ಈ ಬಾರಿ ಫ್ರೀಡಂ ಪಾರ್ಕ್ ನಲ್ಲಿ ಪಟಾಕಿ ಸ್ಟಾಲ್ ಗೆ ಅವಕಾಶ

ಸುದ್ದಿಲೈವ್/ಶಿವಮೊಗ್ಗ

ಪ್ರತಿ ಬಾರಿ ನೆಹರೂ ಕ್ರೀಡಾಂಗಣದಲ್ಲಿ ಮತ್ತು ಸೈನ್ಸ್ ಮೈದಾನದಿಂದ ಪಟಾಕಿ ಸ್ಟಾಲ್ ಗಳು ಫ್ರೀಡಂ ಪಾರ್ಕ್ ಗೆ ಈ ಬಾರಿ ಶಿಫ್ಟ್ ಆಗಿವೆ. ಪಟಾಕಿ ದರಗಳು ಶೇ.15 ರಿಂದ 20 ರಷ್ಟು ಏರಿಕೆ ಆಗಿವೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿವೆ. ಶಿವಮೊಗ್ಗದಲ್ಲಿ ಜನರಿಂದ ಪಟಾಕಿ ಖರೀದಿ ಜೋರಾಗಿವೆ. ಶಿವಮೊಗ್ಗ ಉಪವಿಭಾಗದಲ್ಲಿ 88 ಹಳೆ ಸ್ಟಾಲ್ ಗಳಿದ್ದರೆ ಈ ಬಾರಿ 18 ಹೊಸಮಳಿಗೆ ನೀಡಲಾಗಿದೆ. ಫ್ರೀಡಂ ಪಾರ್ಕ್ ನಲ್ಲಿರುವ 65 ಪಟಾಕಿ ಸ್ಟಾಲ್ ಗಳು ನಿರ್ಮಿಸಲಾಗುತ್ತಿದೆ.
ಮಕ್ಕಳು ಸೇರಿದಂತೆ ಕುಟುಂಬಸ್ಥರೊಂದಿಗೆ ಆಗಮಿಸಿ, ಪಟಾಕಿ ಖರೀದಿಸಲಾಗುತ್ತಿದೆ. ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಸರ್ಕಾರದ ಸೂಚನೆ ನೀಡಿದೆ. ವರ್ತಕರಿಂದ ಹಸಿರು ಪಟಾಕಿ ಮಾರಾಟ- ಸ್ಟಾಲ್ ಗಳಿಗೆ ನಿರ್ಮಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪಟಾಕಿಗೆ ಡಿಮ್ಯಾಂಡ್ ಕಡಿಮೆಯಾಗಿದೆ.
ರೇಟ್ ಹೆಚ್ಚಾದ್ದರಿಂದ ಮಾರಾಟ ಕಡಿಮೆಯಾಗಿದೆ ಎಂದು ವರ್ತಕರು ಗೊಣಗುತ್ತಿದ್ದರೆ. ದುಬಾರಿಯಾದರೂ ಮಕ್ಕಳಿಗಾಗಿ ಅಲ್ಪಸ್ವಲ್ಪ ಖರೀದಿ ಮಾಡ್ತಿದ್ದೇವೆ ಎಂದು ಗ್ರಾಹಕರು ಗುಣುಗುತ್ತಿದ್ದಾರೆ.
ಇದನ್ನೂ ಓದಿ-https://suddilive.in/archives/2950
