ಬಿಎಸ್ ವೈಗೆ ವಯಸ್ಸಾಯ್ತು ಅಂತ ಕೆಳಗೆ ಇಳಿಸುದ್ರಿ ಬರ ಅಧ್ಯಾಯನಕ್ಕೆ ಮತ್ತೆ ಅವರೇ ಬೇಕಾಯ್ತಾ-ಆಯನೂರು

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲ ತಾಂಡವಾಡುತ್ತಿದೆ. 220 ಕ್ಕೂ ಹೆಚ್ಚು ವಿಧಾನ ಸಭಾಕ್ಷೇತ್ರಗಳನ್ನಬರಗಾಲ ಎಂದು ಘೋಷಿಸಿದೆ. 33 ಸಾವಿರ ಕೋಟಿಗೂ ಅಧಿಕ ನಷ್ಠವಾಗಿದೆ. ಈಗ ಬಿಜೆಪಿ ಬರ ಅಧ್ಯಾಯನ ಸಮಿತಿ ರಚಿಸಿಕೊಂಡು ಜನರ ಬಳಿ ನಾಟಕವಾಡಲು ಹೊರಟಿದೆ ಎಂದು ಮಾಜಿ ಎಂಎಲ್ ಸಿ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿಯ ನಂತರ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರದ ಸಹಕಾರವಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಬರಬೇಕಿದೆ. 26 ಜನ ರಾಜ್ಯದ ಎಂಪಿಗಳಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಕಾಂಗ್ರೆಸ್ ಇರುವುದರಿಂದ ಹಣ ನೀಡದೆ ಸೇಡು ತೀರಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಹೆಚ್ಚಿನ ಎಂಪಿ ಪಡೆದ ಬಿಜೆಪಿ ರಾಜ್ಯದ ಜನರನ್ನ ನಡು ರಸ್ತೆಯಲ್ಲಿ ಕೈ ಬಿಡುತ್ತಿದ್ದಾರೆ. ಎಲ್ಲಾ ಸಂಸದರು ಮತ್ತು ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಬರಪರಿಹಾರದ ಹಣವನ್ನ ಹೆಚ್ಚಿಗೆ ಕೊಡುವಂತೆ ಮಾಡಬೇಕು. ಬಿಜೆಪಿ ಬರ ಪ್ರವಾಸ ಹೊರಟಿರುವುದು ವಿಡಂಭನಾತ್ಮಕವಾಗಿದೆ. ಬದಲಿಗೆ ಹೆಚ್ಚಿನ ಹಣ ತರಲಿ ಎಂದರು.
ಕೇಂದ್ರದ ತಂಡ ಅಧ್ಯಾಯನ ಮಾಡಿದೆ. ಅಂಕಿ ಅಂಶ ಸಂಗ್ರಹಿಸಿದೆ. ಅಧ್ಯಾಯನ ಮಾಡಿದ ವರದಿಯನ್ನ ಬೇಗ ಜಾರಿ ಮಾಡಿ ಎಂದು ಬಿಜೆಪಿ ಒತ್ತಾಯಿಸುವ ಬದಲು ಅಧ್ಯಾಯ ನಡೆಸಿರುವುದು ಎಷ್ಟು ಸರಿ. ಬರದ ನಡುವೆಯೂ ರಾಜಕಾರಣ ಸರಿಯಲ್ಲ. ಕೇಂದ್ರ ಅಧ್ಯಾಯನ ನಡೆಸಿದ ಮೇಲೆ ಬಿಜೆಪಿ ಅಧ್ಯಾನ ನಡೆಸುವುದು ಸರಿಯಿಲ್ಲ ಎಂದು ದೂರಿದರು.
ಎಂಪಿಯವರು ಬರ ಅಧ್ಯಾಯನ ಸಮಿತಿಯಲ್ಲಿದ್ದಾರೆ. ಕೂಡಲೇ ದೆಹಲಿಗೆ ತೆರಳಿ ಜಿಲ್ಲೆಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಲಿ. ಕಾಳಜಿಯಿಂದ ಬಿಜೆಪಿ ಅಧ್ಯಾಯನ ಮಾಡುತ್ತಿಲ್ಲ. ಅಲ್ಲಿ ಇರಬೇಕಾದ ನಾಯಕರು ಪ್ರವಾಸ ಕೈಗೊಂಡಿಲ್ಲ. ಬೇಜವಬ್ದಾರಿಯ ಅಧ್ಯಾಯನ ಸಮಿತಿಯಾಗಿದೆ ವಿಧಾನ ಸಭೆ ಚುನಾವಣೆಯಲ್ಲಿ ಕಲಿತ ಪಾಠವನ್ನ ಅರಿತು ಕೇಂದ್ರದಿಂದ ಹಣ ತರಬೇಕು ಎಂದರು.
