ರೈತ ಸಂಘದಿಂದ 72 ಗಂಡೆಗಳ ಕಾಲ ಮಹಾಧರಣಿ

ಸುದ್ದಿಲೈವ್/ಶಿವಮೊಗ್ಗ

ಅಖಿಲ ಭಾರತ ಕಿಸಾನ್ ಮೋರ್ಚಾ ಜೆಸಿಟಿಐ( ಕಾರ್ಮಿಕ ಜಂಟಿ ಸಮಿತಿ) ನ.26 ರಿಂದ 28 ರ ವರೆಗೆ ದೆಹಲಿಯಲ್ಲಿ ಧರಣಿ ನಡೆಸುತ್ತಿದೆ. ಅದರ ಅಂಗವಾಗಿ ಕರ್ನಾಟಕದ ಫ್ರೀಡಂ ಪಾರ್ಕ್ ನಲ್ಲಿ 72 ಗಂಟೆ ಮಹಾಧರಣಿ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಕೃಷಿ ಕಾಯ್ದೆ ಹಿಂಪಡೆದಾಗ ಬೆಂಬಲ ಬೆಲೆ ಸೇರಿದಂತೆ ಮೂರು ಕಾನೂನು ಜಾರಿ ಮಾಡುವುದಾಗಿ ಭರ ಸೆ ನೀಡಿತ್ತು. ಬೆಳೆಯ ಬೆಂಬಲ ಬೆಲೆ ನಿಗದಿ, ವಿದ್ಯುತ್ ತಿದ್ದುಪಡಿ ಭರವಸೆ ಈಡೇರಲಿಲ್ಲ. ಕೇಂದ್ರದ ಕೃಷಿ ಕಾಯ್ದೆಯ ಪೂರಕ ಕಾಯ್ದೆಯನ್ನ ರಾಜ್ಯ ಸರ್ಕಾರ ಮುಂದುವರೆಸಿದೆ.. ಕಾಂಗ್ರೆಸ್ ಸಹ ಕೃಷಿ ನೀತಿ ಹಿಂಪಡೆಯಲು ಪ್ರಯತ್ನಿಸಿಲ್ಲ. ಇದನ್ನ ವಿರೋಧಿಸಿ ನ.28 ರಂದು ರಾಜಭವನ ಮುತ್ತಿಗೆ ಹಾಕಲಾಗುವುದು ಎಂದರು.
ನ. 28 ರಂದು ಪ್ರತಿಭಟನೆಯ ವೇಳೆ ಮನವಿ ಸ್ವೀಕರಿಸಿದರೆ ರಾಜಭವನ ಮುತ್ತಿಗೆ ರದ್ದಾಗಲಿದೆ. ಇಲ್ಲವೆಂದರೆ ಮುತ್ತಿಗೆ ನಡೆಯುವುದಾಗಿ ತಿಳಿಸುದರು. ರಾಜ್ಯ ಸರ್ಕಾರ 20 ಸಾವಿರ ರೂ ಹಣ ಕಟ್ಟಿದರೆ ವಿದ್ಯುತ್ ನೀಡುವ ರೀತಿಯಲ್ಲಿಯೇ ನೀಡಬೇಕು. ಇಲ್ಲ ಕೃಷಿಯನ್ನ ಕೈಗಾರಿಕೆ ಎಂದು ಘೀಷಣೆ ಮಾಡಲಿ ಎಂದು ಸವಾಲು ಎಸೆದರು.
ಗ್ಯಾರೆಂಟಿ ಯ ಗುಂಗಿನಲ್ಲಿ ಮುಳುಗಿರು ರಾಜ್ಯ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಕೈಹಿಡಿಯೊಲ್ಲ. ಲೋಕಸಭಾ ಚುನಾವಣೆಯಲ್ಲಿ ಕೈಕೊಡಲಿದೆ. ನಮ್ಮ ಜಿಲ್ಲೆಯಿಂದ 400 ಜನ ಭಾಗಿಯಾಗಲಿದ್ದು, ಫ್ರೀಡಂ ಪಾರ್ಕ್ ನಲ್ಲಿ 1 ಲಕ್ಷ ಜನ ಭಾಗಿಯಾಗಲಿದ್ದಾರೆ. ಕಾರ್ಮಿಕರ ದುಡಿಮೆಯ ಗಂಟೆಯನ್ನಹೆಚ್ಚಿಸಿದೆ ರಾಜ್ಯವೂ ಇದನ್ನ ಸ್ವೀಕರಿಸಿದೆ. ಇದನ್ಊ ಸಂಘಟನೆ ಖಂಡಿಸಿದೆ.
ಇದನ್ನೂ ಓದಿ-https://suddilive.in/archives/3072
