ಬರ ವಿಚಾರದಲ್ಲಿ ಶಾಸಕ ಚೆನ್ನಬಸಪ್ಪ ಮತ್ತು ಸಚಿವರ ನಡುವೆ ಮಾತಿನ ಚಕಮಕಿ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಪಂಚಾಯತ್ ನಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಬರ ಸಂಬಂಧ ಶಾಸಕ ಚೆನ್ನಬಸಪ್ಪ ಮತ್ತು ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ.
ಸಭೆಯಲ್ಲಿ ಅಧಿಕಾರಿ ಜಿಲ್ಲೆಯಲ್ಲಿ ಮಳೆ ಕೊರತೆ ಕುರಿತು ಮಾಹಿತಿ ನೀಡುವಾಗ ಶಾಸಕ ಚೆನ್ನಬಸಪ್ಪ ಮಧ್ಯಪ್ರವೇಶಿಸಿ ಜಿಲ್ಲೆಯಲ್ಲಿ ಬರವಿದೆ ಎಂದು ಘೋಷಣೆ ಆಗಿದೆ. ಈಘೋಷಣೆ ಆಗಿ ತಿಂಗಳು ಕಳೆದರೂ ಇದುವರೆಗೂ ಹಣಬಿಡುಗಡೆಯಾಗಿಲ್ಲ ಯಾಕೆ ಸರ್ಕಾರದ ಬಳಿ ಹಣವಿಲ್ಲವಾ ಎಂದು ಮುಗಿಬಿದ್ದರು.
ಇದಕ್ಕೆಶಾಸಕ ಡಿ.ಎಸ್.ಅರುಣ್ ಸಹ ಸಾಥ್ ನೀಡಿದರು. ಒಂದು ಹಂತದಲ್ಲಿ ಸಚಿವರು ಮಾಹಿತಿ ಇಲ್ಲದೆ ಮಾತನಾಡಬೇಕು ಎಂದಾಕ್ಷಣ ಶಾಸಕ ಚೆನ್ನಬಸಪ್ಪ ಮಾಹಿತಿ ಇಲ್ಲವೆಂಬುದು ಅವಹೇಳನ ಮಾಡಿದಂತೆ ನೀವು ಅಧಿಕಾರಿಗಳ ಮಾಹಿತಿ ಪಡೆಯುತ್ತೀರ. ಆದರೆ ಫೀಲ್ಡ್ ನಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಇದೆ. ರೂತರ ಆತ್ಮಹತ್ಯೆ 23 ಕ್ಕೆ ಏರಿದೆ ಎಂದರು.
ಅದಕ್ಕೆ ಮುಜುಗರಕ್ಕೊಳಗಾದ ಸಚಿವರು ನಂತರ ನ.15 ರ ನಂತರ ಮಾಹಿತಿ ಕಳುಹಿಸಿಕೊಡಲು ಸಿಎಂ ಸೂಚಿಸಿದ್ದಾರೆ. ಹಣವೂ ಬಿಡುಗಡೆ ಆಗಲಿದೆ ಎಂದರು. ನಂತರ ಸಭೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಮೇ ಜೂನ್ ತಿಂಗಳಲ್ಲಿ ಮಳೆಯಾದಾಗ ಮನೆಗೆ ಪರಿಹಾರ ನೀಡಿಲ್ಲವೆಂದು ಶಾಸಕಿ ಶಾರದಾಪೂರ್ಯನಾಯ್ಕ್ ತಿಳಿಸಿದರು.
ಈ ಬಾರಿ ಸರ್ಕಾರ ಅರಣ್ಯಗಳಲ್ಲಿ ಮತ್ತು ‘ಬಿ’ಖಾತ ಮನೆಗಳಿಗೆ ಸರ್ಕಾರ ಈ ಬಾರಿ ಹಣ ಬಿಡುಗಡೆ ಮಾಡಿಲ್ಲವೆಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಶಾಸಕ ಚೆನ್ನಬಸಪ್ಪ ಗ್ಯಾರೆಂಟಿಗಾಗಿ ಸರ್ಕಾರದ ಬಳಿ ಹಣವಿಲ್ಲವೆಂದು ಸಾಬೀತಾಗುತ್ತಿದೆ ಎಂದರು.ಸಚಿವರು ಹಾಗೆ ಹೇಳಿ ಹಣ ಬರದಿರುವ ಹಾಗೆ ಮಾಡಬೇಡಿ ಎಂದು ಹಾಸ್ಯವಾಗಿ ಹೇಳಿದರು.
ಗೈರು ಹಾಜರಿ
ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಕೆಂಡ ಕಾರಿರುವ ಶಾಸಕ ಗೋಪಾಲಕೃಷ್ಣ ಬೇಳೂರು, ಭದ್ರಾವತಿ ಶಾಸಕ ಸಂಗಮೇಶ್ವರ್, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಶಿಕಾರಿಪುರ ಶಾಸಕ ವಿಜೇಂದ್ರ ಗೈರು ಹಾಜರಿದ್ದರು.
ಇದನ್ನೂ ಓದಿ-https://suddilive.in/archives/2717
