ಆಟೋದಲ್ಲಿ ಆಯುಧಗಳೊಂದಿಗೆ ಆಟೋದಲ್ಲಿ ಬಂದ ಗುಂಪೊಂದು ಯುವಕನ ಮೇಲೆ ಹಲ್ಲೆಗೆ ಯತ್ನ!

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ರಾತ್ರಿ ಆಟೋದಲ್ಲಿ ಬಂದ ಯುವಕರಿಂದ ಬಾಲರಾಜ ಅರಸ್ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನ ಮೇಲೆ ಮಾರಕಾಸ್ತ್ರದೊಂದಿಗೆ ಹಲ್ಲೆ ನಡೆಸಿದ್ದು, ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನ್ಯ ಕೋಮಿನ ಯುವಕರಿಂದ ಯುವಕನ ಮೇಲೆ ಹಲ್ಲೆಗೆ ಯತ್ನ ನಡೆದಿದ್ದರೂ, ಆಯುಧಗಳನ್ನ ಹಿಡಿದುಕೊಂಡು ಬಂದು ಬೆದರಿಸಿ ಮೊಬೈಲ್ ಕಿತ್ತುಕೊಳ್ಳುವ ಯತ್ನ ನಡೆದಿದೆ ಎನ್ನಲಾಗಿದೆ.ಯುವಕನ ಮೇಲೆ ಮೂವರಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ಬಲಾಗಿದೆ. ನಿನ್ನೆ ತಡರಾತ್ರಿ ಬಾಲರಾಜ್ ಅರಸ್ ರಸ್ತೆಯ ರೈಸ್ ಬೌಲ್ ಹೋಟೆಲ್ ಬಳಿ ನಡೆದಿದೆ.
ಹಲ್ಲೆ ನಡೆಸಿದ ಮೂವರು ಯುವಕರಿಂದ ಹಲ್ಲೆಗೆ ಯತ್ನಿಸಲಾಗಿದೆ ಹಲ್ಲೆ ನಡೆಸಿದ ಮೂವರಲ್ಲಿ ಓರ್ವನನ್ನ ಮೊಹಮ್ಮದ್ ರಹೀದ್, ಮೊಹ್ಮದ್ ಇದ್ರಿಸಿ ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಬೇಕಿದೆ ತಪ್ಪಿಸಿಕೊಂಡು ಓಡಿ ಹೋದ ಯುವಕನನ್ನ ಯತೀಶ್ ಎಂದು ಗುರುತಿಸಲಾಗಿದೆ. ಆಟೋದಲ್ಲಿ ಆಯುಧಗಳೊಂದಿಗೆ ಬಂದ ಯುವಕರು ಯತೀಶನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಗಾಂಜಾ ನಶೆಯಲ್ಲಿದ್ದ ಯುವಕರಿಂದ ಹಲ್ಲೆಗೆ ಯತ್ನ ನಡೆದಿರಬಹುದು ಎನ್ಬಲಾಗಿದೆ. ಆಟೋದಲ್ಲಿ ಬಂದವರು ಚಿಕ್ಕಲ್ ಯುವಕರು ಎಂದು ಗುರುತಿಸಲಾಗಿದೆ. ಬಾಪೂಜಿ ನಗರದ ನಿವಾಸಿ ಯತೀಶ್ ನದ್ದು ಎನ್ಬಲಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟಪಡಿಸಬೇಕಿದೆ. ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1527
