ಪೊಲೀಸ್ ಇನ್ ಸ್ಪೆಕ್ಟರ್ ಗಳ ಕೊರತೆಯನ್ನ ಎದುರಿಸುತ್ತಿದೆಯಾ ಶಿವಮೊಗ್ಗ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ಎರಡು ಠಾಣೆಗಳಲ್ಲಿ ಪಿಐಗಳು ಇಲ್ಲ. ಜಿಲ್ಲೆಯ ಸಾಗರ ಗ್ರಾಮಾಂತರ ವೃತ್ತ ಕಚೇರಿಯ ಸಿಪಿಐಗಳಿಲ್ಲದಂತಾಗಿದೆ. ಇರುವ ಅಧಿಕಾರಿಗಳ ಮೇಲೆ ಹೆಚ್ಚಿನ ಜವಬ್ದಾರಿ ನೀಡಲಾಗಿದೆ.
ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ಪಿಐ ಇಲ್ಲದೆ ತಿಂಗಳುಗಳೆ ಕಳೆದಿವೆ. ಮಹಿಳಾ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಭರತ್ ಗೆ ಹೆಚ್ಚಿನ ಜವಬ್ದಾರಿ ನೀಡಲಾಗಿದೆ. ಕೋಟೆ ಪೊಲೀಸ್ ಠಾಣೆಯ ಪಿಐ ಶಿವಪ್ರಸಾದ್ ಮಂಡ್ಯಕ್ಕೆ ವರ್ಗಾವಣೆಯಾಗಿ ವಾರ ಕಳೆದಿದೆ ದೊಡ್ಡಪೇಟೆ ಪೊಲೀಸ್ ಇನ್ ಸ್ಪೆಕ್ಟರ್ ಅಂಜನ್ ಕುಮಾರ್ ಗೆ ಜವಬ್ದಾರಿ ನೀಡಲಾಗಿದೆ.
ಈಗಾಗಲೇ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಅಂಜನ್ ಕುಮಾರ್ ಸಹ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಅವರಿಗೆ ರಿಲಿವರ್ ಇನ್ನೂ ಪ್ರಕಟವಾಗಿಲ್ಲ. ಇವರು ವರ್ಗಾವಣೆಯಾದರೆ ಪಿಐ ಇಲ್ಲದ ಠಾಣೆಗೆ ಮತ್ತೊಂದು ಠಾಣೆ ಸೇರ್ಪಡೆಗೊಳ್ಳಲಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಸನದ ಲೋಕಾಯುಕ್ತದಲ್ಲಿದ್ದ ಸತ್ಯನಾರಾಯಣರವರು ಪಿಐ ಆಗಿ ಕರ್ತವ್ಯ ವಹಿಸಿಕೊಂಡಿದ್ದಾರೆ.
ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಸಹ ಖಾಲಿಯಾಗಿತ್ತು. ಅಲ್ಲಿಗೂ ಈಗ ಪಿಐ ಬಂದಿದ್ದಾರೆ. ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ಕಚೇರಿಯಲ್ಲಿ ಸಿಪಿಐ ಇಲ್ಲದೆ 15 ದಿನಗಳು ಕಳೆದಿವೆ. ಇನ್ನೂ ಯಾರು ಸಿಪಿಐ ಎಂಬುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಪಿಐ ಮತ್ತು ಸಿಪಿಐ ಗಳನ್ನ ಶಿವಮೊಗ್ಗ ಜಿಲ್ಲೆ ಎದುರಿಸುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.
ಇದನ್ನೂ ಓದಿ-https://suddilive.in/archives/2021