ಬಿಎಸ್ ವೈಗೆ ವಯಸ್ಸಾಯ್ತು ಅಂತ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಈಗ ಅಧ್ಯಾಯನಕ್ಕೆ ಬೇಕಾದ್ರು
ಬಿಎಸ್ ವೈನ ವಯಸ್ಸಿನ ಕಾರಣ ನೀಡಿ ಸಿಎಂ ಸ್ಥಾನದಿಂದ ಕೆಳಗಿಸಿದ ಬಿಜೆಪಿ ಈಗ ಬರ ಅಧ್ಯಾಯನಕ್ಕೆ ಕಳುಹಿಸುತ್ತಿದೆ. ಮಕ್ಕಳು ಸಹಕೇಳ್ತಾ ಇಲ್ಲ? ಬಿಜೆಪಿಗೆ ಬಿಎಸ್ ವೈ ಅನಿವಾರ್ಯ ಎಂಬುದು ಸಾಭೀತಾಗಿದೆ. ನಿಷ್ಕರಣಿಯ ವರ್ತನೆ ಬೇಡ. ಪಕ್ಷಕ್ಕೆ ನಾಯಕತ್ವದ ಬರ ಬಂದಿದೆ. ಜನ ತಿರಸ್ಕಾರದಿಂದ ಅಸ್ಥಿತ್ವಕ್ಕೆ ಬರ ಬಂದಿದೆ. ಬಜೆಟ್ ಅಧಿವೇಶನವನ್ನ ತಿರಸ್ಕರಿಸಿದ ಈ ಬರ ಅಧ್ಯಾಯನದ ತಂಡ ಜನರ ಬದಕನ್ನ ರೂಪಿಸುವ ಸಂದರ್ಭದಲ್ಲಿ ಮಾತನಾಡದೆ ಈಗ ಬರ ಅಧ್ಯಾಯನ ಎಂದು ಹೊರಟಿದೆ ಎಂದರು.
ರಾಜಕಾರಣ ಬೇಡ
ವಿಪಕ್ಷ ನಾಯಕ ಸ್ಥಾನ ಇಲ್ಲ. ಕ್ಷುಲ್ಲಕ ರಾಜಕಾರಣ ಮಾಡಲು ಹೊರಟ ಬಿಜೆಪಿ ಬರ ಅಧ್ಯಾಯನ ತಂಡ ಜಲಜೀವನ್ ಯೋಜನೆ ಅಡಿ ಶುದ್ಧ ಕುಡಿಯುವ ನೀರಿ ಘಟಕ ಆರಂಭಿಸಿದ್ದೀರಿ. ಫೆಬ್ರವರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಲಿದೆ. ಈ ಹಿಂದೆ ಗ್ರಾಮೀಣ ಅಭಿವೃದ್ಧಿ ಸಚಿವರು ಯೋಜನೆಯ ಭ್ರಷ್ಠಾಚಾರ ಕೇಳಿ ಬಂದಿತ್ತು. ಏನು ಮಾಡಿದ್ದೀರಿ. ಎಂಪಿ ಏನು ಮಾಡಿದ್ರಿ. ನಾಯಕತ್ವದ ಬರಕ್ಕಾಗಿ ಜನರ ಬಳಿ ನಾಟಕವಾಡವೇಡಿ ಎಂದರು.
ಸೈರನ್ ಹಾಕೊಂಡು ಓಡಾಡಿದ್ರೆ ಆಗೊಲ್ಲ
ಗ್ರಾಮೀಣಾಭಿವೃದ್ಧಿ ಸಚಿವರು 25% ಜಲಜೀವನ್ ಮಿಷನ್ ಅನುಷ್ಠಾನವಾಗಲಿಲ್ಲ. ಅವರು ಕೇವಲ ಸೈರನ್ ಮಾಡಿಕೊಂಡು ಓಡಾಡಿದರು. ಅಧಿಕಾರಿಗಳು ಹೆದರಲೇ ಇಲ್ಲ. ಹಿಂದಿನ ಸರ್ಕಾರದ ಭ್ರಷ್ಠಾಚಾರ ತನಿಖೆ ಆಗಬೇಕು ಎಂದ ಆಯನೂರು ಬರದ ವಿಷಯದಲ್ಲಿ ರಾಜ್ಯದಲ್ಲಿ 33,700 ಕೋಟಿ ಹಣ ನಷ್ಟವಾಗಿದೆ. 18 ಸಾವಿರ ಕೋಟಿ ಹಣ ರಾಜ್ಯ ಕೇಂದ್ರಕ್ಕೆ ಕೇಳಿದೆ. 6 ತಿಂಗಳಿಂದ ನಮ್ಮ ಸರ್ಕಾರವಿದೆ. ಯಾವ ಹಣ ಬಂದಿಲ್ಲವೆಂದರು.
ಇದನ್ನೂ ಓದಿ-https://suddilive.in/archives/2756
