ಸ್ಥಳೀಯ ಸುದ್ದಿಗಳು

ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸಿಕೊಂಡಾಗ ಸಾರ್ಥಕ-ಎಸ್.ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಹೀಗೆ ಬಳಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರಣೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ನುಡಿದರು.

ಶಿವಮೊಗ್ಗ ಸ್ಪಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಲಾಗಿರುವ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಹಾಗೂ ಸಾರ್ವಜನಿಕ ಬೈಸಿಕಲ್ ಯೋಜನೆಯನ್ನು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸಿ ಅವರು ಮಾತನಾಡಿದರು.

ಜನರು ಕಟ್ಟುವ ಕಂದಾಯದ ಹಣದಿಂದಲೇ ನಿರ್ಮಾಣವಾಗಿರುವ ಸ್ಮಾರ್ಟ್‍ಸಿಟಿ ಯೋಜನೆಗಳ ಜವಾಬ್ದಾರಿ ನಮ್ಮೆಲ್ಲರ ಮೇಲೆ ಹಾಗೂ ಸಾರ್ವಜನಿಕರ ಮೇಲಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲರೂ ಪಡೆಯಬೇಕು.

ಸಾರ್ವಜನಿಕರು ತುಂಗಾ ನದಿ ಉದ್ಯಾನವನದಲ್ಲಿ ಓಡಾಡಬೇಕು. ಆಗ ಮಾತ್ರ ಉದ್ಯಾನವನ ನಿರ್ಮಾಣ ಸಾರ್ಥಕವಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.50.50 ಅನುದಾನದಲ್ಲಿ ಕೆಲಸಗಳು ನಡೆದಿದ್ದು, ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್‍ನ್ನು ರೂ.103 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಸಾರ್ವಜನಿಕರು ಈ ಯೋಜನೆಗಳನ್ನು ತಮ್ಮ ಆಸ್ತಿ ಎಂದು ಅರಿತು ಸ್ವಚ್ಚತೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು. ಉದ್ಯಾನವನದಲ್ಲಿ ಮಹಿಳೆಯರು, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣಾ ವ್ಯವಸ್ಥೆ, ಸಿಸಿಟಿವಿ ಅವಳವಡಿಸುವುದು, ರಾತ್ರಿ ವೇಳೆ ವಿದ್ಯುದ್ದೀಪ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ನೊಡಿಕೊಳ್ಳಬೇಕು ಎಂದರು.

ಉದ್ಯಾನವನ ನಿರ್ವಹಣೆಗಾಗಿ ಸಾರ್ವಜನಿಕರಿಗೆ ಹೊರೆಯಾಗದಂತೆ ಪ್ರವೇಶ ಶುಲ್ಕ ತೆಗೆದುಕೊಳ್ಳುವ ಬಗ್ಗೆ ಸ್ಮಾರ್ಟ್‍ಸಿಟಿ ಎಂಡಿ ಯವರು ನಿರ್ಧರಿಸುವರು. ಇಲ್ಲಿ ಹಸಿರು, ಸ್ವಚ್ಚತೆ, ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನಿಡಬೇಕು. ಅಂಗಡಿ, ಜಾಹಿರಾತು, ಮಳಿಗೆಗಳಿಗೆ ಅವಕಾಶ ನೀಡಿ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು. ಹಾಗೂ ಉತ್ತಮವಾಗಿ ನಿರ್ವಹಣೆ ಮಾಡಬೇಕೆಂದು ಹೇಳಿದರು.

ನಗರದ ಹೃದಯಭಾಗ ಶಿವಪ್ಪನಾಯಕ ವೃತ್ತದಲ್ಲಿ ಪಾಲಿಕೆಗೆ ಹೊಂದಿಕೊಂಡಂತೆ ಹೂವು ಹಣ್ಣು ಮಾಕುಟ್ಟೆಗಾಗಿ 118 ಮಳಿಗೆ, ಮಲ್ಟಿಲೆವೆಲ್ ಕಾರ್‍ಪಾರ್ಕಿಂಗ್‍ಗೆ ಒಟ್ಟು 172 ಕಾರು ಮತ್ತು 78 ಬೈಕ್ ನಿಲುಗಡೆಗೆ ವ್ಯವಸ್ಥೇ ಮಾಡಲಾಗಿದೆ.

ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಸ್ಮಾರ್ಟ್‍ಸಿಟಿ ಕಾಮಗಾರಿಗಳು ಉತ್ತಮವಾಗಿ ಆಗಿದ್ದು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕಾರ್ಯ ನಡೆದಿದೆ. ಈ ಸ್ಪಾರ್ಟ್‍ಸಿಟಿ ಯೋಜನೆ ಮಂಜೂರಾತಿ ಮತ್ತು ಅನುಷ್ಟಾನದಲ್ಲಿ ಅನೇಕರ ನಾಯಕರ ಪ್ರಯತ್ನ ಮತ್ತು ಶ್ರಮವಿದೆ.

ನಗರದ 6 ವಾರ್ಡ್‍ಗಳಲ್ಲಿ ಪೂರ್ಣ ಪ್ರಮಾಣ ಮತ್ತು 9 ವಾರ್ಡುಗಳಲ್ಲಿ ಭಾಗಶಃ ಸ್ಮಾರ್ಟ್‍ಸಿಟಿ ಕೆಲಸಗಳು ಆಗಿವೆ. ಮುಂದಿನ ಹಂತದಲ್ಲಿ ಇತರೆ ವಾರ್ಡುಗಳನ್ನು ಪರಿಗಣಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಮಹಾನಗರಪಾಲಿಕೆ ಮಾಜಿ ಸದಸ್ಯ ಯೋಗೇಶ್, ಗನ್ನಿ ಶಂಕರ್, ಧೀರರಾಜ್ ಹೊನ್ನವಿಲೆ, ಶಬನಾ ಖಾನಂ, ಸ್ವತಂತ್ರ ನಿರ್ದೇಶಕಿ ಲಕ್ಷ್ಮಿ ಗೋಪಿನಾಥ್, ಸ್ಪಾರ್ಟ್ ಸಿಟಿ ಎಂಡಿ ಕೆ. ಮಾಯಾಣ್ಣಗೌಡ, ಮುಖ್ಯಇಂಜನಿಯರ್ ರಂಗನಾಥ ಮತ್ತು ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

ಇದನ್ನೂ ಓದಿ-https://suddilive.in/archives/7965

Related Articles

Leave a Reply

Your email address will not be published. Required fields are marked *

Back to top button