುಗೊರೆಯಾಗಿ ನೀಡಿದ್ದ ಎರಡು ಎಳೆಯ ಹಸಿರು ಮಣಿ ಮತ್ತು ಬಂಗಾರದ ಗುಂಡು, ಆಧಾರ್ ಕಾರ್ಡ್ ಕಳುವಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/3536

Related Articles

Leave a Reply

Your email address will not be published. Required fields are marked *

Back to top button