ನ.17 ರಂದ ಕೆಎಸ್ ಸಿಎ ಮತ್ತು ಜೆಎನ್ ಎನ್ ಸಿ ಇ ಕಾಲೇಜಿನಲ್ಲಿ ಕ್ರಿಕೆಟ್ ಕಲರವ

ಸುದ್ದಿಲೈವ್/ಶಿವಮೊಗ್ಗ

ಮಹಿಳಾ ಕ್ರಿಕೆಟ್ ನ ವಿವಿಧ ವಯೋಮಮಿತಿ ಪಂದ್ಯಾವಳಿಗಳನ್ನ ನಗರದ ಕೆಎಸ್ ಸಿಎ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದ ಎರಡು ಮೈದಾನದಲ್ಲಿ 6 ತಂಡಗಳು ಆಡುತ್ಯಿವೆ. ಈ ಪಙದ್ಯಾವಳಿಗಳು ದೇಶದ ವಿವಿಧ ಮೈದಾನಗಳಲ್ಲಿ ಎ ಬಿ ಸಿ ಡಿ ಇ ಎಫ್ ತಂಡಗಳಾಗಿ ಆಡಲಿವೆ. ಎಫ್ ತಂಡ ಮಾತ್ರ ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ನಡೆಯಲಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಸಿಎ ವಲಯ ಸಂಚಾಲಕ ಸದಾನಂದ ಗೌಡ ಎಬಿಸಿಡಿ ಇಎಫ್ ತಂಡಗಳಲ್ಲಿ 36 ಪಂದ್ಯಾವಳಿಗಳು ನಡೆಯಲಿವೆ. ಎಫ್ ತಂಡಗಳಲ್ಲಿ, ಬರೋಡಾ, ಹಿಮಾಚಲ ಪ್ರದೇಶ, ಮಣಿಪುರ, ಪಾಂಡೀಚೇರಿ, ಪಂಜಾಬ್, ಉತ್ತರಪ್ರದೇಶ ರಾಜ್ಯಗಳು ಆಡಲಿವೆ. 15 ವರ್ಷದ ಒಳಗಿನ ಬಾಲಕೀಯರ ಕ್ರಿಕೆಟ್ ಪಂದ್ಯಾವಳಿ ನ.17 ರಂದು ನವುಲೆ ಕೆಎಸ್ ಸಿಎ ಮತ್ತು ಜೆಎನ್ ಎನ್ ಸಿ ಇ ಕಾಲೇಜಿನಲ್ಲಿ ಅಟ ನಡೆಯಲಿವೆ.
35 ಓವರ್ ನ ಪಂದ್ಯಾವಳಿಗಳಾಗಿವೆ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಎ ರಘುರಾಮ್ ಭಟ್ ಉದ್ಘಾಟಿಸಲಿದ್ದಾರೆ. ಜೆಎನ್ ಎನ್ ಸಿಸಿ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯನ್ನ ಕಾಲೇಜಿನ ಕಾರ್ಯದರ್ಶಿ ನಾಗರಾಜ್ ಉದ್ಘಾಟಿಸಲಿದ್ದಾರೆ. ನ.17 ರಿಂದ 25 ರವರೆಗೆ ಪಂದ್ಯಾವಳಿ ನಡೆಯಲಿದೆ ಎಂದರು.
ಪ್ರತಿದಿನ ಬೆಳಿಗ್ಗೆ 9 ರಂದು ಪಂದ್ಯಾವಳಿ ಆರಂಭವಾಗಿದೆ. ಬಿಳಿ ಬಣ್ಣದ ಬಾಲು ಕಲರ್ ಬಟ್ಟೆಗಳಲ್ಲಿ ಕ್ರೀಡಗಾಋಉ ಫೀಲ್ಡ್ ಗೆ ಇಳಿಯಲಿದ್ದಾರೆ. ಬಿಸಿಸಿಐನ ತೀರ್ಪುಗಾರರು ಆಗಮಿಸಲಿದ್ದಾರೆ. ಇದು ಅಂತರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಾಗಿದೆ ಎಂದರು.
ಇದನ್ನೂ ಓದಿ-https://suddilive.in/archives/3081
