ಶೈಕ್ಷಣಿಕ ಸುದ್ದಿಗಳು

16 ತಿಂಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಿ-ವೇದಿಕೆ ಮೇಲೆ ಸಚಿವರ ಮುಂದೆ ಶಾಸಕ ಚೆನ್ನಬಸಪ್ಪನವರ ಬೇಡಿಕೆ ಏನು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

16 ತಿಂಗಳಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್  ಪಾಟೀಲ್ ಹೇಳಿದರು.

ಅವರು ಮೆಗ್ಗಾನ್ ಆವರದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ವತಿಯಿಂದ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಕಾಮಗಾರಿಯ ಚಾಲನೆ ನೀಡಿ ಮಾತನಾಡಿ 100 ಕೋಟಿ ವೆಚ್ಚದಲ್ಲಿ ಈಗಾಗಲೇ 50 ಕೋಟಿ‌ ಬಿಡುಗಡೆ ಆಗಿದೆ. ಜಿಲ್ಲೆಗೆ ಕ್ಯಾನ್ಸರ್ ನಿರ್ಮಾಣ ಅವಶ್ಯಕತೆ ಇದೆ.ಬಂಗಾರಪ್ಪನವರು ಮೆಗ್ಗಾನ್ ಜನರಿಗೆ ಅನುಕೂಲವಾಗಲಿ ಎಂದು ಜಾಗ ನೀಡಿದರು.ಅದು ಅನುಕೂಲವಾಗಿದೆ ಎಂದು  ಕೋಟಿ ವೆಚ್ಚದ ಕಟ್ಟಡದಲ್ಲಿ ಆಂಕೋಸರ್ಜರಿ, ಕಿಮೋ,  ರೇಡಿಯೋ ಥೆರಪಿ ಸಿಗಲಿದೆ. ಎಂದರು.

ಇಲ್ಲಿನಸೂಪರ್ ಸ್ಪೆಷಲಿಟಿ ಆಸ್ಪತ್ರೆ ಸರಿಯಿಲ್ಲ.ಅಂಜಿಯೋಗ್ರಫಿ, ಆಂಜಿಯೋ ಪ್ಲಾಸ್ಟ್ರಿ ಮಾಡ್ತಾ ಇದ್ದಾರೆ. ಕಾರ್ಡಿಯೋಲಜಿ ಯುನಿಟ್ ಗೆ ಒತ್ತು. ಸೂಪರ್ ಸ್ಪೆಷಲಿಟಿ ಆರಂಭಿಸಲು ಸಮಾಲೋಚಿಸಿ ಸಿಎಂ ಬಳಿ ನಿಯೀಗ ಹೋಗಿ ಹೆಚ್ಚುವರಿ ಅಭಿವೃದ್ಧಿಗೆ ಪ್ರಸ್ತಾಪಿಸೋಣ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಮೆಡಿಕ್ ಶಿಕ್ಷಣದಲ್ಲಿ ನಂ.1 ಆಗಿದೆ 60 ಮೆಡಿಕಲ್ ಕಾಲೆಜ್ ಇವರ 25 ಸರ್ಕಾರಿ‌ಮೆಡಿಕಲ್ ಕಾಲೇಜ್ ಇದೆ. ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜ್ ನೀಡಲಾಗುತ್ತಿದೆ. ಗುಲಬರ್ಗ, ಮೈಸೂರು, ಬೆಳಗಾವಿ ಹುಬ್ಬಳ್ಫಿ ಬಳ್ಳಾರಿಯಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ ಇವರಲ್ಲವೂ ಶೀಘ್ರದಲ್ಲಿಯೇ ಆರಂಭವಾಗಲಿದೆ.

ಮುಂದಿನ 5 ವರ್ಷದಲ್ಲಿ ಪ್ರತಿ ಮೆಡಿಕಲ್ ಕಾಲೇಜ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅವಕಾಶ ನೀಡಲಾಗುವುದು. ಸರ್ಕಾರಿ ಆಸ್ಪತ್ರೆ ಇರುವ ಕಡೆ ನೀಡಲಾಗುವುದು.ಉಚಿತವಾಗಿ ಗುಣಮಟ್ಟದ ಆರೋಗ್ಯ ನೀಡಲಾಗುವುದು. ಸರ್ಕಾರಿ ಕೋಟ ಹೆಚ್ಚಾಗಲಿದೆ ಪ್ರತಿಭಾವಂತರು ವೈದ್ಯರಾಗಲು ಅವಕಾಶ ದೊರೆಯುತ್ತದೆ. ಸ್ಪೀಡ್ ಅಙಡ್ ಕ್ವಾಲಿಟಿ ನಿರ್ವಹಿಸಿ ಎಂದರು.

ಕಟ್ಟಡ ಉದ್ಘಾಟನೆ ಆಗುವ‌ 6 ತಿಂಗಳ ಮುಂಚೆ ಉಪಕರಣದ ಬಗ್ಗೆ ಪಟ್ಟಿಕೊಡಿ, ಎರಡು ವರ್ಷ ಕಟ್ಟಡದ ಸಮಯವಿದೆ. ಅದನ್ನಸಚಿವರು 16 ತಿಂಗಳಲ್ಲಿ ಮುಗಿಸಲು ಸೂಚಿಸಿದರು.

ಮೆಗ್ಗಾನ್ ಆಸಗಪತ್ರೆಯಲ್ಲಿ ಸಣ್ಣ ಸಂಗತಿ‌ಹೆಮ್ಮರವಾಗಿದೆ.ಸಾಮಾನ್ಯರಿಗೆ ತೊಂದರೆ ಆಗ್ತಾ ಇದೆ. ಮ್ಯಾನ್ ಪವರ್ ಏಜೆನ್ಸಿಯವರು ಮೆಗ್ಗಾನ್ ರನ್ ಮಾಡ್ತಾ‌ಇದ್ದಾರೆ. ವೇದಿಕೆ ಮೇಲಿರೊಲ್ಲ ಅವರು ಬೆಂಗಳೂರಿಂದ ನಡೆಸುತ್ತಿದ್ದಾರೆ. ಇದನ್ನ ಗಮನಿಸಬೇಕು ಎಂದು ವೇದಕೆ ಮೇಲೆ ಸಚಿವರ ಮುಂದೆ ಪ್ರಸಗತಾಪಿಸಿದರು

Related Articles

Leave a Reply

Your email address will not be published. Required fields are marked *

Back to top button