ಸ್ಥಳೀಯ ಸುದ್ದಿಗಳು

ಅರಿಷಡ್ವರ್ಗವನ್ನ ನಿಯಂತ್ರಿಸಿಕೊಂಡವನೇ ಆರೋಗ್ಯವಂತ-ಕೋಡಿಮಠದ ಶ್ರೀಗಳು

ಸುದ್ದಿಲೈವ್/ಶಿವಮೊಗ್ಗ

6 ಅರಿಷಡ್ವರ್ಗಗಳು ಯೋಗ್ಯವಾಗಿದ್ದರೆ ಆರೋಗ್ಯ ಕಾಪಾಡಿಕೊಂಡ ಹಾಗೆ ಎಂದು ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಡಾ.ಸರ್ಜಿ ಆಸ್ಪತ್ರೆ ಯಲ್ಲಿ ಹಮ್ಮಿಕೊಳ್ಳಲಾದ ಅಮೃತ ಬಿಂದು ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಗೋವಿನ ಹಾಲಿನ ಅಯುಸ್ಸು 12 ಗಂಟೆ, ಮೊಸರಿಗೆ 24 ಗಂಟೆ ಆಗಲಿದೆ. ಮನುಷ್ಯ ಇದರ ಅಯಸ್ಸು ಹೆಚ್ಚಿಲು ಬೆಂಕಿ ಬಳಸಿ ಅದರ ಆಯುಸ್ಸನ್ನ ಹೆಚ್ಚಿಸುತ್ತದೆ ಎಂದರು.

ಹಾಲಿನಿಂದ ಬೆಣ್ಣೆ, ತುಪ್ಪ ತಯಾರಿಸುತ್ತಾರೆ. ತುಪ್ಪ ಎಷ್ಟು ಹಳೆಯದಾದರೂ ಅದಕ್ಕೆಆಯಸ್ಸು ಜಾಸ್ತಿ, ತಾಯಿಯ ಹಾಲು ಎಲ್ಲರನ್ನೂ ಕುಡಿದವರೆ, ತಾಯಿ ಎದೆಹಾಲು ಬಿಟ್ಟು ಬಾಟಲಿ ಹಾಲು ಉಣಿಸುವುದರೊಂದಿಗೆ ಬಾಟಲಿ ಎಲ್ಲಕಡೆ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ತಾಯಿ ಹಾಲು ಅಮೃತ ಸಮಾನ ಇಂತಹ ಕೆಲಸವನ್ನ ರೋಟರಿ ಮತ್ತು ಸರ್ಜಿ ಆಸ್ಪತ್ರೆ ಕೆಲಸ ಮಾಡುತ್ತಿದೆ.

ಡಾ.ಸರ್ಜಿ ಮಾತು

ತಾಯಿಯ ಎದೆಹಾಲನ್ನು ಅಮೃತಕ್ಕೆ ಹೋಲಿಸುತ್ತೇವೆ. ಎದೆಹಾಲು ಕೊಡುವುದರಿಂದ 8ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣವನ್ನು ಒಂದು ವರ್ಷದಲ್ಲಿ
ಉಳಿಸಬಹುದು ಎಂದು ಮಕ್ಕಳ ತಜ್ಞ ಹಾಗೂ ಡಾ. ಸರ್ಜಿ ಪೌಂಡೇಶನ್ ಅಧ್ಯಕ್ಷರಾದ ಡಾ. ಧನಂಜಯ್ ಸರ್ಜಿ ಹೇಳಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾದುದು. ಅದು ಮಗುವಿನ ಜೀವವನ್ನು ಉಳಿಸುತ್ತದೆ. ವಿಶೇಷವಾಗಿ ಅವಧಿಗೆ ಮುಂಚೆ ಹುಟ್ಟಿದ ಮಗುವಿಗೆ ಮತ್ತು ತೂಕ
ಕಡಿಮೆ ಇರುವ ಮಗುವಿಗೆ ಹಾಲಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಮಗುವಿಗೆ ತಾಯಿಯ ಹಾಲು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ
ಮಗುವಿನ ಬೆಳಿವಣಿಗೆ ಕುಂಠಿತ ವಾಗುತ್ತದೆ ಎಂದರು.‌

ನಾನಾ ರೋಗಗಳು ಬಾಧಿಸುತ್ತದೆ ಬಾಟಲಿ
ಹಾಲು ಸೇವಿಸುವ ಹೆಚ್ಚಿನ ಮಕ್ಕಳಲ್ಲಿ ವಾಂತಿ ಬೇಧಿ, ಅತಿಸಾರ, ಹೃದಯದ ಕಾಯಿಲೆ, ಮೆದುಳು ಮತ್ತು ಕಣ್ಣಿನ ಕಾಯಿಲೆ, ಚರ್ಮದ ಕಾಯಿಲೆ ಬರುವ ಸಾಧ್ಯತೆ ಇದೆ. ಎಲ್ಲ ಕಾಯಿಲೆಗಳಿಗೆ ತಾಯಿ ಎದೆಹಾಲು ಅತ್ಯಂತ ಪರಿಣಾಮಕಾರಿಯಾಗಿ ಅಮೃತ ರೂಪದಲ್ಲಿ
ಪರಿಣಾಮ ಬೀರುತ್ತದೆ. ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.

