ಸ್ಥಳೀಯ ಸುದ್ದಿಗಳು

ಸಹಕಾರಿ ಕ್ಷೇತ್ರಕ್ಕೆ ಯುವಕರು ಹೆಚ್ಚಾಗಿ ಬರುವಂತಾಗಬೇಕು-ಸಚಿವ ರಾಜಣ್ಣ

ಸುದ್ದಿಲೈವ್/ಶಿವಮೊಗ್ಗ

ಪ್ರಧಾನಿ ಮೋದಿಯವರ ಕನಸಾದ 5 ಟ್ರಲಿಯನ್ ಡಾಲರ್ ಗುರಿ ಹೊಂದಲು ಸಹಕಾರಿ ಕ್ಷೇತ್ರ ಅನುಕೂಲವಾಗಲಿದೆ ಎಂದು ಸಹಕಾರಿ ಸಚಿವ ರಾಜಣ್ಣ ಅಭಿಪ್ರಾಯ ಪಟ್ಟರು.

ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ-2023 ಉದ್ಘಾಟನಾ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದರು. ಸ್ವಾಭಿಮಾನದ ಬದಕು ಆರಂಭಿಸಲು ಸಹಕಾರಿ ಕ್ಷೇತ್ರ ಅನುಕೂಲವಾಗಿದೆ ಎಂದರು.

ನೆಹರೂ ಹುಟ್ಟುಹಬ್ಬದ ಅಂಗವಾಗಿ ಸಹಕಾರ ಸಪ್ತಾಹ ನಡೆಯುತ್ತಿದೆ. ನವರತ್ನ ಕಾರ್ಖಾನೆ ಆರಂಭಿಸಿದ ಕೀರ್ತಿ ನೆಹರೂ ಅವರು ಸಹಕಾರಿ ಕ್ಷೇತ್ರವನ್ನ ಬಲಪಡಿಸಿದ್ದರು.  ಹಾಗೆ  ದೇಶದ ಆರ್ಥಿಕ ಗುರಿ ಹೊಂದಲು ಸಹಕಾರಿ ಅನುಕೂಲವಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಮಂಜುನಾಥ ಗೌಡರು ಸಹಕಾರಿ ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ  ಬೆಳಕು ಚೆಲ್ಲಿದ್ದಾರೆ. ಅವರ ಬೇಡಿಕೆಯನ್ನ ಬಗೆಹರಿಸಲಾಗುವುದು. ಒಂದಾಗಿ ಕೆಲಸ ಮಾಡೋಣ ಎಂದರು. ಸಹಕಾರ ಕ್ಷೇತ್ರ ಸೀಮಿತ ವಾಗದೆ ಜನರ ಆಂದೋಲನ ಆಗಬೇಕು. ಎಲ್ಲಾಯುವಕರು ಸಹಕಾರಿ ತತ್ವದ ಆಧಾರದ ಮೇರೆಗೆ ತಮ್ಮ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಯುವಜನತೆ ಸಹಕಾರಿ ಆಂಧೋಲನದಿಂದ ಹೊರ ಇದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಸಮಸ್ಯೆ ಇದೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿರುತ್ತದೆ. ಆ ಬುದ್ದಿಶಕ್ತಿಯಿಂದ ಪರಿಹಾರ ಕಂಡುಕೊಳ್ಳೋಣ ಎಂದರು. ಆಂದೋಲನದಲ್ಲಿರುವವರು ಸಮಾಜ ಮುಖಿಯಾಗಿ ಕೆಲಸ ಮಾಡುವವರಿಗೆ ಸ್ಪಂಧಿಸುವ ಶಕ್ತಿ ಸಹಕಾರಿಗಳಲ್ಲಿರುತ್ತದೆ. ಅದನ್ನ ಜಾಗೃತಗೊಳಿಸುವಂತೆ ಕರೆ ನೀಡಿದರು.

