ಸ್ಥಳೀಯ ಸುದ್ದಿಗಳು

ಮಹಿಳೆಯಿಂದ ಅಲ್ಲಾಹೋ ಅಕ್ಬರ್ ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ಸಚಿವ ಈಶ್ವರಪ್ಪನವರ ಭಾಷಣದ ವೇಳೆ ಮಹಿಳೆಯೋರ್ವಳು ಅಲ್ಲಹೋ ಅಕ್ಬರ್ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.

ನಗರದ ಶಿವಪ್ಪ ನಾಯಕ ವೃತ್ತದ ಬಳಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗಾಗಿ ಸಹಿ ಹಂಚುವ ಕಾರ್ಯಕ್ರಮ ನಡೆದಿತ್ತು. ಕಾರ್ಯಮದ ಮಧದಯದಲ್ಲಿ ವಾಹನದಲ್ಲಿ ಬಂದ ಮಹಿಳೆ ಅಲ್ಲಾಹೋ ಅಕ್ಬರ್ ಎಂದು ಘೋಷಣೆ ಕೂಗಿದ್ದಾಳೆ.

ಸರಿ ದಾರಿ ಬಿಡಮ್ಮ ಎಂದರೂ ಇನ್.ಸ್ಪೆಕ್ಟರ್ ನ್ನ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾಳೆ. ನಂತರ ಕೋಟೆ ಪೊಲೀಸರು‌ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಈ ಸುದ್ದಿ ಕಾಡ್ಗಿಚ್ಚನಂತೆ ಹರಡುತ್ತಿದೆ.

ಹಿಂದು ಕಾರ್ಯಕರ್ತರಿಂದ ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.ಅದೇ ದಾರಿಯಲ್ಲಿ ಬಂದ ಮುಸ್ಲಿಂ ‌ಮಹಿಳೆಯಿಂದ ಅಲ್ಲಾಹೋ‌ ಅಕ್ಬರ್ ಘೋಷಣೆ ಕೂಗಿದ್ದಾರೆ. ನೀವು ಮೋದಿ‌ ಪರ ಕೆಲಸ ಮಾಡ್ತಿದ್ದೀರಾ ಎಂದು ಮುಸ್ಲಿಂ ಮಹಿಳೆಯಿಂದ ಪೊಲೀಸರಿಗೆ ಆವಾಜ್ ಹಾಕಿದ್ದಾಳೆ.

ಸ್ಥಳದಲ್ಲಿದ್ದ ಹಿಂದು ಕಾರ್ಯಕರ್ತರಿಂದ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.ಪ್ರತಿಯೊಬ್ಬರಿಂದಲೂ ಜೈಶ್ರೀರಾಮ್ ಘೋಷಣೆ ಕೂಗಿದ್ದಾಳೆ. ಮುಸ್ಲಿಂ ಮಹಿಳೆ ಬಂಧಿಸುವಂತೆ ಬಿಜೆಪಿ ಮುಖಂಡ ಕಾಂತೇಶ್ ಅವರಿಂದ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮುಸ್ಲಿಂ ಮಹಿಳೆ ನ್ಯೂಸೆನ್ಸ್ ಮಾಡ್ತಿದ್ದರೂ ಸುಮ್ಮನಿದ್ದೀರಾ ಎಂದ ಕಾಂತೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮುಸ್ಲಿಂ ಮಹಿಳೆಯನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕರೆದೊಯ್ದಿದ್ದಾರೆ.

ಎಸ್ಪಿ ಸ್ಪಷ್ಟನೆ

ಈ ಕುರಿತು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಮಹಿಳೆ ಮೆಂಟಲಿ ಅನ್ ಸ್ಟೇಬಲ್ ಇದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ. ಮಾನಸಿಕ ರೋಗಕ್ಕೆ ಆಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಕುಟುಂಬ ತಿಳಿಸಿದೆ ಎಂದರು.

ಇದನ್ನೂ ಓದಿ-https://suddilive.in/archives/7430

Related Articles

Leave a Reply

Your email address will not be published. Required fields are marked *

Back to top button