ಓರ್ವ ಮಹಿಳೆ ಐದು ಜನ ಮಕ್ಕಳು ನಾಪತ್ತೆ

ಸುದ್ದಿಲೈವ್/ಭದ್ರಾವತಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಓಲ್ಡ್ ಟೌನ್ ವ್ಯಾಪ್ತಿಯಲ್ಲಿ ಐವರು ಮಕ್ಕಳು ಸೇರಿದಂತೆ ಒರ್ವ ಮಹಿಳೆ ಮಿಸ್ಸಿಂಗ್ ಆಗಿರುವ ಬಗ್ಗೆ ವರದಿಯಾಗಿದೆ. ಕಳೆದ ನವೆಂಬರ್ 11 ರಂದು ಕಾಣೆಯಾದ ಪ್ರಕರಣದ ಬಗ್ಗೆ ನವೆಂಬರ್ 15 ರಂದು ಸಂಜೆ ಎರಡು ದೂರು ದಾಖಲಾಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ..
ಏನಿದು ಪ್ರಕರಣ
ಇಲ್ಲಿನ ಅನ್ವರ್ ಕಾಲೋನಿಯ ನೆರೆಹೊರೆಯ ಐವರು ಕಾಣೆಯಾಗಿದ್ದಾರೆ. ಓಲ್ಡ್ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ಮುನ್ನಾ ಎಎಂಬವರ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಸಮಿವುಲ್ಲಾ ಎಂಬವರ ಪತ್ನಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಕಳೆದ 11 ರಂದು ಮುನ್ನಾರವರ ಮೂವರು ಮಕ್ಕಳ ಪೈಕಿ ಹಿರಿಯವಳು, ಸೀಗೆಬಾಗಿ ಯಲ್ಲಿರುವ ಆಸ್ಪತ್ರೆಗೆ ಹೋಗಿಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲವಂತೆ. ಈ ಸಂಬಂಧ ಎಲ್ಲೆಡೆ ಹುಡುಕಾಡಿದ್ದಾರೆ. ಬಳಿಕ ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಅಲ್ಲದೆ ದರ್ಗಾಕ್ಕೆ ಹೋಗಿರಬಹುದು ಎಂದು ಲಕ್ಷೇಶ್ವರ ಬಾಬಾ ಬುಡುನ್ ಗಿರಿ,ಚಿಂತಾಮಣಿ, ಹಾಸನದ ಜಾವಗಲ್,ಹಣಗೆರೆ ಕಟ್ಟೆ ಸೇರಿದಂತೆ ವಿವಿಧೆಡೆ ಹುಡುಕಾಡಿದ್ದಾರೆ.
ಬಳಿಕ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೋದವರು ನೆರೆಮನೆಯ ಸಮಿವುಲ್ಲಾರ ಪತ್ನಿ ಜೊತೆಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಇದೀಗ ಎರಡು ಮನೆಯವರು ಐವರು ಮಕ್ಕಳು ಸೇರಿದಂತೆ ಓರ್ವ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/3281
