ಈ ಬಾರಿ ಜನವರಿಯಲ್ಲಿಯೇ ಶರಾವತಿ ಹಿನ್ನೀರು ಖಾಲಿ ಆಗಲಿದೆ-ಸೇತುವೆ ಕಾಮಗಾರಿಗೆ ಹಿನ್ನಡೆಯಾಗಲಿದೆಯಾ?

ಸುದ್ದಿಲೈವ್/ಶಿವಮೊಗ್ಗ

ಸಾಗರದ ನಾಲ್ಕುಪಥ ರಸ್ತೆ,, ವಿದ್ಯಾನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನ ಡಿಸೆಂಬರ್ ಅಂತ್ಯದಲ್ಲಿ ಮುಕ್ತಾಯ, ಸಿಗಂದೂರು ಸೇತುವೆ ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ ಹಾಗೂ ತುಮಕೂರು-ಶಿವಮೊಗ್ಗ ಹೈವೆ ಕಾಮಗಾರಿಯ ಬಗ್ಗೆ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶಿವಮೊಗ್ಗದ ಜಿಪಂನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳ ಜೊತೆ ಸುಧೀರ್ಘ ಚರ್ಚೆ ನಡೆಯಲಾಯಿತು.
ಪ್ರಗತಿಪರಿಶೀಲನೆ ಸಭೆಯಲ್ಲಿ, ಶಿವಮೊಗ್ಗ ಚಿತ್ರದುರ್ಗದ ಹೊಳೆಹೊನ್ನೂರು ಸೇತುವೆ ನಿಧಾನವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಗಮನಸೆಳೆದರು.
ಯಾವಾಗ ಚಿತ್ರದುರ್ಗ-ಶಿವಮೊಗ್ಗ ಹೈವೆ ಆರಂಭವಾಗಿದ್ದು ಎಂದು ಸಚಿವರು ಎನ್ ಹೆಚ್ ನ ಪೀರ್ ಪಾಶರಿಗೆ ಕೇಳಿದರು. ಸೇತುವೆ ಕಾಮಗಾರಿ ಆರಂಭವಾಗಿ ಒಂದು ವರೆ ವರ್ಷ ಆಗಿದೆ. ಆದರೆ ಅದು ಆಮೆಗತಿಯಲ್ಲಿ ಸಾಗಿದೆ. ಕಾನೂನು ಸಮಸ್ಯೆ ಅಥವಾ ಒತ್ತುವರಿ ಬಾಕಿ ಇದೆಯಾ ಎಂದು ಸಚಿವರು ಬೇಸರ ಹೊರಹಾಕಿದರು. ಅದಕ್ಕೆ ಅಧಿಕಾರಿಗಳು ಕಾನೂನು ಸಮಸ್ಯೆ ಏನೂ ಇಲ್ಲವೆಂದರು. 2024 ಜೂನ್ ಗೆ ಕಾಮಗಾರಿ ಪೂರ್ಣವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಿಗಂದೂರು ಸೇತುವೆ ಅತ್ಯಾಧುನಿಕವಾಗಿ ವೇಗವಾಗಿ ಮಾಡಲಾಗುತ್ತಿದೆ ಚಿತ್ರದುರ್ಗದ ರಸ್ತೆ ವೇಗ ಕಡಿಮೆಯಾಗಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರನಿಗೆ ಕಾಮಗಾರಿ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದರು. 422 ಕೋಟಿ ವೆಚ್ಚದ್ದು ಬೇಗ ಮುಗಿಸಿ ವರದಿ ನೀಡಲು ಸೂಚಿಸಿದರು.
