ಕ್ರೈಂ ನ್ಯೂಸ್

ಕೊಲೆಯಾದ ರಫೀಕ್ ಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದನಾ?

ಸುದ್ದಿಲೈವ್/ಸಾಗರ

ತಾಲೂಕಿನ ಚಿಪ್ಪಲಿ ಗ್ರಾಮದ ರಾಜ್ಯ ಹೆದ್ದಾರಿ 69 ರಲ್ಲಿ ಪತ್ತೆಯಾದ ಅಪರಿಚತ ಶವ ಪ್ರಕರಣ ಎಫ್ಐಆರ್ ಆಗಿದ್ದು. ಈ ಪ್ರಕರಣ ಕೊಲೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದ್ದು  ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

ಒಂದು ವೇಳೆ ಸೂಕ್ತ ಸಮಯದಲ್ಲಿ ಆತನನ್ನ ಆಸ್ಪತ್ರೆಗೆ ಸಾಗಿಸಲು ವಾಹನಗಳಾಗಲಿ ಅಥವಾ ಅಂಬ್ಯುಲೆನ್ಸ್ ಸಿಕ್ಕಿದ್ದರೆ ಬದುಕಿಬಿಡ್ತಿದ್ನಾ ಎಂಬ ಅನುಮಾನಕ್ಕೆ ಈ ಎಫ್ಐಆರ್ ಸಹ ಸಾಕ್ಷಿಯಾಗಿದೆ.

ಕೊಲೆಯಾದ ವ್ಯಕ್ತಿಯ ಸಂಬಂಧಿಕರ ಹೆಸರನಲ್ಲಿ ಎಫ್ಐ ಆರ್ ದಾಖಲಾಗಿಲ್ಲ. ಬದಲಾಗಿ ಪ್ರತ್ಯಕ್ಷ ದರ್ಶಿಯಿಂದ ದೂರು ದಾಖಲಿಸಲಾಗಿದೆ. ಮಾರುತಿ ಸುಜೂಕಿ ಬ್ರೀಜಾ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು 35 ವರ್ಷದ ವ್ಯಕ್ತಿಯೋರ್ವನನ್ನ ನೆಲಕ್ಕೆ ಕೆಡವಿಕೊಂಡು ಕೊಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಳಗೆ ಬಿದ್ದಿದ್ದ 35 ವರ್ಷದ ವ್ಯಕ್ತಿಯ ಕುತ್ತಿಗೆಯನ್ನ ತಂತಿಯಲ್ಲಿ ಬಿಗಿದು ಇಟ್ಟು ಕೊಂಡು ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಕುತ್ತಿಗೆಯ ಬಳಿ ಹಿಡಿದ ತಂತಿ ಬಹುಶಲ ಬ್ರೇಕ್ ಕೇಬಲ್ ಇರಬಹುದು ಎಂದು ಶಂಕಿಸಲಾಗಿದ್ದು, ಅದರಿಂದಲೇ ಬಿಗಿಯಲಾಗಿದೆ. ಬಿಗಿದು ಎಳೆದುಕೊಂಡು ಆತನನ್ನ ಕೊಲೆ ಮಾಡಲಾಗಿದೆ ಎಂದು ದೂರಲಾಗಿದೆ.

ಪ್ರತ್ಯಕ್ಷ ದರ್ಶಿಗಳು ಗಲಾಟೆ ಬಿಡಿಸಲು ಹೋಗುವಾಗ ಇಬ್ಬರು ವ್ಯಕ್ತಿಗಳು ಬ್ರೀಜಾ ಹತ್ತಿಕೊಂಡು ಹೋಗಿದ್ದಾರೆ. ಹೋಗುವಾಗ ಬ್ರೀಜಾ ಕಾರು ನೆಲಕ್ಕೆ ಬಿದ್ದಿದ್ದವನ ತಲೆಯ ಮೇಲೆ ಹರಿಸಲಾಗಿದೆ. ಹತ್ತಿರಕ್ಕೆ ಹೋಗಿ ನೋಡಿದಾಗ ವ್ಯಕ್ತಿಯ ತಲೆ ಬುರುಡೆಯಿಂದ ರಕ್ತ ಹರಿದುಹೋಗಿತ್ತು. ಯಾರ ವಾಹನವೂ ಸಿಗದ ಕಾರಣ ಆತನನ್ನ ಆಸ್ಪತ್ರೆಗೆ ಸಾಗಿಲು ಸಾಧ್ಯವಾಗಿಲ್ಲ. ಈ ವೇಳೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಪೊಲೀಸರು ಬರುವಷ್ಟರಲ್ಲೇ ವ್ಯಕ್ತಿ ಸಾವನ್ನಪ್ಪಿದ್ದನು.

ಕೊಲೆಯಾದ ವ್ಯಕ್ತಿಯನ್ನ ಆನವಟ್ಟಿಯ ರಫೀಕ್ ಎಂದು ಗುರುತಿಸಲಾಗಿದೆ. ಆಸ್ತಿಯ ವಿಚಾರದಲ್ಲಿ ಅವರ ಸಹೋದರರೇ ಕೊಲೆ ಮಾಡಿರುವುದಾಗಿ ಮೃತ ರಫೀಕ್ ನ ತಂದೆ ಆರೋಪಿಸಿದ್ದಾರೆ. ಆನವಟ್ಟಿಯಿಂದ ಸಾಗರಕ್ಕೆ ಹೋಗಿ ಕೆಲವಸ್ತುಗಳನ್ನ ಖರೀದಿ ಮಾಡೋಣ ಎಂದು ರಫೀಕ್ ನನ್ನ ಕರೆತರಲಾಗಿತ್ತು ಎಂಬ ಸತ್ಯವನ್ನ ಅವರ ತಂದೆ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9894

Related Articles

Leave a Reply

Your email address will not be published. Required fields are marked *

Back to top button