ಕ್ರೈಂ ನ್ಯೂಸ್

ಪೊಲೀಸರ ಮೇಲೆ ಹಲ್ಲೆ-ಓರ್ವ ಅರೆಸ್ಟ್, ಮತ್ತೋರ್ವ ಎಸ್ಕೇಪ್!

ಸುದ್ದಿಲೈವ್/ಶಿವಮೊಗ್ಗ

ಮೂರು ದಿನಗಳ ಹಿಂದೆ ಆನಂದಪುರ ಪುಂಡರಿಂದ ಪೋಲೀಸರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಇಬ್ಬರನ್ನ ಬಂಧಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಓರ್ವನನ್ನ ಬಂಧಿಸಲಾಗಿದೆ. ಮತ್ತೋರ್ವನ ಪತ್ತೆಗೆ ಹುಡುಕಾಟ ಆರಂಭವಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ  ಗೌತಮಪುರ ಮಾರಿಕಾಂಬಾ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಅಂಗಡಿ ಮುಂಗಟ್ಟುಗಳ ಮೇಲೆ ಗಲಾಟೆ ಮಾಡುತ್ತಿರುವುದನ್ನು ತಿಳಿದ ಪೊಲೀಸರು ಗಲಾಟೆ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದರು

ಗಲಾಟೆ ಮಾಡುತಿದ್ದ ಪುಂಡರಾದ ಗೌತಮ್ ಕೋಡ್ಕಣಿ ಮತ್ತು ಭರತ್ ಪೂರಿ ಎಂಬ ಯುವಕರಿಂದ ಹಲ್ಲೆ ನಡೆದಿತ್ತು. ಪೊಲೀಸರಿಗೆ ಅವಚ್ಯಾ ಪದಗಳಿಂದ ನಿಂದಿಸಿದಲ್ಲದೆ ಏಕಾಏಕಿ ಪೋಲೀಸರ ಮೇಲೆ ಹಲ್ಲೆ.ನಡೆಸಲಾಗಿದೆ.

ಈ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಸ್ಥಳೀಯ ಮಾಹಿತಿ ಪ್ರಕಾರ ಒಬ್ವರನ್ನ ಬಂಧಿಸಲಾಗಿದೆ. ಭರತ್ ಪೂರಿ ಎಂಬುವನನ್ನ ಬಂಧಿಸಲಾಗಿದೆ. ಗೌತಮ್ ಎಂಬುವನು ತಲೆಮರೆಸಿಕೊಂಡಿದ್ದಾನೆ.

ಪೊಲೀಸರನ್ನೇ ಎಳೆದಾಡುವ ಹಲ್ಲೆ ನಡೆಸುವ ಧಿಮಾಕು ಮತ್ತು ಕೊಬ್ಬು ಪುಡಿರೌಡಿಗಳಿಗೆ ಎಲ್ಲಿಂದ ಬರ್ತಾವೆ?

ಪೊಲೀಸರೆಂದರೆ ನಡಗಬೇಕಿದ್ದ ಪುಡಿರೌಡಿಗಳು ಅವರನ್ನ ಎಳೆದಾಡಿ, ಹಲ್ಲೆ ನಡೆಸುತ್ತಾರೆ ಎಂದರೆ ಇವರಿಗೆ ಇರಬೇಕಾದ ಕೊಬ್ಬುಗಳ ಬಗ್ಗೆ ಚರ್ಚೆ ಆಗಬೇಕು. ಸಾಮಾನ್ಯನಿಗೆ ಇಲ್ಲದ ಧೈರ್ಯಗಳು ಸಾರ್ವಜನಿಕ ಕ್ಷೇತ್ರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡುವಷ್ಟು ಧೈರ್ಯ ಈ ಪುಡಿರೌಡಿಗಳಿಗೆ ಎಲ್ಲಿಂದ ಬರ್ತಾವೆ?

ಬಹುತೇಕ ಪುಡಿರೌಡಿಗಳಿಗೆ ಕುಮ್ಮಕ್ಕು ಸಿಗುವುದೇ ರಾಜಕಾರಣಿಗಳಿಂದ, ಸ್ಥಳೀಯ ಶಾಸಕರಿಂದ, ಅವರ ಚೇಲಾಗಳಿಂದ ಈ ಧಿಮಾಕು ಕೊಬ್ಬುಗಳು ಕಂಡುಬರುತ್ತವೆ. ಜೊತೆಗೆ ಪೊಲೀಸರು ಹಾಕಿಸಿಕೊಂಡು ಬರುವ ಮಿನಿಟ್ ಗಳಿಂದಲೂ ಈ ಪುಡಿರೌಡಿಗಳು ತಲೆ ಎತ್ತುತ್ತವೆ.ಶಿವಮೊಗ್ಗ ಸೇರಿದಂತೆ ಬಹುತೇಕ ಪಿಐ, ಎಸ್ ಐಗಳು, ಎಎಸ್ಐ, ಪಿಸಿಗಳು ಮಿನಿಟ್ ಮೇಲೆ ಇರುವುದರಿಂದ ಇಂತಹ ರೌಡಿಗಳನ್ನ ಸದೆ ಬಡೆಯುವುದು ಕಷ್ಟನೇ. ಇದರಿಂದ ಜನರಿಗೆ ಪೊಲೀಸ್ ಇಲಾಖೆಯ ಮೇಲೂ ಗೌರವ ಕಡಿಮೆಯಾಗಿವೆ. ರಾಜಕೀಯದ ಇಂತಹ ವ್ಯವಸ್ಥೆಯಲ್ಲಿರುವ ನಮಗೆ ದೇವರೇ ಕಾಪಾಡುವಂತಾಗಿದೆ.

ಘಟನೆ ನಡೆದು ಮೂರು ದಿನ ಕಳೆದಿದೆ. ಗೌತಮ್ ಕೊಡಕಣಿ ಎಸ್ಕೇಪ್ ಆಗಿದ್ದಾನೆ. ಪೊಲೀಸರಿಂದ  ಹುಡುಕಾಟ ನಡೆಯುತ್ತಿದೆ. ಪಿಸಿಯ ಮೇಲೆ ಹಲ್ಲೆ ಮಾಡಿದವನ ಹುಡುಕಾಟವೇ ಇಷ್ಟು ದಿನ ಆದರೆ ಇನ್ನೂ ಶ್ರೀಸಾಮಾನ್ಯನ ಕಥೆ‌ ಏನು? ಇನ್ನೂ ಹಲ್ಲೆ ನಡೆಸಿದವನು ರಾಜಕಾರಣಿಗಳ ಕೃಪಕಟಾಕ್ಷವನ್ನ ಪ್ರಾಪ್ತಿ ಮಾಡಿಕೊಂಡರೆ ಈ ಬಂಧನ ಮರೀಚಿಕೆಯೇ ಸರಿ. ಮೀಡಿಯಾದಿಂದ ಒಮ್ಮೆ ಹಿಂದೆ ಸರಿದರೆ ಈ ಪ್ರಕರಣ ಕ್ಲೋಸ್ ಅಂತನೇ ಲೆಕ್ಕ! ಆದರೂ ನಮ್ಮ‌ಪೊಲೀಸರ ಮೇಲೆ ನಂಬಿಕೆ ಇದೆ. ಕಾಯೋಣ?

ಇದನ್ನೂ ಓದಿ-https://suddilive.in/archives/11959

Related Articles

Leave a Reply

Your email address will not be published. Required fields are marked *

Back to top button