ಪತ್ತೆಯಾದ ಬಿಳಿ ಬಣ್ಣದ ಪೌಡರ್ ಸ್ಪೋಟಕ ವಸ್ತು ಅಲ್ಲವೆಂದ್ರು ಎಸ್ಪಿ-ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ ಅಂತೂ ಅಲ್ಲವೆಂದ್ರು ಶಾಸಕರು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಎರಡು ಅನುಮಾನ್ಪದ ಪೆಟ್ಟಿಗೆಗಳನ್ನ ಸ್ಪೋಟಿಸಿ ಪರಿಶೀಲಿಸಿದಾಗ ಕಂಡು ಬಂದ ಎರಡು ಬಿಳಿಯ ಪೌಡರ್ ಬ್ಯಾಗ್ ಗಳ ಬಗ್ಗೆ ಶಾಸಕರು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪತ್ತೆಯಾದ ಬಿಳಿ ಪೌಡರ್ ನ ಬ್ಯಾಗ್ ಗಳು ಸ್ಪೋಟಕ ವಸ್ತು ಅಲ್ಲ ಎಂದು ಎಸ್ಪಿ ಹೇಳಿದರೆ ಶಾಸಕ ಚೆನ್ನಬಸಪ್ಪ ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ ಅಂತೂ ಪತ್ತೆಯಾಗಿಲ್ಲ. ಅನುಮಾನವಿದೆ. ಎಫ್ ಎಸ್ ಎಲ್ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ ಎಂದು ನೇರವಾಗಿ ಮಾಹಿತಿ ನೀಡಿದ್ದಾರೆ.
ಶಾಸಕ ಚೆನ್ನ ಬಸಪ್ಪ ಆಪರೇಷನ್ ಆರಂಭಕ್ಕೂ ಮುನ್ನಾ ಸ್ಥಳದಲ್ಲಿಯೇ ಇದ್ದು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಆಪರೇಷನ್ ಅಂತ್ಯದ ವರೆಗೂ ಮಾಹಿತಿ ಪಡೆಯುತ್ತಿದ್ದರು. ಎರಡು ಪೆಟ್ಟಿಗೆಗಳನ್ನ ಸ್ಪೋಟಿಸಿದ ನಂತರ ಮತ್ತೆ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುತ್ತಿದ್ದ ಶಾಸಕ ಚೆನ್ನಬಸಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಶಿವಮೊಗ್ಗ ಸೇಫ್ ಎಂದಿದ್ದು ಆತಂಕವನ್ನೂ ನಿವಾರಣೆ ಮಾಡಿದೆ.
ಆದರೆ ಈ ಬಗ್ಗೆ ತನಿಖೆ ಆರಂಭವಾಗ ಬೇಕಿದೆ. ಈ ಪೌಡರ್ ಏನೂ ಎಂದು ವರದಿ ಬರಬೇಕಿದೆ. ಅಷ್ಟರಲ್ಲೇ ಎಸ್ಪಿಯವರ ಈ ಹೇಳಿಕೆ ಕೊಂಚ ಆತುರವೆನಿಸಿದೆ. ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಎರಡು ಬಾಕ್ಸ್ ಪತ್ತೆ ಪ್ರಕರಣ ಕುರಿತು ಶಾಸಕ ಚೆನ್ನಬಸಪ್ಪ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದು ಇಷ್ಟು,
ವೈಟ್ ಪೌಡರ್ ಏನುಕ್ಕೆ ಬಳಸುತ್ತಾರೆ ಎಲ್ಲಿರಿಗೂ ಗೊತ್ತು?
ಬಾಂಬ್ ಸ್ಕ್ವಾಡ್ ಬಂದಿದೆ. ಬಾಂಬ್ ಸ್ಕ್ವಾಡ್ ಬಂದ ನಂತರ ಏನಿದೆ ಅಂತಾ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ರು. ಬೀಗ ಹೊಡೆಯಲು ಸ್ಫೋಟ ಮಾಡಿದ್ರು.ಎರಡು ಹೊಸ ಟ್ರಂಕ್ ಪತ್ತೆಯಾಗಿದೆ. ಒಂದೊಂದು ಟ್ರಂಕ್ ನಲ್ಲಿ ಎರಡೆರಡು ಬ್ಯಾಗ್ ಗಳಿವೆ. ಪೇಪರ್ ಹಾಕಿ ಕವರ್ ಮಾಡಿದ್ದಾರೆ. ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ವೈಟ್ ಪೌಡರ್ ಏನಕ್ಕೆ ಉಪಯೋಗಿಸುತ್ತಾರೆ ಅಂತಾ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ
ದೇವರು ದೊಡ್ಡವನು ಈ ಹಂತದಲ್ಲಿ ತಡೆ ಹಿಡಿಯುವ ಪ್ರಯತ್ನ ಆಗಿದೆ. ಇದು ಯಾವ ಪೌಡರ್ ಎಂಬ ಬಗ್ಗೆ ರಿಪೋರ್ಟ್ ಬರಬೇಕು. ಇದು ಗಂಭೀರವಾದ ಸಂಗತಿ. ಬಹಳ ಭಾರ ಇದೆ. ಒಂದೊಂದು ಬ್ಯಾಗ್ ಬಹಳ ಭಾರ ಇದೆಬಹಳ ಎಚ್ಚರಿಕೆ ವಹಿಸಬೇಕು. ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ. ರಾಜ್ಯ ಸರಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕು.ಈಗಾಗಲೇ ಸಂಬಂಧಿಸಿದಂತೆ ಇಬ್ಬರು ಸಿಕ್ಕಿದ್ದಾರೆ ಎಂದರು.
ಸಿಕ್ಕಿಬಿದ್ದವರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸತ್ಯ ಸಂಗತಿ ಹೊರ ಬರಲಿ. ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಇದನ್ನು ಮುಚ್ಚಿ ಹಾಕುವ ಪ್ರಯತ್ನ ಆಗಬಾರದು. ಒಟ್ಟಿನಲ್ಲಿ ಶಿವಮೊಗ್ಗ ಸೇಫ್ ಎಂದಿದ್ದಾರೆ.
ಇದನ್ನೂ ಓದಿ-https://suddilive.in/archives/2549
