27 ರ ಹದಿಹರೆಯದ ನೇತ್ರಾವತಿಗೆ ಇದು ಐದನೇ ಮರಿ

ಸುದ್ದಿಲೈವ್/ಶಿವಮೊಗ್ಗ

ದಸರಾಕ್ಕೆ ಬಂದ ಆನೆಯೊಂದು ಮರಿ ಹಾಕಿದೆ. ದಸರಾ ಹಬ್ಬದ ಆಯುಧ ಪೂಜೆಯ ದಿನದಂದೇ ರಾತ್ರಿ 10 ಗಂಟೆಗೆ ಅಂಬಾರಿ ಹೋರಲು ಬಂದ ನೇತ್ರಾವತಿ ಹೆಣ್ಣುಮರಿಗೆ ಜನ್ಮ ನೀಡಿದೆ.
ಗರ್ಭಧರಿಸಿ 24 ತಿಂಗಳಿಗೆ ಆನೆಗಳಿಗೆ ಹೆರಿಗೆ ಆಗೋದು ಎಂದು ಹೇಳಲಾಗುತ್ತದೆ ಆದರು, ಹೆರಿಗೆಯಾಗಲು ಕನಿಷ್ಠ 18 ತಿಂಗಳು ಹಿಡಿಯಲಿದೆ ಎಂಬುದು ವೈದ್ಯಲೋಕದ ಮಾತಾಗಿದೆ. ನೇತ್ರಾವತಿಗೆ 19 ತಿಂಗಳು ತುಂಬಿದ ಹಿನ್ನಲೆಯಲ್ಲಿ ಹೆರಿಗೆಯಾಗಿದೆ. ಈ ದಿಡೀರ್ ಹೆರಿಗೆಯ ಬಗ್ಗೆ ಚರ್ಚೆಯಾಗುತ್ತಿದೆ ಆದರೂ ತಾಯಿ ಮತ್ತು ಮರಿ ಎರಡೂ ಆರೋಗ್ಯದಿಂದ ಇವೆ.
ದಸರಾ ಹಬ್ಬದ ಮೆರವಣಿಗೆಯಲ್ಲಿ ಭಾಗಿಯಾಗಲು ಸಕ್ರೆಬೈಲಿನಿಂದ ಮಹಾನಗರ ಪಾಲಿಕೆಯ ವತಿಯಿಂದ ಮೂರು ಆನೆಗಳನ್ನ ಪ್ರತಿ ವರ್ಷದಂತೆ ಈ ಬಾರಿಯೂ ಆಹ್ವಾನಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಭಾಗಿಯಾಗಲು ಸಾಗರ, ನೇತ್ರಾವತಿ ಹಾಗೂ ಹೇಮಾವತಿ ಆನೆಯನ್ನ ಕರೆತರಲಾಗಿತ್ತು.
ನಿನ್ನೆ ಸಂಜೆ ಮೆರವಣಿಗೆಯ ತಾಲೀಮು ನಡೆಸಲಾಗಿತ್ತು. ಆದರೆ ವಾಸವಿ ಶಾಲೆಯಲ್ಲಿ ಬಿಡಾರ ಬಿಟ್ಟಿರುವ ಮೂರು ಆನೆಗಳನ್ನ ತಾಲೀಮು ಮುಗಿಸಿ ವಾಪಾಸ್ ತರಲಾಗಿದೆ. ರಾತ್ರಿ 10 ಗಂಟೆಗೆ ನೇತ್ರಾವತಿ ಎಂಬ ಹೆಸರಿನ ಆನೆಗೆ ಹೆರಿಗೆಯಾಗಿದ್ದುವಹೆಣ್ಣು ಮರಿಗೆ ಜನ್ಮ ನೀಡಿದೆ. ದಸರಾ ಹಬ್ಬದ ಆಯುಧ ಪೂಜೆಯ ದಿನ ಹುಟ್ಟಿದ ಈ ಹೆಣ್ಣು ಮರಿಗೆ ಚಾಮುಂಡಿ ಎಂದು ಹೆಸರಿಡುವ ಸಾಧ್ಯತೆ ಇದೆ.
ಈ ಆನೆಯ ಆಗಮನದಿಂದ ಸಕ್ರಬೈಲಿನಲ್ಲಿ ಆನೆಗಳ ಸಂಖ್ಯೆ 21 ಕ್ಕೆ ಏರಿವೆ. ಈ ಹಿಂದೆ ಅಂದರೆ ಆರೆಂಟು ತಿಂಗಳ ಹಿಂದೆ ಆನೆಗಳ ಸಂಖ್ಯೆ 18 ಕ್ಕೆ ಕುಸಿದಿತ್ತು. ಎರಡು ಆನೆಗಳನ್ನ ಬೇರೆ ರಾಜ್ಯಕ್ಕೆ ಬಿಟ್ಟು ಬರಲಾಗಿತ್ತು. ಒಂದು ಆನೆ ಸಾವನ್ನಪ್ಪಿತ್ತು. ಈಗ ಆನೆಗಳ ಸಂಖ್ಯೆ 21 ಕ್ಕೆ ಏರಿದೆ.
21 ರಲ್ಲಿ ಐದು ಹೆಣ್ಣು 16 ಗಂಡು ಆನೆಗಳು ಇವೆ. ಹೆಣ್ಣಾನೆಗೆ ಸಕ್ರಬೈಲು ಕಾಯ್ತಾ ಇತ್ತು. ಈ ಹೆಣ್ಣಾನೆಯ ಆಗಮನದಿಂದ ಈ ಕೊರತೆ ನೀಗಿದೆ. ಮರಿ ಮತ್ತು ತಾಯಿ ಎರಡೂ ಆರೋಗ್ಯವಾಗಿದ್ದು ಬೆಳಿಗ್ಗೆ ವಾಸವಿ ಶಾಲೆಯಿಂದ ಸಕ್ರೆಬೈಲಿಗೆ ರವಾನಿಸಲಾಗಿದೆ. ಪುನೀತ್ ರಾಜ್ ಕುಮಾರ್ ಎಂಬ ಆನೆಗೆ ಇದೇ ನೇತ್ರಾವತಿ ಜನ್ಮ ನೀಡಿತ್ತು. ಪುನೀತ್ ರಾಜ್ ಕುಮಾರ್ ನಾಲ್ಕನೇ ಮರಿಯಾದರೆ ಇದು ಐದನೇ ಮರಿಯಾಗಿದೆ. ಸಾಗರ ಮತ್ತು ಹೇಮಾವತಿ ಎರಡೇ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ-https://suddilive.in/archives/1707
