ಮತ್ತೊಂದು ಏಕಾಂಗಿ ಹೋರಾಟಕ್ಕೆ ಅಣಿಯಾದ್ರ ಗಿರೀಶ್ ಆಚಾರ್?

ಸುದ್ದಿಲೈವ್/ಶಿವಮೊಗ್ಗ

ಗಿರೀಶ್ ಆಚಾರ್ ಹೆಸರು ಕೇಳಿದ್ದೀರಾ? 9 ಸಾವಿರ ಎಕರೆ ಶರಾವತಿ ಸಂತ್ರಸ್ತರಿಗೆ ಹಂಚಿದ ಭೂಮಿಗೆ ಕೇಂದ್ರದ ಅನುಮತಿ ಪಡೆದಿಲ್ಲ. ಸರ್ಕಾರ ಕಣ್ಣುವರೆಸುವ ತಂತ್ರದ ಮೂಲಕ ಡಿನೋಟಿಫೈ ಮಾಡಿದೆ ಎಂದು ಆರೋಪಿಸಿ ಕೋರ್ಟ್ ನ ಕಟೆಕಟೆಯಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದವರು.
ಅವರು ಇಂದು ಮತ್ತೊಂದು ಹೋರಾಟಕ್ಕೆ ಅಣಿಯಾಗಿದ್ದಾರೆ. ಅಂದು ಸಹ ಏಕಾಂಗಿ ಹೋರಾಟಕ್ಕೆ ಇಳಿದಿದ್ದ ಗಿರೀಶ್ ಆಚಾರ್ ಕೋರ್ಟ್ ನಲ್ಲಿ ಗೆದ್ದು ಬೀಗಿದ್ದರು. ಇಂದು ಸಹ ಏಕಾಂಗಿ ಹೋರಾಟಕ್ಕೆ ಇಳಿದಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೊಸನಗರ ಮತ್ತು ಸಾಗರದ ಶರಾವತಿ ನದಿಯಿಂದ ನೈಸರ್ಗಿಕ ಸಂಪತ್ತು ಮರಳನ್ನ ಕದಿಯಲಾಗುತ್ತಿದೆ. ಜಿಲ್ಲಾಡಳಿತ ಯಾವ ಕ್ರಮ ಜರುಗಿಸದೆ ನಿದ್ರೆಗೆ ಜಾರಿದೆ ಎಂದು ಎಚ್ಚರಿಸಿದ್ದಾರೆ.
ಆಚಾರ್ ಹೋರಾಟ ಹೇಗಿರುತ್ತೆ ಎಂಬುದು ಹೇಳುವುದು ಸಾಧ್ಯವಿಲ್ಲ. ಸಧ್ಯಕ್ಕಂತು ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲನ್ನ ಸವಿಸಿ ಹೋಗಿದ್ದಾರೆ. ಈ ಹಿಂದೆ ಮನವಿ ಕೊಟ್ಟು ಹೋಗುತ್ತಿದ್ದ ಇವರು ಇಂದು ದಿಡೀರ್ ಕಚೇರಿ ಎದುರು ಧರಣಿ ಕುಳಿತು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ, ಪೊಲೀಸ್ ಇಲಾಖೆ ಮತ್ತು ಅರಣ್ಯಕ್ಕೆ ಸೇರಿದ ಈ ಜಾಗ ಹಣಬಲ ಮತ್ತು ತೋಳ್ಬಲದವರ ಪಾಲಾಗುತ್ತಿದೆ. ಈ ಹಿಂದೆ ಕೊಟ್ಟ ಮನವಿಯಲ್ಲಿ ಅಕ್ರಮ ಮರಳುಗಾರಿಕೆಯನ್ನ ಅಧಿಕಾರಿಗಳು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ನದಿಯ ಬಂಡೆಯನ್ನೇ ಸಿಡಿಸಿ ಕಾನೂನು ಬಾಹಿರವಾಗಿ ಮರಳು ಎತ್ತಲಾಗುತ್ತಿದೆ. ದೊಡ್ಡ ದೊಡ್ಡ ಮರಬಡ್ಡೆಯನ್ನೇ ಬುಡಮೇಲು ಮಾಡಿ ನೈಸರ್ಗಿಕ ಸಂಪತ್ತು ಕರಗಿಸಲಾಗುತ್ತಿದೆ. ಈ ಎಲ್ಲಾ ಜಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಪಟಗುಪ್ಪ, ಬಟ್ಟೆಮಲ್ಲಪ್ಪ, ಗಡಿಕಟ್ಟೆ ಗ್ರಾಮದಲ್ಲಿ ಚೆಕ್ ಪೋಸ್ಟ್ ನಿರ್ಮಿಸಬೇಕು. ಪ್ರಾಮಾಣಿಕ ಅಧಿಕಾರಿಗಳನ್ನ ಚೆಕ್ ಪೋಸ್ಟ್ ನಲ್ಲಿ ನೇಮಿಸಬೇಕು.
ಸ್ಟಾಕ್ ಯಾರ್ಡ್ ಮತ್ತು ವೇಬ್ರಿಡ್ಜ್ ನಲ್ಲಿ ಸಿಸಿ ಟಿವಿ ನಿರ್ಮಿಸದೆ ಇರುವ ಗುತ್ತಿಗೆದಾರನಿಗೆ ಟಡರ್ ಕ್ಯಾನ್ಸಲ್ ಮಾಡಬೇಕು. ನದಿಯಂಚಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ರಸ್ತೆಗಳಿಗೆ ಅಡ್ಡಲಾಗಿ ಕಂದಕ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಎಚ್ಚರಿಸಲಾಗಿದೆ.
ಇದನ್ನೂ ಓದಿ-https://suddilive.in/archives/2099
