ಸ್ಥಳೀಯ ಸುದ್ದಿಗಳು

ನಗರದಲ್ಲಿ ವಿವಿಧೆಡೆ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ನಿಲುಗಡೆ ಆದೇಶ

ವೆಂಕಟೇಶ್ವರ ಸ್ವೀಟ್ ಹೌಸ್ ನಿಂದ ಜ್ವರಾರಿ ಮೆಡಿಕಲ್ ಶಾಪ್ ವರೆಗೆ ನಿಲುಗಡೆ ನಿಷೇಧ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್‍ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್ ಗಳ ಪಾರ್ಕಿಂಗ್‍ಗೆ ಕೆಳಕಂಡಂತೆ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ ಹೊರಡಿಸಿ ಕೆಳಕಂಡಂತೆ ಆದೇಶ ನೀಡಿರುತ್ತಾರೆ.

ಅದರಂತೆ ಎಎ ವೃತ್ತದ ಬಳಿ ವೆಂಕಟೇಶ್ವರ ಸ್ವೀಟ್ ನಿಂದ ಜ್ವರಾರಿ ಮೆಡಿಕಲ್ ಶಾಪ್ ಬಳಿ ವಾಹನಗಳ ದಟ್ಟಣೆ ಹಿನ್ನಲೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯ ನಿಷೇಧ ಮಾಡುವಂತೆ ಡಿಸಿಗೆ ಸಲ್ಲಿಸಿದ ಮನವಿಯ ಮೇರೆಗೆ ಈ ಪ್ರದೇಶದಲ್ಲಿ ಪಾಂರ್ಕಿಂಗ್ ನಿಷೇಧಿಸಿ ಆದೇಶಿಸಿದ್ದಾರೆ.

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್) ಸ್ಥಳ

ಬಸವೇಶ್ವರ (ಡಿವಿಎಸ್) ಸರ್ಕಲ್‍ನ ಸುತ್ತ 50 ಮೀ, ಮಹಾವೀರ ಸರ್ಕಲ್‍ನ ಸುತ್ತ 50 ಮೀ., ಶಿವಮೂರ್ತಿ ಸರ್ಕಲ್ ಸುತ್ತ 50 ಮೀ, ಅಕ್ಕಮಹಾದೇವಿ (ಉಷಾ ನರ್ಸಿಂಗ್ ಹೋಂ) ಸರ್ಕಲ್ ಸುತ್ತ 50 ಮೀ ಹಾಗೂ ಕಮಲಾ ನರ್ಸಿಂಗ್ ಹೋಂನಿಂದ ಗಾಂಧಿನಗರ ಕ್ರಾಸ್‍ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.

ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)

ಮೋರ್ ಸೂಪರ್ ಮಾರ್ಕೇಟ್‍ನಿಂದ ಶಿವಮೊಗ್ಗ ಡ್ರಗ್ ಹೌಸ್‍ವರೆಗೆ ಎಡಬದಿ, ಪದ್ಮ ಜ್ಯೂವೆಲ್ಲರಿ ಯಿಂದ ಸುಶೋಧ ಆಸ್ಪತ್ರೆವರೆಗೆ ಎಡಬದಿ ಮತ್ತು ವಿಜಯ ಕಾಂಪ್ಲೇಕ್ಸ್ ನಿಂದ ಬೀಬಾ ಶಾಪ್‍ವರೆಗೆ ಬಲಬದಿ ದ್ವಿ-ಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.

ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)

ಚನ್ನಪ್ಪ ಲೇಔಟ್ 2ನೇ ಕ್ರಾಸ್ ಯಿಂದ ಕಮಲಾ ನರ್ಸಿಂಗ್ ಹೋಂವರೆಗೆ ಎಡಬದಿ, ವೆಸ್ಟ್‍ಸೈಡ್ ಕಾಂಪ್ಲೇಕ್ಸ್ (ಜಯನಗರ 2ನೇ ಪ್ಯಾರಲಲ್ ರಸ್ತೆ) ನಿಂದ ಫೈರ್ ಫಾಕ್ಸ್ ಸೈಕಲೋತ್ಸವವರೆಗೆ ಬಲಬದಿ ಕಾರ್‍ಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

ವೆಂಕಟೇಶ್ವರ ಸ್ವೀಟ್ ಹೌಸ್ ನಿಂದ ಜ್ವರಾರಿ ಅಂಗಡಿಯ ವರೆಗೆ ಪಾರ್ಕಿಂಗ್ ನಿಷೇಧ

ಬಿ.ಹೆಚ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಎಎ ಸರ್ಕಲ್ ನಿಂದ ಶಿವಪ್ಪನಾಯಕ ಸರ್ಕಲ್ ವರೆಗೆ ಎಡಭಾಗದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ.

ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಎ ಸರ್ಕಲ್ ನಿಂದ ಶಿವಪ್ಪನಾಯಕ ಸರ್ಕಲ್ ವರೆಗಿನ ರಸ್ತೆಯಲ್ಲಿ ಎಲ್ಲಾ ಬಗೆಯ ವ್ಯಾಪಾರದ ಅಂಗಡಿಗಳು ಇರುವುದರಿಂದ ಶಿವಮೊಗ್ಗ ನಗರದ ಮತ್ತು ಇತರೆ ಹೊರ ಜಿಲ್ಲೆಗಳಿಂದ ಪ್ರತಿದಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುವುದರಿಂದ ಹಾಗೂ ಸದರಿ ರಸ್ತೆಯು ಕಿರಿದಾಗಿದ್ದು ಸದರಿ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ಹಾಗೂ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ರಸ್ತೆಯಲ್ಲಿ ಅಧಿಕ ವಾಹನ ದಟ್ಟಣೆ ಉಂಟಾಗಿ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿರುತ್ತದೆ. ಈ ಹಿನ್ನಲೆಯಲ್ಲಿ ” ಎಎ ಸರ್ಕಲ್ ನ ವೆಂಕಟೇಶ್ವರ ಸ್ವೀಟ್ ಹೌಸ್ ನಿಂದ ಜ್ವರಾರಿ ಮೆಡಿಕಲ್ ಶಾಪ್ ವರೆಗೆ ರಸ್ತೆಯ ಎಡಭಾಗದಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ ಮಾಡಲು ಅಧಿಸೂಚನೆಯನ್ನು ಹೊರಡಿಸುವಂತೆ ಕೋರಲಾಗಿತ್ತು.

ಪೂರ್ವ ಸಂಚಾರಿ ಪೊಲೀಸರ ಮನವಿಯನ್ನ ಪರಿಶೀಲಿಸಿದ ಡಿಸಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಈ ಪ್ರದೇಶದಲ್ಲಿ ಪಾರ್ಕಿಂಗ್ ನಿಷೇಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4897

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373