ಒಂದು ಅಂಕಿ ಅಂಶದ ಪ್ರಕಾರ ಶೇ.46 ರಷ್ಟು ನವಜಾತ ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯ ಪಾನವಾಗುತ್ತಿಲ್ಲ ಎಂದು ತಿಳಿದು ಬರುತ್ತಿದೆ. ಇದರ ಪರಿಣಾಮ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಥವಾ ಮೆದುಳಿನ ಬೆಳವಣಿಗೆ ಆಗಿರಬಹುದು, ಇವೆಲ್ಲದರ ಮೇಲೆ
ದುಷ್ಪರಿಣಾಮ ಬೀರುತ್ತಿದೆ. ಇದರ ಪ್ರಾಮುಖ್ಯತೆ ಅರಿತೇ ಎಲ್ಲ ನವ ಜಾತ ಶಿಶುಗಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಎದೆ ಹಾಲಿನ ಬ್ಯಾಂಕ್‍ನ್ನು ಪ್ರಪಂಚಾದ್ಯಂತ ಸ್ಥಾಪನೆ ಮಾಡಲಾಗಿದೆ ಇದೇ ಮೊದಲ ಬಾರಿಗೆ ಮಧ್ಯ ಕರ್ನಾಟಕದಲ್ಲಿ
ಅಮೃತ ಬಿಂದು ಶಿವಮೊಗ್ಗ ಸರ್ಜಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದೆ . ಎದೆಹಾಲಿನಲ್ಲಿ ಅನೇಕ
ಉತ್ತಮ ಅಂಶಗಳಿವೆ. ಇನ್ನು ಇದರ ಬಗ್ಗೆ ಸಂಶೋಧನೆ ನಡೆಯುತ್ತ ಇದೆ. ಎಲ್ಲವನ್ನು ನೀಗಿಸುವ ಶಕ್ತಿ ಎದೆಹಾಲಿನಲ್ಲಿ ಇದೆ ಎಂದರು.

ಆಸಕ್ತಿಇರುವ ಹೆಚ್ಚುವರಿ ಹಾಲು ಲಭ್ಯವಿರುವ ತಾಯಂದಿರು ಸ್ವಯಂ ಪ್ರೇರಿತರಾಗಿ ಎದೆ
ಹಾಲನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ 5ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲಿ ಎದೆಹಾಲು ನೀಡಿ, ಪ್ರಾಣಾಪಾಯದಿಂದ ರಕ್ಷಿಸಿದ್ದೇವೆ. ಅದನ್ನು ಶೇಖರಿಸಿ ಪಾಶ್ಚ್ಯತೀಕರಿಸಿ ಲ್ಯಾಭ್‍ನಲ್ಲಿ ಪರೀಕ್ಷೆ ಮಾಡಿದ ನಂತರ ಸೂಕ್ತ ಉಷ್ಣಾಂಶದಲ್ಲಿ ಅದನ್ನು
ಶೀತಲಿಕರಿಸಿ ಪರೀಕ್ಷೆ ಮಾಡಿದ ಬಳಿಕ ಮಗುವಿಗೆ ಯೋಗ್ಯ ಎಂದು ಕಂಡುಬಂದಲ್ಲಿ ಅದಕ್ಕೆ ಗ್ರೀನ್‍ಲೇಬಲ್ ಹಚ್ಚಿ ಬಾಟಲಿಯಲ್ಲಿ ಸಂಗ್ರಹಿಸಲಾಗುವುದು.ಒಂದು ಎಂಎಲ್ ಹಾಲಿಗೆ 4 ರಿಂದ 6ರೂ.ಗಳ ಖರ್ಚು ಬರುತ್ತಿದ್ದು, ಸಂಗ್ರಹಿಸಿದ ಹಾಲನ್ನು ಶೇ.30ರಷ್ಟು ಸರ್ಕಾರಿ ಆಸ್ಪತ್ರೆಗೆ ಬಡ ಮಕ್ಕಳಿಗೆ ನೀಡಲಾಗುವುದು ಎಂದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕೋಡಿಮಠದ ಶ್ರೀ ಡಾ. ಶಿವಾನಂದ ರಾಜೇಂದ್ರ
ಸ್ವಾಮೀಜಿಗಳು ಮಾತನಾಡಿ, ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ ಎಂಬ ಪರಂಪರೆಯನ್ನು ಇಡೀ ಜಗತ್ತೆ ಹೊಂದಿದೆ. ಎದೆಹಾಲಿನಿಂದ ಬರುವ ಶಕ್ತಿ ಅಪಾರವಾದದ್ದು ಮತ್ತು ಅದು ಎಲ್ಲಿಯೂ ಸಿಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಗೀತಾ, ಆರ್ ಎಸ್ ಎಸ್ ನ ದಕ್ಷಿಣ ಪ್ರಾತ್ಯದ ಕಾರ್ಯವಾಹಕ ಪಟ್ಟಾಭಿರಾಮ್, ಬಿಜೆಪಿ ದತ್ತಾತ್ರಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5111

Related Articles

Leave a Reply

Your email address will not be published. Required fields are marked *

Back to top button