ಕ್ರೈಂ ನ್ಯೂಸ್

ಚಾಕು ಇರಿತಕ್ಕೆ ಸಂಬಂಧಿಸಿದಂತೆ ಎಸ್ಪಿ ಸ್ಪಷ್ಟನೆ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಂತ ನಗರದಲ್ಲಿ ಯುವಕನಿಗೆ ಚಾಕು ಇರಿದ ಘಟನೆಗೆ ಸಂಬಂಧಿಸಿದಂತೆ 9 ಜನರನ್ನ ಬಂಧಿಸಲಾಗಿದ್ದು ಇದು ಕೋಮುಗಳ ನಡುವಿನ ಸಂಘರ್ಷವಲ್ಲವೆಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿಯ ವೇಳೆಗೆ ಹನುಮಂತ ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಂದ ಕುಮಾರ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು. ಆದರೆ ಈ ಬಗ್ಗೆ ಕೋಮು ಬಣ್ಣ ಪಡೆಯಲಿರುವ ಸಾಧ್ಯತೆ ಇದೆ ಎಂದು ಸುದ್ದಿ ಮಾಡಲಾಗಿತ್ತು.

ಆದರೆ ಬೆಳಿಗ್ಗೆ ಎಸ್ಪಿ ಮಿಥುನ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಕೋಮು ಹಿನ್ನಲೆಯಲ್ಲಿ ಘಟನೆ ನಡೆದಿಲ್ಲ. ಬದಲಿಗೆ ನಂದ ಕುಮಾರ್ ಗೆ ಬೆನ್ನಿಗೆ ಆಯುಧದಿಂದ ಚಾಕು ಇರಿಯಲಾಗಿದೆ. ಸಣ್ಣ ಗಾಯವಾಗಿದೆ. ಮೊಬೈಲ್ ಅಡವಿಟ್ಟ ವಿಚಾರಕ್ಕೆ ಗಲಭೆ ನಡೆದಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/909

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373