ಬೈಂದೂರು-ರಾಣೇಬೆನ್ನೂರು ದ್ವಿಪಥ ರಸ್ತೆ ನಿರ್ಮಾಣ240 ಕೋಟಿಯಲ್ಲಿ ನಿರ್ಮಾಣವಾಗಿದೆ. ಒತ್ತುವರಿ ಸಮಸ್ಯೆ ಇಲ್ಲ.ಎರಡು ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಅಧಿಕಾರಿ ಪೀರ್ ಪಾಶ ತಿಳಿಸಿದರು. ಈ ರಸ್ತೆ ನಿರ್ಮಾಣದಲ್ಲಿ ಕೆಲ ರೈತರು ಆಕ್ಷೇಪಣೆ ಸಹ ವ್ಯಕ್ತವಾಗುತ್ತಿದ್ದು ಇವರ ಬಗ್ಗೆ ಗಮನಹರಿಸಿ ಪರಿಹರಸುವ ಬಗ್ಗೆ ಚರ್ಚಿಸಲಾಯಿತು.
ಶರಾವತಿ ನೀರು ಜನವರಿಯಲ್ಲಿಯೇ ಖಾಲಿ ಆಗಲಿದೆ
ಸಿಗಂದೂರಿನ ಸೇತುವೆ 422 ಕೋಟಿ ಇದೆ. 2024 ರಲ್ಲಿ ಸೇತುವೆ ಲೋಕಾರ್ಪಣೆ ಆಗಲಿದೆ. ಜನವರಿಯಲ್ಲಿ ಶರಾವತಿಯ ನೀರು ಖಾಲಿಯಾಗಲಿದೆ. ಮತ್ತೆ ನೀರು ಕಡಿಮೆ ಆದರೆ ಜನವರಿಯಲ್ಲಿ ಕಾಮಗಾರಿ ಸ್ಥಗಿತಗೊಳ್ಳಲಿದೆ ಎಂದು ಎನ್ ಹೆಚ್ ಅಧಿಕಾರಿ ಪೀರ್ ಪಾಶ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಜಿಲ್ಲಾಧಿಕಾರಿಗಳು ನೀರಿದ್ದಾಗ ನೀರು ಹೆಚ್ಚಾಯಿತು ಎನ್ನುತ್ತೀರಿ ನೀರು ಕಡಿಮೆ ಆದರೆ ಕಡಿಮೆ ಆಯಿತು ಎಂದು ಹೇಳುತ್ತೀರಿ. ಹಾಗಾಗಿ ಕಾಮಗಾರಿ ನಿಧಾನ ಆಗುತ್ತೆ ಎಂದರೆ ಹೇಗೆ ಎಂದರು.
ವಿದ್ಯುತ್ ಸಹ ಸಮಸ್ಯೆ ಇದೆ. ಮೆಸ್ಕಾಂಗೆ ಪವರ್ ಸಪ್ಲೆ ನಿರಂತರ ನೀಡಿ ಎಂದು ಡಿಸಿ ಸೂಚನೆ ನೀಡಿದರು. ಶಿವಮೊಗ್ಗ ಮಂಗಳೂರಿಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 422 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಚರ್ಚಿಸಲಾಯಿತು. ಹಿರೇಭಾಸ್ಕರ್ ಡ್ಯಾಂ ಗೆ ಜನ ಹೆಚ್ಚಿಗೆ ಹೋಗ್ತಾ ಇದ್ದಾರೆ ನಿಯಂತ್ರಿಸಲು ಎಸ್ಪಿಗೆ ಸೂಚನೆ ನೀಡಲಾಯಿತು.
ಡಿಪಿಆರ್ ಸಿದ್ದತೆ
ಅಶೋಕ ವೃತ್ತ ಮತ್ತು ಆಲ್ಕೊಳ ವೃತ್ತಕ್ಕೆ 280 ಕೋಟಿ ಮೇಲ್ಸೆತುವೆ ನಿರ್ಮಾಣ, ಕೀರ್ತಿನಿಗರದ ಮೇಲ್ಸೆತುವೆಯ ಸರ್ವೆ ಗೆ ಹಾಗೂ 300 ಕೋಟಿ ವೆಚ್ಚದಲ್ಲಿ ಆಗುಂಬೆಯ ಘಾಟಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಮಂತ್ರಾಲಯ ಡಿಪಿಆರ್ ತಯಾರಿಸಲು ಕಲ್ಸಲ್ಟೆಂಟ್ ನೇಮಕಗೊಳಿಸುವ ಟೆಂಡರ್ ಜನವರಿಯಲ್ಲಿ ತೆಗೆಯಲಾಗಿದೆ. ತಾಂತ್ರಿಕ ಬಿಡ್ ಅನುಮೋದನೆ ಬಾಕಿ ಕುರಿತು ಚರ್ಚಿಸಲಾಯಿತು.
