ಮಲೆನಾಡ ರೈತರ ಡಿನೋಟಿಫೈ ರದ್ದತಿ ಕುರಿತು ಸಚಿವರ ಜೊತೆ ಸುಧೀರ್ಘ ಚರ್ಚೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ವಿಧಾನ ಸಭೆ ಚುನಾವಣೆಗೂ ಮುಂಚೆ ಕಾಂಗ್ರೆಸ್ ಮಲೆನಾಡು ರೈತರ ಸಮಸ್ಯೆ ಬಗೆಹರಿಸಲು ಒಂದು ಸಮಿತಿ ರಚಿಸಿತ್ತು. ರಮೇಶ್ ಹೆಗಡೆಯವರ ನೇತೃತ್ವದ ಸಮತಿ ಇಂದು ಪಟ್ಟಿ ಮಾಡಿಕೊಂಡು ಬಂದು ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಸಭೆ ನಡೆಸಿದೆ.
ಭೂ ಹಕ್ಕಿನ ವಿಷಯದಲ್ಲಿ ಪ್ರಮುಖ ಚರ್ಚೆ ನಡೆದಿದೆ. ಶರಾವತಿ, ಸಾವೆಹಕ್ಲು, ಭದ್ರ ಮತ್ತು ತುಂಗ ಹಿನ್ನೀರಿನಿಂದ ಮನೆ ಕಳೆದುಕೊಂಡಿದ್ದವರಿಗೆ ಪರಿಹಾರ ನೀಡಲಾಗಿದ್ದರೂ ಡಿನೋಟಿಫೈ ಆಗಿರಲಿಲ್ಲ. 9720 ಎಕರೆ ಡಿನೋಟಿಫೈ ರದ್ದಾಗಿತ್ತು. ಈ ಎಲ್ಲಾ ಸಮಸ್ಯೆಗೆ ಇಂದು ಸಚಿವ ಮಧು ಬಂಗಾರಪ್ಪನವರ ಜೊತೆ ಅಧಿಕಾರಿಗಳು ಮತ್ತು ರೈತರ ಸಭೆ ನಡೆಸಲಾಗಿದೆ.
9720 ಎಕರೆ ಭೂಮಿ ಡಿನೋಟಿಫೈ ರದ್ದತಿ ಬಗ್ಗೆ 300 ಜನ ರೈತರು ಮೇಲ್ಮನವಿ ಸಲ್ಲಿಸಿದ್ದರಿಂದ ಕೋರ್ಟ್ ಸಹ ಡಿನೋಟಿಫೈ ರದ್ದಾಗಿರುವ ಬಗ್ಗೆ ಸರ್ಕಸರದ ವತಿಯಿಂದ ಐಎ ಹಾಕಲುರಮೇಶ್ ಹೆಗ್ಡೆ ತಿಳಿಸಿದರು.
ಅರಣ್ಯ ಇಲಾಖೆ ಸಿಸಿಎಫ್ ಹನುಮಂತಪ್ಪ ಮಾತನಾಡಿ, 1995 ರ ಅರಣ್ಯ ಕಾಯ್ದೆಯನ್ನ ಅಡ್ವಕೇಟ್ ಜನರಲ್ ಗೆ ಕೇಳಿದ್ದಾರೆ. ಸರಿಯಾದ ಕಾನೂನು ಏನು ಎಂಬುದು ಬರಬೇಕಿದೆ. ನಮ್ಮಲ್ಲಿನ ದಾಖಲಾತಿಗಳನ್ನ ಗಟ್ಟಿ ಮಾಡಿಕೊಳ್ಳಬೇಕು. ನಂತರ ಕೋರ್ಟ್ ಗೆ ಹೋಗಲು ತೀರ್ಮಾನಿಸಲಾಗಿದೆ. ಎಜಿಯಿಂದ ಬರುವ ಸೂಚನೆಗಳಿಗಾಗಿ ಕಾಯಲಾಗುತ್ತಿದೆ ಎಂದರು.
ಮಲೆನಾಡು ರೈತರ ಸಮಸ್ಯೆ ಬಗೆಹರಿಸಲು ಸಂಚಾಲಕರಾಗಿ ರಮೇಶ್ ಹೆಗ್ಡೆ ಅವರು ತಮ್ಮ ಕಚೇರಿ ಬಳಸಿಕೊಂಡು ರೈತರು ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳಲಿ. ಒಕ್ಕಲೆಬ್ಬಿಸುವುದನ್ನ ವೇದಿಕೆ ಮೇಲಿದ್ದ ಡಿಸಿಗೆ ನಿಲ್ಲಿಸಲು ಸಚುವರು ಸೂಚನೆ ನೀಡಿದರು. 1978 ರ ಪೂರ್ವದ ಪಟ್ಟಿಯಲ್ಲಿರುವವರನ್ನ ಒಕ್ಕಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲು ನಗರದ ಮಹಾದೇವಪ್ಪ ಸಭೆಗೆ ತಿಳಿಸಿದರು. ಹಾಗೂ ಅವರ ಬೇಡಿಕೆಯನ್ನ ಮಾನ್ಯ ಮಾಡಲಾಯಿತು.
1978 ಪೂರ್ವದ ಒತ್ತುವರಿಗಳನ್ನ ಸಕ್ರಮ ಗೊಳಿಸಲು ಪ್ರಕ್ರಿಯೆ ಆರಂಭಿಸಿದಾಗ ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಕೆಲ ಒಪ್ಪಿಗೆ ಆಯುತು. ಕೆಲವು ಡ್ರಾಪ್ ಆಯಿತು.ಮೂರು ಎಕರೆ ಕನಿಷ್ಠ ನೀಡಿ ನಿಯಮಾವಳಿಗೆ ಒಖಪಡಿಸಿ ಅನುಮತಿ ನೀಡಲಾಯಿತು. ಗೈಡ್ ಲೈನ್ಸ್ ಬದಲಾಯಿದಲು ನಿರ್ಣಯಿಸಲಾಯಿತು. 1978 ಕ್ಕೆ ತೊಂದರೆ ನೀಡಲಗಲ ಎಂದು ಅರಣ್ಯ ಅಧಿಕಾರಿಗಳು ಸೂಚಿಸಿದರು.
ಇದನ್ನೂ ಓದಿ-https://suddilive.in/archives/2456
