ಸ್ಥಳೀಯ ಸುದ್ದಿಗಳು

ಹೊಸವರ್ಷಾಚರಣೆಗೆ ಮುಂಜಾಗೃತ ಕ್ರಮಕ್ಕೆ ಎಸ್ಪಿ ಸೂಚನೆ

ಸುದ್ದಿಲೈವ್/ಶಿವಮೊಗ್ಗ

ಹೊಸ ವರ್ಷಾಚರಣೆಗೆ ಜಿಲ್ಲಾ‌ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಕೆಲ ಪ್ರಮುಖ ಅಂಶಗಳನ್ನ ಅನುಸರಿಸಲು ಸಭೆ ತೀರ್ಮಾನಿಸಿದೆ.‌ ಶಿವಮೊಗ್ಗ ನಗರದ ಹೋಟೆಲ್, ಕ್ಲಬ್ ಮತ್ತು ರೆಸೋರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯಲ್ಲಿ, ಕೆಲ ಸೂಚನೆಗಳನ್ನ ಎಸ್ಪಿ ಅವರು ನೀಡಿದ್ದಾರೆ.

1) ಹೊಸ ವರ್ಷ ಆಚರಣೆ ಸಮಾರಂಭವನ್ನು ಆದಷ್ಟೂ ಶಿಸ್ತಿನಿಂದ, ಮಿತಿಯ ಒಳಗೆ ಆಚರಿಸಿ, ಮಿತಿಯನ್ನು ಮೀರಿದ್ದಲ್ಲಿ ಅಪಘಾತಗಳು ನಡೆಯುವ ಸಂಭವವಿರುತ್ತದೆ ಮತ್ತು ಸಂಭ್ರಮಾಚರಣೆಯನ್ನು ಬೆಳಗಿನ ಜಾವ 01:00 ಗಂಟೆಯ ಒಳಗಾಗಿ ಮುಕ್ತಾಯಗೊಳಿಸಲಾಗುವುದು.

2) ವಾಹನ ಸವಾರರ ಸುರಕ್ಷತೆಯ ದೃಷ್ಠಿಯಿಂದ ಮಧ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡದೇ, ಮಧ್ಯಪಾನ ಮಾಡದೇ ಇರುವವರು ಮಾತ್ರ ವಾಹನ ಚಾಲನೆ ಮಾಡುವಂತೆ ಸೂಚನೆ ನೀಡಲಾಯಿತು.‌

3) ಘನ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಹೊರಾಂಗಣದ ಸಂಭ್ರಮಾಚರಣೆಗಳಲ್ಲಿ ರಾತ್ರಿ 10 ಗಂಟೆಯ ವರೆಗೆ ನಿಗದಿ ಪಡಿಸಿದ ಶಬ್ದ ಮಿತಿಯ ಒಳಗೆ ಸೌಂಡ್ ಸಿಸ್ಟಂ ಗಳನ್ನು ಬಳಸುವುದು ಮತ್ತು ರಾತ್ರಿ 10 ಗಂಟೆಯ ನಂತರ ಕೇವಲ ಒಳಾಂಗಣ ಸಂಭ್ರಮಾಚರಣೆಗಳಲ್ಲಿ ಮಾತ್ರ ಶಬ್ದದ ಮಿತಿಯ ಒಳಗೆ ಸೌಂಡ್ ಸಿಸ್ಟಂ ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.‌

4) ಹೊಸ ವರ್ಷ ಆಚರಣೆ ಸಮಾರಂಭದ ಆಯೋಜಕರು, ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು, ಕಾನೂನುನಿನ ಚೌಕಟ್ಟಿನ ಒಳಗೆ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಭ್ಯಂತರವಿರುದಿಲ್ಲ ಮತ್ತು ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸಬಾರದು.

5) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವವರ ಸುರಕ್ಷತೆಯ ದೃಷ್ಠಿಯಿಂದ, ಅಪಾಯವಿರುವ ಸ್ಥಳಗಳಾದ ಮೇಲಂತಸ್ತು (ಟಾಪ್ ರೂಫ್) ಗಳಲ್ಲಿ ಮತ್ತು ಎತ್ತರವಾದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡವುದು ಸೂಕ್ತವಿರುವುದಿಲ್ಲ. ಆದ್ದರಿಂದ ಎಲ್ಲಾ ಸುರಕ್ಷತಾ ನಿಯಮಗಳನ್ನು ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಸುರಕ್ಷಿತವಾದ ಸ್ಥಳಗಳಲ್ಲಿಯೇ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು.

6) ಸಾರ್ವಜನಿಕರ ಹಿತ ದೃಷ್ಠಿಯಿಂದ, ಸಂಭ್ರಮಾಚರಣೆಯನ್ನು ಕಾರ್ಯಕ್ರಮ ಆಯೋಜಿಸಿರುವ ಸ್ಥಳದ ಹೊರಗಡೆ, ರಸ್ತೆಬದಿಗಳಲ್ಲಿ ಮಾಡದೇ, ನಿಗದೀಪಡಿಸಿರುವ ಸ್ಥಳದ ಒಳಗಡೆಯೇ ಮಾಡುವಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಆಯೋಜಕರ ಜವಬ್ದಾರಿಯಾಗಿರುತ್ತದೆ.

7) ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ  ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿಗಳಾದ  ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್, ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಹೋಟೆಲ್, ಕ್ಲಬ್ ಮತ್ತು ರೆಸೋರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5682

Related Articles

Leave a Reply

Your email address will not be published. Required fields are marked *

Back to top button