ತುಮಕೂರು-ಶಿವಮೊಗ್ಗ ಹೈವೆ
ತುಮಕೂರು ಮತ್ತು ಶಿವಮೊಗ್ಗ ಚತುಷ್ಪಥ ರಸ್ತೆ ಅಕ್ಟೋಬರ್ ಒಳಗೆ ಪೂರ್ಣವಾಗಲಿದೆ. 47% ಕಾಮಗಾರಿ ಪೂರ್ಣವಾಗಿದೆ. 1382 ಕೋಟಿಹಣದಲ್ಲಿ ಹೈವೆ ನಿರ್ಮಾಣವಾಗುತ್ತಿದೆ.ತರೀಕೆರೆ ಭೂಸ್ವಾಧೀನ ಆಗಬೇಕಿದೆ. ಕೆಲಸದವೇಗ ಹೆಚ್ಚಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಹೈವೆ ನಿರ್ಮಾಣಕ್ಕೆ ಮಣ್ಣಿನ ಅಗತ್ಯವಿದ್ದು, ಸಭೆಯಲ್ಲಿ ಭಾಗಿಯಾಗಿದ್ದ ಗುತ್ತಿಗೆದಾರರು ಮಣ್ಣಿನ ಸಮಸ್ಯೆಯಿದ್ದು, ಕಾಮಗಾರಿಗೆ ಮಣ್ಣು ಒದಗಿಸುವಂತೆ ಪ್ರಸ್ತಾಪಿಸಿದರು. ಕೆರೆಗಳ ಹೂಳು ಪಡೆಯಲು ಸೂಚನೆ ನೀಡಲಾಯಿತು.ಡಿಸಿ ಡಾ.ಸೆಲ್ವಣಮಣಿ ಮಾತನಾಡಿ, ನಾಲ್ಕುಕೆರೆ ಗುರುತಿಸಲಾಗಿದೆ ಎಂದರು. ಅದಕ್ಕೆ ಉತ್ತರಿಸಿದ ಸಚಿವರು ಹೆಚ್ಚಿಗೆ ಕೆರೆ ಕೊಡಿ ಎಂದು ಸೂಚಿಸಿದರು. ಇದರಿಂದ ಸಭೆಯಲ್ಲಿ ಹೈವೆ ಕಾಮಗಾರಿಗೆ ಹೆಚ್ಚಿನ ಮಣ್ಣು ಒದಗಿಸಲು ನಿರ್ಣಯಿಸಲಾಯಿತು.
ಜೋಗ ಅಭಿವೃದ್ದಿ
ಜೋಗ ಅಭಿವೃದ್ಧಿಗಾಗಿ ಸ್ವಿಮ್ಮಿಂಗ್ ಪೂಲ್, ಜಿಪ್ ಲೈನ್ , ಫೈವ್ ಸ್ಟಾರ್ ಹೋಟೆಲ್ ಬಂದರೆ ಕೇಬಲ್ ಕಾರು ಆರಂಭಿಸಲಾಗುತ್ತಿದೆ. 200 ಕೋಟಿ ವೆಚ್ಚದಲ್ಲಿ ಅಭಿವೃದ್ದಿಆಗುತ್ತಿದೆ. ಪಾರ್ಕಿಂಗ್, ಶರಾವತಿ ಸ್ಟ್ಯಾಚ್ಯೂ, ಮ್ಯೂಸಿಕಲ್ ಫೌಂಟೇನ್ ನಿರ್ಮಿಸಲಾಗಿದೆ, ಜೋಗ ಅಭಿವೃದ್ಧಿಯ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಮಂಕಳ ವೈದ್ಯ ಮತ್ತು ನಾನು ಹಾಗೂ ಡಿಸಿಯ ಜೊತೆ ಜೋಗದಲ್ಲಿಯೇ ಸಭೆ ನಡೆಸಲು ಸಚಿವರು ಸೂಚನೆ ನೀಡಿದರು.
