ಪಟಾಕಿ ಸಿಡಿದು ಓರ್ವ ಸಾವು, ಮೂವರು ಶಿವಮೊಗ್ಗಕ್ಕೆ ದಾಖಲು

ಸುದ್ದಿಲೈವ್/ಶಿವಮೊಗ್ಗ/ಚಿಕ್ಕಮಗಳೂರು

ಪಟಾಕಿ ಸಿಡಿದು ಓರ್ವ ಯುವಕ ಸಾವುಕಂಡರೆ, ಮೂವರು ಮಕ್ಕಳು ಶಿವಮೊಗ್ಗದ ಮೆಗ್ಗಾನ್ ಮತ್ತು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ಚಿಕ್ಕಮಗಳೂರು ತಾಲೂಕಿನ ತರೀಕೆರೆ ತಾಲೂಕಿನ ಸುಣ್ಣದ ಹಳ್ಳಿ ಗ್ರಾಮದಲ್ಕಿ ಸಂಭವಿಸಿದೆ.
ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಯುವಕ ಹಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಚೇರ್ ಕೆಳಗೆ ಪಟಾಕಿ ಇಟ್ಟುಕೊಂಡು ಕೂತಿದ್ದ ಯುವಕ ಸಿಡಿದ ಪಟಾಕಿಯ ಕಿಡಿ ಹಾರಿ ಬಂದು ಚೇರ್ ಕೆಳಗಿನ ಪಟಾಕಿ ಸಿಡಿಯುವಂತಾಗಿ ಅವಘಡ ಸಂಭವಿಸಿದೆ.
ಸಾವನ್ನಪ್ಪಿದವನನ್ನ ಪ್ರದೀಪ್ (30) ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ರಾತ್ರಿ ಘಟನೆ ನಡೆದಿದೆ. ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ಯುವಕ ಪಟಾಕಿ ಸಿಡಿಯುತ್ತಿದ್ದಂತೆ ಮೇಲೆ ಹಾಕಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ.
ಪಟಾಕಿ ಸಿಡಿದ ಕಿಡಿ ಚೀಲದಲ್ಲಿದ್ದ ಪಟಾಕಿಗೆ ತಾಗಿ ದುರ್ಘಟನೆ ನಡೆದಿದೆ ಎನ್ನಲಗಿದೆ. ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರವಾದ ಹೊಡೆತ ಬಿದ್ದ ಪರಿಣಾಮ ಪ್ರದೀಪ್ ಸಾವು ಕಂಡಿದ್ದಾನೆ. ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು ಮೂವರು ಮಕ್ಕಳಿಗೂ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಲು ಆಟಂಬಾಂಬ್ ಪಟಾಕಿ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿ ಆಗಿವೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಟಾಕಿ ಸಿಡಿಸಲು ನೋಡಲು ಹೋಗಿದ್ದ 12 ವರ್ಷದ ಬಾಲಕ, ಈತನ ಜೊತೆಗೆ ಇದ್ದ 14 ವರ್ಷದ ಬಾಲಕರನ್ನ ಮೆಗ್ಗಾನ್ ಗೆ ದಾಖಲಾಗಿದ್ದಾರೆ. 15 ವರ್ಷದ ಮತ್ತೋರ್ವ ಬಾಲಕನಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇದನ್ನೂ ಓದಿ-https://suddilive.in/archives/3097
