ಕ್ರೈಂ ನ್ಯೂಸ್

ಪೊಲೀಸರಿಗೂ ಡೋಂಟ್ ಕೇರ್ ಈ ಯುವಕ-ಬಜಾರ್ ನ ರಸ್ತೆ ಮಧ್ಯೆ ಬಿಂದಾಸ್ ವ್ಯಾಪಾರ

ಸುದ್ದಿಲೈವ್/ಶಿವಮೊಗ್ಗ

ರಸ್ತೆಯ ಮಧ್ಯೆ ತಳ್ಳುವ ಗಾಡಿ ನಿಲ್ಲಿಸಿಕೊಂಡು ದ್ರಾಕ್ಷಿಹಣ್ಣು ವ್ಯಾಪಾರ ಮಾಡುತ್ತಿದ್ದ ಯುವಕನೋರ್ವ ಪೊಲೀಸರಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ.

ರಸ್ತೆ ಮಧ್ಯೆದಿಂದ ಗಾಡಿ ತೆಗೆಯುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ರಿಗೆ ತೆಗೆಯೊಲ್ಲ ಏನು ಮಾಡ್ಕೊಂತೀಯ ಮಾಡ್ಕೊಎಂದು ಅವಾಜ್ ಹಾಕಿರುವುದು ತಿಳಿದು ಬಂದಿದೆ. ಇದನ್ನ ವಿಡಿಯೋವೊಂದು ಮಾಡಿಕೊಳ್ಳಲಾಗಿದೆ.

ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ತಖ್ಳುವ ಗಾಡಿ ಮತ್ತು ಫುಟ್ ಪಾತ್ ಮೇಲೆ ಮಾರಾಟ ಮಾಡದಂತೆ ಪಾಲಿಕೆ ಸೂಚನೆ ಮಾಡಿತ್ತು. ಆ ಸೂಚನೆಗಳು ಯಾವಾಗ ಸಿಲುಗೊಂಡಿತೋ ಎನೋ ಗೊತ್ತಿಲ್ಲ. ಈಗ ಈ ಘಟನೆ  ನಡೆದಿದೆ.

ಗಾಂಧಿ ಬಜಾರಿನ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವಕ, ಗಾಡಿ ತೆಗೆಯಲ್ಲ ಏನು ಮಾಡ್ತೀಯಾ ಮಾಡು ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾನೆ. ಯುವಕ ಆವಾಜ್ ಹಾಕಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕ ಆವಾಜ್ ಹಾಕಿದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವಾಕಿಟಾಕಿ ಮೂಲಕ ಮಾಹಿತಿ‌ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/7767

Related Articles

Leave a Reply

Your email address will not be published. Required fields are marked *

Back to top button