ಕ್ರೈಂ ನ್ಯೂಸ್

SSLC ಪರೀಕ್ಷೆ ಆರಂಭದ ದಿನವೇ ಬಾಲಕ ನೇಣಿಗೆ ಶರಣು

ಸುದ್ದಿಲೈವ್/ಸಾಗರ

ಪರೀಕ್ಷಾ ದಿನವೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಪರಶುರಾಮ್ ಬಾಬು (16) ಮೃತ ದುರ್ದೈವಿ ಆಗಿದ್ದಾನೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಯಡೇಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಆನಂದಪುರದ ಕೆಪಿಎಸ್ ಸಿ ಶಾಲೆಯಲ್ಲಿ ಬಾಬು ವ್ಯಾಸಂಗ ಮಾಡುತ್ತಿದ್ದನು.

ಚನ್ನಾಗಿ ಓದುತ್ತಿದ್ದ ವಿದ್ಯಾರ್ಥಿ ಪರೀಕ್ಷೆಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ಪರೀಕ್ಷಾ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಸಹ ವ್ಯಕ್ತವಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/11438

Related Articles

Leave a Reply

Your email address will not be published. Required fields are marked *

Back to top button