ರಾಜಕೀಯ ಸುದ್ದಿಗಳು

ಮೋದಿ ಫೋಟೊ ಬಳಕೆ ಕುರಿತು ಸಂಸದರು ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಚುನಾವಣಾ ದಿನಾಂಕ‌ ಹತ್ತಿರ ಆಗ್ತಿದ್ದಾಗೆ ಚುನಾವಣೆ ಕಾವು ನಮ್ಮ ‌ಕ್ಷೇತ್ರದಲ್ಲಿ ಹೆಚ್ಚಾಗ್ತಿದೆ. ತನ್ನ ಸ್ವಂತ ಕೆಲಸ ಕಾರ್ಯ ಬಿಟ್ಟು ಮೋದಿ ಅವರ ಗೆಲುವಿಗಾಗಿ ಯುವಕರು ಕೆಲಸ ಮಾಡ್ತಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭೂತಪೂರ್ವವಾದ ವಾತಾವರಣ ಕ್ಷೇತ್ರದಲ್ಲಿ ‌ಕಾಣ್ತಿದೆ. ಇಂದು ಸೊರಬ ತಾಲೂಕಿನ ಜಡೆ, ಆನವಟ್ಟಿಯಲ್ಲಿ ಮಹಿಳಾ ಸಮಾವೇಶ ಆಯೋಜನೆಯಾಗಿದೆ ಎಂದರು.‌

ನಿನ್ನೆ ಕಾಗಿನೆಲೆ ನಿರಂಜನಾನಂದಪುರಿ‌ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಒಳ್ಳೆಯ ರೀತಿಯ ಆಶೀರ್ವಾದ ಪಡೆದಿದ್ದೇನೆ. ಅವರ ಆಶೀರ್ವಾದದಿಂದ ವಿಶ್ವಾಸ ಹೆಚ್ಚಾಗಿದೆ. ದಿನ ದಿನ ಪಕ್ಷದ ಪರವಾಗಿ ಶಕ್ತಿ ಹೆಚ್ಚಾಗ್ತಿದೆ ಎಂದರು

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಸಂಕಲ್ಪ ‌ಮಾಡಿದ್ದಾರೆ. ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಗೆ 1 ಲಕ್ಷಕ್ಕೂ ಅಧಿಕ ಮತ ಕೊಡಿಸುತ್ತೇವೆ ಎಂದು ಅಲ್ಲಿನ ಸ್ಥಳೀಯರು ಮಾತನಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದೆ ಯಾವುದಾದರೂ ಒಂದು ದಿನ ಕೊಲ್ಲೂರಿಗೆ ಭೇಟಿಯಾಗಬೇಕು ಎಂಬ ಪ್ರಾರ್ಥನೆ ಇದೆ ಎಂದರು.

ಈ ಸಂದೇಶ ಪ್ರಧಾನಮಂತ್ರಿ ಕಚೇರಿಗೆ ತಲುಪಿದೆ.‌ ಪ್ರಧಾನಮಂತ್ರಿ ಕಚೇರಿಯಿಂದ ಅಧಿಕೃತವಾಗಿ ನಮ್ಮ ಕಚೇರಿಗೆ ಪೋನ್ ಕರೆ ಬಂದಿದೆ.ಈ ಬಗ್ಗೆ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. ಇಂತಹ ವಿಷಯವನ್ನು ಪ್ರಧಾನಮಂತ್ರಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಆರ್ಟಿಕಲ್ 370 ರದ್ದಾದ ಪರಿಣಾಮ ಭದ್ರಾವತಿ ಬೂತ್ ಕಾರ್ಯಕರ್ತರು ಒಂದೊಂದು ಬೂತ್ ನಿಂದ 370 ಹಣ ಸಂಗ್ರಹ ಮಾಡಿ ಠೇವಣಿ ಹಣ ಕೊಟ್ಟಿದ್ದಾರೆ.ಒಳ್ಳೆಯ ರೀತಿಯ ಪ್ರಚಾರ ಆಗ್ತಿದೆ ಎಂದ ಸಂಸದರು, ಈಶ್ವರಪ್ಪ ಮೋದಿ ಪೋಟೋ ಬಳಕೆ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಾಗಿದೆ. ರಾಷ್ಟ್ರದಲ್ಲಿ ರಾಜ್ಯದಲ್ಲಿ ಈ ರೀತಿಯ‌ ಪ್ರಕ್ರಿಯೆ ಆಗ್ತಿದೆ ಎಂದರು.

ಮೋದಿ ಪೋಟೋ ನಮ್ಮ ಸಂವಿಧಾನದ ಚೌಕಟ್ಟಿನಲ್ಲಿರುವ ಅವಕಾಶ. ಚುನಾವಣಾ ಆಯೋಗದ ಮುಂದೆ ಪ್ರಶ್ನೆ ಮಾಡಿದ್ದಾರೆ ಏನಾಗ್ತದೆ ನೋಡೋಣ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲರನ್ನು ಜೈಲಿಗೆ ಹಾಕಿತ್ತು.‌ ಇದಕ್ಕೆಲ್ಲಾ ದೊಡ್ಡ ಇತಿಹಾಸ ಇದೆ ಎಂದು ತಿಳಿಸಿದರು.

ಇಂದು ನಮ್ಮ ಪಕ್ಷಕ್ಕೆ ದೇವೇಗೌಡರಂತಹ ದೊಡ್ಡ ನಾಯಕರ ಆಶೀರ್ವಾದ ಸಿಕ್ಕಿದೆ. ನಮ್ಮ ಸಂಘಟನೆಗೆ ಶಕ್ತಿ ಬಂದಿದೆ. ನಮ್ಮ ಯೋಚನೆ, ಅವರ ಯೋಚನೆ ಒಂದೇ ಇದೆ. ಈ ಬಾರಿ ಒಳ್ಳೆಯ ಆಶೀರ್ವಾದ ಸಿಗಲಿದೆ. 18 ರಂದು ನಾಮಪತ್ರ ಸಲ್ಲಿಸುತ್ತೇನೆ. ನಾಮಪತ್ರ ಸಲ್ಲಿಸುವ ವೇಳೆ ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ

ಇದನ್ನೂ ಓದಿ-https://suddilive.in/archives/12535

Related Articles

Leave a Reply

Your email address will not be published. Required fields are marked *

Back to top button