ಸ್ಥಳೀಯ ಸುದ್ದಿಗಳು
ನಾಡಿಗೆ ನಾರಿಯ ನಡಿಗೆ ಎನ್ನುವ ವಿಶೇಷ ಮೆರವಣಿಗೆ ಮೂಲಕ ಗಮನ ಸೆಳೆದ ನಾರಿ ಮಣಿಯರು

ಸುದ್ದಿಲೈವ್/ಶಿವಮೊಗ್ಗ

ನಾಡಿಗೆ ನಾರಿಯ ನಡಿಗೆ ಎನ್ನುವ ವಿಶೇಷ ಮೆರವಣಿಗೆ ಮೂಲಕ ನಾರಿ ಮಣಿಯರು ಗಮನಸೆಳೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮ ಶಿವಮೊಗ್ಗ ನಗರದ ಗಮನ ಸೆಳೆಯುವಂತೆ ಮಾಡಿದೆ.
68 ನೇ ಕನ್ನಡ ರಾಜೋತ್ಸವದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾಡಿಗೆ ನಾರಿಯ ನಡಿಗೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಚಾಲನೆ ನೀಡಿದರು.
ನಂತರ68 ಮೀಟರ್ ಅಳತೆಯ ಕನ್ನಡ ಧ್ವಜ ಹಿಡಿದು ನೆಹರು ರಸ್ತೆ, ಬಿ.ಹೆಚ್ ರಸ್ತೆ, ಸರ್ ಎಂ ವಿಶ್ವೇಶ್ವರಯ್ಯ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ವಿವಿಧ ಶೈಲಿಯ ಸೀರೆಯಟ್ಟು ಮಹಿಳಾ ಮಣಿಗಳು ಗಮನ ಸೆಳೆದರು.
ಇದನ್ನೂ ಓದಿ-https://suddilive.in/archives/2470
