ಸ್ಥಳೀಯ ಸುದ್ದಿಗಳು

ಎರಡು ಕಾಲು ಲಕ್ಷ ಮೌಲ್ಯ, 4 ಕೆಜಿ 470 ಗ್ರಾ ಗಾಂಜಾ ವಶ

ಸುದ್ದಿಲೈವ್/ಶಿವಮೊಗ್ಗ

ಮಾದಕ ವಸ್ತು ಗಾಂಜಾ ಮಾರಾಟದ ವಿರುದ್ಧ ಸೆನ್ ಪೊಲೀಸರ ಭೇಟೆ‌ ಮುಂದುವರೆದಿದೆ. ಈ ಬಾರಿ 4 ಕೆಜಿ 470 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ‌ ಮೌಲ್ಯ 2,25,000/- ರೂ. ಎಂದು ಅಂದಾಜಿಸಲಾಗಿದೆ.‌

ಶಿವಮೊಗ್ಗ ನಗರದಲ್ಲಿ ಮಾದಕ ವಸ್ತು ಗಾಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು  ಕಾರಿಯಪ್ಪ ಎ.ಜಿ, ಮಾರ್ಗದರ್ಶದಲ್ಲಿ, ಪೊಲೀಸ್ ನಿರೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.

ನಿನ್ನೆ ಬೆಳಿಗ್ಗೆ ನಗರದ ಮಲವಗೊಪ್ಪದಿಂದ ಶುಗರ್ ಪ್ಯಾಕ್ಟರಿಗೆ ಸೇರಿದ ಖಾಲಿ ಜಾಗದಲ್ಲಿ 04 ಜನ ಆಸಾಮಿಗಳು ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸೆನ್ ಪಿಐ ದೀಪಕ್ ಎಂ ಎಸ್.  ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಧರ್ಮಾನಾಯ್ಕ್, ಚಂದ್ರಶೇಖರ್ ಡಿ,ಆರ್, ಕರಿಬಸಪ್ಪ, ಬಿ, ಎಸ್. ಪಿಸಿ ಫಿರ್ದೋಸ್ ಅಹಮ್ಮದ್, ರವಿ ಬಿ, ಚಿದಂಬರ್ ಡಿ. ಎನ್. ಹಾಗೂ ಚಾಲಕರಾದ ಪ್ರಕಾಶನಾಯ್ಕ ರವರುಗಳನ್ನು ಒಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದರು.‌

ಆರೋಪಿತರಾದ 1) ಸುಹೇಲ್ ಖಾನ್ @ ಪಿನ್ನಿ, 20 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ 2) ಮೊಹಮ್ಮದ್ ಗೌಸ್ @ ಗುಂಡ, 23 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ, 3) ಖಲೀಲ್ ಅಹಮದ್ @ ಕಾಲು, 25 ವರ್ಷ, ಕೋಟೆ ಏರಿಯಾ ಖಾಝಿ ಮೊಹಲ್ಲಾ ಭದ್ರಾವತಿ ಟೌನ್ ಮತ್ತು 4) ಸೈಯದ್ ಹಸೈನ್ @ ಜಂಗ್ಲಿ @ ಸಾಹಿಲ್, 23 ವರ್ಷ, ಎಕಿನ್ಸಾ ಕಾಲೋನಿ ಭದ್ರಾವತಿ ರವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿತರಿಂದ ಅಂದಾಜು ಮೌಲ್ಯ 2,25,000/- ರೂಗಳ ಒಟ್ಟು 04 ಕೆಜಿ 470 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರಿಂದ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2024 ಕಲಂ 20 (ಬಿ) (2) ಬಿ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ-https://suddilive.in/archives/7623

Related Articles

Leave a Reply

Your email address will not be published. Required fields are marked *

Back to top button