ಶಾಸಕಗಿರಿ ಬೇಕಾದರೂ ಬಿಡುವೆ ಸಹಕಾರಿ ಕ್ಷೇತ್ರ ಬಿಡೊಲ್ಲ. ಎಂದು ನನ್ನನ್ನ ಸಂಪರ್ಕಿಸಿದ ಕೆಲವರಿಗೆ ಮಾತಹೇಳಿದ್ದೆ.  ನನಗೆ ಸಹಕಾರ ಆಂದೋಲನದಲ್ಲಿ ಹೆಚ್ಚಿನ ನಂಬಿಕೆ ಇದೆ. ಕಾರಣ ಸಮಾಜದಲ್ಲಿ ನೊಂದವರಿಗೆ ಹೆಚ್ಚು ಸಹಾಯ ಮಾಡಲು ಅವಕಾಶವಿದೆ. ಸಹಕಾರಿ ಆಂದೋಲನ ಕೇವಲ ಪತ್ತಿನ ಚಟುವಟಿಕೆ ಸೀಮಿತವಾಗಬಾರದು. ಹೈನುಗಾರಿಕೆ ಇದೆ.ಬೇಸಾಯದ ಜೊತೆಯಲ್ಲಿ ಉಪಕಸುಬು ಮಾಡುವಂತಾಗಬೇಕು. ಅವರಿಗೆ ಬೇಕಾದ ಸಾಲಸೌಲಭ್ಯ ದೊರೆಯುವಂತೆ ಮಾಡುವುದೇ ಗುರಿಯಾಗಿದೆ.

ಸಹಕಾರಿ ಕ್ಷೇತ್ರದ ಏಳಿಗೆಗೆಗಳಿಗೆ ಪೂಕ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಲಾಗುವುದು ನೂನ್ಯತೆಗಳನ್ನ ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ. ಸಹಕಾರಿ ಹಣ ಎಲ್ಲವೂ ಸರ್ಕಾರಿ ಹಣ ಎಂದು ಉದಾಸಿನ ಮಾಡಲಾಗುತ್ತದೆ ಇದು ಠೇವಣಿದಾರರ ಹಣ. ನಬಾರ್ಡ್ ಹಣ ಬಿಡುಗಡೆ ಮಾಡಿದೆ. ದೇಶಾದ್ಯಂತ 50 ಸಾವಿರ ಕೋಟಿ ಹಣ ಕೇಂದ್ರದ ಮೂಲಕ ಬಿಡುಗಡೆ ಮಾಡಿದೆ. ಶೀಘಗರದಲ್ಲಿಯೇ ಜಿಲ್ಲಾ ಬ್ಯಾಂಕ್ ಗಳಿಗೆ ಬಿಡುಗಡೆ ಆಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ‌ ಮಂಜುನಾಥ್ ಗೌಡರ ಭಾಷಣಕ್ಕೆ ಉತ್ತರಿಸಿದರು.‌

ಈ ಮೊದಲು ಮಾತನಾಡಿದ ಮಂಜುನಾಥ ಗೌಡರು, ಇದುವರೆಗೂ ನಬಾರ್ಡ್ ಹಣ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಗೆ ತಲುಪಿಲ್ಲವೆಂದು ತಿಳಿಸಿದ್ದರು. ಮುಖರಾಯಿ ಹಣವನ್ನ ಡಿಸಿಸಿ ಬ್ಯಾಂಕ್ ನಲ್ಲಿ ಠೇವಣಿ ಹಣವನ್ನಾಗಿ ಶೇ‌50% ರಷ್ಟು ಇಡಲು ಅವಕಾಶವಿದೆ. ಅದರಂತೆ ಮುಂದಿನಗಳಲ್ಲಿ ಡಿಸಿಸಿ ಬ್ಯಾಂಕ್ ನಲ್ಲೂ ಮುಜರಾಯಿ ಇಲಾಖೆಯ ಹಣವನ್ನ  ಠೇವಣಿ ರೂಪದಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದರು.