ಮಾರ್ಚ್ ಒಳಗೆ ಕಾಮಗಾರಿ ಮುಗಿಯಲಿದೆ. ಬೋಟಿಂಗ್ ಗೆ ಸಮಯಬೇಕಿದೆ. 23 ಕೆಲಸವನ್ನ ನಾಲ್ಕು ತಂಡದಲ್ಲಿ ಕೆಲಸ ಆಗುತ್ತಿದೆ ಎಂದು ಜೋಗದ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. . ಚಂದ್ರಗುತ್ತಿಯಲ್ಲಿ ಯಾತ್ರಿನಿವಾಸ ನಿರ್ಮಿಸಲು ಅರಣ್ಯ ಆಕ್ಷೇಪಣೆ ಇದೆ. ಚಂದ್ರಗುತ್ತಿ, ಸಿಗಂದೂರಿನಲ್ಲಿ ಯಾತ್ರಿ ನಿವಾಸಕ್ಕೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಗುಡುವಿ ವಿಚರದಲ್ಲಿ ಅರಣ್ಯ ಇಲಾಖೆಗೆ ಕ್ಲಾಸ್
ಗುಡವಿ ಪಕ್ಷದಾಮದಲ್ಲಿ 150 ಪಕ್ಷಿಗಳು ಸತ್ತಿವೆ ಎಂಬ ಮಾಧ್ಯಮಗಳ ಕಿ ಅಂಶವನ್ನ ಪ್ರಸ್ತಾಪಿಸಿದಾಗ ಅಧಿಕಾರಿಗಳು ಸ್ಪಷ್ಟನೆಗೆ ಮುಂದಾದರು. ಆದರೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಗುಡುವಿ ಪಕ್ಷಿದಾಮವನ್ನ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಪಡಿಸುವ ವಿಷಯದಲ್ಲಿ ಸಭೆಯಲ್ಲಿ ಚರ್ಚೆ ಬಂದಾಗ ಗುಡುವಿಯಲ್ಲಿ ಪಕ್ಷಿ ಸಾಯಲು ಕಾರಣವೇನು ಎಂದು ಪ್ರಶ್ನಿಸಿದರು. ಅಧಿಕಾರಿಗಳು ಅಷ್ಟೊಙದು ಪಕ್ಷಿಗಳು ಸತ್ತಿಲ್ಲ. ಪ್ರತಿ ವರ್ಷ 15 ಪಕ್ಷಿಗಳು ಸಾಯುತ್ತವೆ ಈ ವರ್ಷ 35 ಸತ್ತಿವೆ ಎಂದರು
ಇದನ್ನ ಆಕ್ಷೇಪಿಸಿದ ಸಚಿವರು, ನೀವು ಮಾಧ್ಯಮಗಳಿಗೆ ಹೇಳಲ್ಲ. ನಮಗೂ ಮಾಹಿತಿ ಕೊಡಲ್ಲ. ರಾಗಿಗುಡಗಡದ ಘಟನೆಯನ್ನ ಪ್ರಸ್ತಾಪಿಸಿದ ಸಚಿವರು. ಎಸ್ಪಿ ಅವರ ಕಾರಗಯ ವೈಖರಿಯನ್ನ ಹಾಡಿಗಮಹೊಗಳಿದರು. ರಾಗಿಗುಡ್ಡದಲ್ಲಿ ಧಗ ಧಗ ಕೊತ ಕೊತ ಎಂದು ಟಿವಿಯಲ್ಲಿ ಬಂದಾಗ ಎಸ್ಪಿ ಸ್ಪಷ್ಟನೆಯಿಂದ ಕಡಿಮೆಯಾಯಿತು ಎಂದರು.
ಇದನ್ನೂ ಓದಿ-https://suddilive.in/archives/2449
