ಸಿಗಂದೂರಿನ ಸೇತುವೆ ನಿರ್ಮಾಣದ ವೇಳೆ ಕೆಳಗೆ ಬಿದ್ದು ಕಾರ್ಮಿಕ ಸಾವು

ಸುದ್ದಿಲೈವ್/ತುಮರಿ

ಸಿಗಂಂದೂರು ಸೇತುವೆ ನಿರ್ಮಿಸುತ್ತಿರುವ ವೇಳೆ ಕಾರ್ಮಿಕನೋರ್ವ ಮೂರ್ಚೆ ಬಂದು ಬಿದ್ದಿದ್ದು ಅವರು ನಿನ್ನೆ ಆಸ್ಪತ್ರೆಯಲ್ಲಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವ ಘಟನೆ ನಡೆದಿದೆ.
ಸಮೀಪದ ಹೊಳೆಬಾಗಿಲಿನಲ್ಲಿ ನಡೆಯುತ್ತಿರುವ ಸಿಗಂದೂರು ಸೇತುವೆ ಕಾಮಗಾರಿ ವೇಳೆ ರಬೀಉಲ್ ಇಸ್ಮಾಯಿಲ್ (42) ಎಂಬಾತ ಮೂರ್ಚೆ ತಪ್ಪಿ ಕೆಖಗೆ ಬಿದ್ದಿದ್ದಾನೆ ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಲಾಗಿತ್ತು. ಆದರೆ ಚಿಕಿತ್ಸೆ ಫಲಕರಿಸದೆ ಇಸ್ಮಾಯಲ್ ಕೊನೆ ಉಸಿರೆಳೆದಿದ್ಸಾರೆ.
ದಿಲೀಪ್ ಕಂಪನಿಯ ಕಾರ್ಮಿಕ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಿಂದ ಬಂದಿದ್ದ ರಬೀಉಲ್ ಇಸ್ಮಾಯಿಲ್ ಮೂರ್ಚೆ ತಪ್ಪಿ ಕೆಳಗೆ ಬಿದ್ದಿದ್ದು, ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಸಾಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು.
ಕಾರ್ಮಿಕನ ಸಹೋದರ ತಾರ್ಜಿನ್ ಅಲಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/2957