ಮಧು ಮಾತು

ಸರ್ಕಾರ ಮಾಡದ ಕೆಲಸವನ್ನ ಸಹಕಾರಿ ಕ್ಷೇತ್ರ ಮಾಡಿದೆ. ದೇಹಕ್ಕೆ ಹೇಗೆ ರಕ್ತ ಅವಕಶ್ಯಕತೆ ಇದೆಯೋ ಹಾಗೆ ಮಾರುಕಟ್ಟೆಯಲ್ಲಿ  ಹಣ ಅವಶ್ಯಕತೆಯಿದೆ. ರೈತರಿಗೆ ಸಹಕಾರ ಬರೋದು ಸ್ವಸಹಾಯ ಸಂಘದಿಂದ ಬರುತ್ತದೆ. ಇದನ್ನ ಫೈನನ್ಷಿಯಲ್ ಗಾರ್ಮೆಂಟ್ ತರ ಸಹಕಾರ ಕ್ಷೇತ್ರವನ್ನ ಪರಿಗಣಿಸಿ ಬೆಳೆಸಬೇಕಿದೆ ಎಂದರು.

ಜೇನುಸಾಗಾಣಿಕೆ, ಸಿರಿಕಲ್ಚರ್ ನಂತಹ ಕ್ಷೇತ್ರ ಅಭಿವೃದ್ಧಿಮಾಡಬೇಕಿದೆ. ಬಂಗಾರಪ್ಪನವರ ಅವಧಿಯಲ್ಲಿ ಜಾರಿಗೆ ಬಂದ  ವಿಶ್ವ ಯೋಜನೆ ಉಳಿಸಿಕೊಂಡಿದ್ದರೆ ಗುಡಿಗಾರಿಕೆ ಉಳಿಯುತ್ತಿತ್ತು. ಪೇಪರ್,  ಸೋಪು,  ಹಪ್ಪಳ ಸೆಂಡಿಗೆ ಕುಲಕಸುಬುಗಳು ಬರಗಾಲದಲ್ಲಿ ಜನರಿಗೆ ಬದುಕುಕಟ್ಟಿಕೊಡುತ್ತದೆ. ಇವಕ್ಕೆ ಸಹಕಾರಿ ಕ್ಷೇತ್ರ ಹೆಚ್ಚು ಉತ್ತೇಜನ ನೀಡಬೇಕೆಂದರು.

ಸಹಕಾರಿ ನೆಟ್ ವರ್ಕ್ ಗಳು ಸರ್ಕಾರಕ್ಕೂ ಇರೊಲ್ಲ. ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಸಾಧ್ಯವಾಗುತ್ತದೆ. ಎರಡರಿಂದ ಮೂರು ವರ್ಷದಲ್ಲಿ ಪೋಷಕರು ತಮ್ಮ ಸರ್ಕಾರಿ ಶಾಲೆಯಲ್ಲಿ ಓದುವಂತೆ ಮಾಡುತ್ತೇನೆ ಎಂದು ಶಪಥ ಮಾಡಿದರು.

ಜಿಟಿಡಿ ಮಾತು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಹಕಾರದಲ್ಲಿ ಕ್ರಾಂತಿ ಮಾಡಿದೆ. ಕೊಡುಗೆಯನ್ನ ನಾವೇ ಹೇಳಿಕೊಳ್ಳುತ್ತಿಲ್ಲ.ಪಂಚವಾರ್ಷಿಕ ಯೋಜನೆಯಲ್ಲಿ ಸಹಕಾರ ಕ್ಷೇತ್ರಜೋಡಿಸಿದ್ದರು. ಭಾರತದೇಶದಲ್ಲಿ ಸಹಕಾರಿಯೇ ಬೆನ್ನಲುಬುದು.

ಇದನ್ನೂ ಓದಿ-https://suddilive.in/archives/3045

Related Articles

Leave a Reply

Your email address will not be published. Required fields are marked *

Back to top button